ಗದಗ: ರಾಜ್ಯ ಸರ್ಕಾರಕ್ಕೆ ಕೌಂಟರ್ ಕೊಡಲು ವಿಪಕ್ಷ ಬಿಜೆಪಿ ಬರ ಅಧ್ಯಯನ ನಡೆಸಲು ಮುಂದಾಗಿದೆ. ಗದಗ ತಾಲೂಕಿನ ನಾಗಾವಿ ಬಳಿ ಜಮೀನುಗಳಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ಬರ ಪರಿಶೀಲನೆ ನಡೆಸುತ್ತಿದ್ದು, ಮಾಜಿ ಶಾಸಕ ಕಳಕಪ್ಪ ಬಂಡಿ, ಮುಖಂಡರಾದ ಭೀಮಸಿಂಗ್ ರಾಠೋಡ, ರಾಜು ಕುರಡಗಿ ಸೇರಿದಂತೆ ಅನೇಕ ಮುಖಂಡರು ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ರೈತ ಬಸಯ್ಯ ಸಾಸ್ವಿಹಳ್ಳಿಮಠ, ರಾಜ್ಯ ಸರ್ಕಾರ ಬಿಟ್ಟಿ ಭಾಗ್ಯ ಮಾಡಿದ್ದಕ್ಕೆ ಈ ಪರಿಸ್ಥಿತಿ ಬಂದಿದೆ. ಎಲ್ಲಾ ಫ್ರೀ ಅಂದಿದ್ದಕ್ಕೆ ಹೊಲದಲ್ಲಿ ದುಡಿಯಲು ಒಂದು ಆಳು ಕೂಡಾ ಸಿಗ್ತಿಲ್ಲ ಎಂದು ಅಳಲು ತೋಡಿಕೊಂಡರು.
ಮಹಿಳಾ ಕೃಷಿ ಕೂಲಿ ಕಾರ್ಮಿಕರು ಕೆಲಸಕ್ಕೆ ಬನ್ನಿ ಅಂದ್ರೆ ದೇವಸ್ಥಾನ ನೋಡೋಕೆ ಹೋಗ್ತೀವಿ ಅಂತಾರೆ.
ಏನಾದ್ರೂ ಮಾಡಿ ಕೇಂದ್ರದಿಂದ ಅನುಕೂಲ ಮಾಡಬೇಕು. ಮೋದಿಯವರು ರೈತರ ಸಾಲ ಮನ್ನಾ ಮಾಡಿದ್ರೆ ರೈತರು ಬದುಕಿಕೊಳ್ತಾರೆ, ಇಲ್ಲದಿದ್ರೆ ಬದುಕೋವಂತಹ ಪರಿಸ್ಥಿತಿ ಉಳಿದಿಲ್ಲ.
ಮಳೆಗಾಲ ಸಂಪಾಗಿದ್ರೆ ಇನ್ನೊಬ್ಬರಿಗೆ ಅನ್ನಾ ಕೊಟ್ಟು ಸಲಹುತ್ತೇವ ಅಂತಾ ಕೈ ಎತ್ತಿ ಹೇಳ್ತೇವೆ. ಮಳೆ ಇಲ್ಲದ್ದಕ್ಕೆ ಈ ಪರಿಸ್ಥಿತಿ ಅಂತಾ ರೈತ ಬಸಯ್ಯ ಸಾಸ್ವಿಹಳ್ಳಿಮಠ ಅಳಲು ತೋಡಿಕೊಂಡರು.