Home Crime News ಇದೆಂಥಾ ಕ್ರೌರ್ಯ: ಸಾರ್ವಜನಿಕವಾಗಿ ಅತ್ತೆ ಮೇಲೆ ಹಲ್ಲೆ ನಡೆಸಿದ ಅಳಿಯ!

ಇದೆಂಥಾ ಕ್ರೌರ್ಯ: ಸಾರ್ವಜನಿಕವಾಗಿ ಅತ್ತೆ ಮೇಲೆ ಹಲ್ಲೆ ನಡೆಸಿದ ಅಳಿಯ!

0
ಇದೆಂಥಾ ಕ್ರೌರ್ಯ:  ಸಾರ್ವಜನಿಕವಾಗಿ ಅತ್ತೆ ಮೇಲೆ ಹಲ್ಲೆ ನಡೆಸಿದ ಅಳಿಯ!
Spread the love

ಬೆಳಗಾವಿ:- ತಾಲೂಕಿನ ಮಚ್ಚೆ ಗ್ರಾಮದಲ್ಲಿ ಸಾರ್ವಜನಿಕವಾಗಿ ಬಟ್ಟೆ ಹರಿದು ಅತ್ತೆ ಮೇಲೆ ಅಳಿಯ ಹಲ್ಲೆ ಮಾಡಿರುವ ಘಟನೆ ಜರುಗಿದೆ. ಅಳಿಯ ಭೈರು ಮೇತ್ರಿ‌ ಹಾಗೂ ಕುಟುಂಬಸ್ಥರಿಂದ ಹಲ್ಲೆ ನಡೆದಿದೆ.

ಮಹಿಳೆ ಪುತ್ರಿಗೆ 12 ದಿನಗಳ ಹಿಂದೆ ಹೆರಿಗೆಯಾಗಿತ್ತು. ಗಂಡು ಮಗು ಜನಿಸುತ್ತಿದ್ದಂತೆ ಪತ್ನಿಯನ್ನು ಕಳುಹಿಸುವಂತೆ ಪತಿ ಒತ್ತಾಯ ಮಾಡುತ್ತಿದ್ದನು. 4 ತಿಂಗಳ ಬಳಿಕ ಕಳುಹಿಸ್ತೇವೆ ಎಂದು ಅತ್ತೆ, ಅಳಿಯನಿಗೆ ಹೇಳಿದ್ದಾರೆ. ಇಷ್ಟಕ್ಕೇನೆ ಅಳಿಯ, ಅತ್ತೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆ ಮತ್ತು ಇಬ್ಬರು ಬಾಲಕಿಯರು ಸೇರಿದಂತೆ ಐವರ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here