ಬಿಗ್ ಬಾಸ್ ಸೀಸನ್ 12ರ ಟ್ರೋಫಿಯನ್ನು ಅಶ್ವಿನಿ ಗೌಡ ಗೆಲ್ಲಬೇಕು ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಪ್ರತಿಭಾವಂತ ಸ್ಪರ್ಧಿಗಳು ಇದ್ದಾರೆ. ಮೊದಲ ದಿನದಿಂದಲೇ ನಾನು ಶೋವನ್ನು ಗಮನಿಸುತ್ತಿದ್ದೇನೆ. ಅಶ್ವಿನಿ ಗೌಡ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ ಮತ್ತು ನನಗೆ ಇಷ್ಟವಾಗಿದ್ದಾರೆ. ಅವರು ಸ್ಟ್ರಾಂಗ್ ಸ್ಪರ್ಧಿಯಾಗಿದ್ದು, ಮಾತಿನಲ್ಲೂ ಯಾರೂ ಅವರನ್ನು ಮೀರಿಸಲು ಸಾಧ್ಯವಿಲ್ಲ.
ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಶಕ್ತಿ ಅವರಲ್ಲಿದೆ. ನನ್ನ ಅಭಿಪ್ರಾಯದಲ್ಲಿ, ಅಶ್ವಿನಿಯೇ ಗೆಲ್ಲಬೇಕು. ಅಲ್ಲದೆ, ಗಿಲ್ಲಿ ಕೂಡ ಚೆನ್ನಾಗಿ ಆಟವಾಡುತ್ತಿದ್ದಾರೆ. ಈ ಸೀಸನ್ ಅತ್ಯಂತ ರೋಚಕವಾಗಿ ಅಶ್ವಿನಿ ಗೌಡ ಮತ್ತು ಗಿಲ್ಲಿಯ ಮೇಲೆ ನಿಂತಿದೆ ಎಂದು ಸ್ನೇಹಿತ್ ಹೇಳಿದ್ದಾರೆ.



