ಬೆಂಗಳೂರು: ಮಾತುಕತೆಗೆ ಎಂದು ಕರೆಸಿ ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪ ಕೇಲೀ ಬಂದಿದೆ. ಮಹಮ್ಮದ್ ಶಕೀಲ್ ಕೊಲೆಯಾದ ವ್ಯಕ್ತಿಯಾಗಿದ್ದು, ಬೆಂಗಳೂರಿನ ಕೆ. ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹಮ್ಮದ್ ಶಕೀಲ್ ಮತ್ತು ರಜೀಯಾ ಸುಲ್ತಾನಾ ಎಂಬ ದಂಪತಿ ನಡುವೆ ಕೌಟುಂಬಿಕ ಕಲಹದ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು..
ಈ ನಡುವೆ ಮಾತುಕತೆಗೆ ಎಂದು ಕೆಜಿ ಹಳ್ಳಿಯ ಬಿಲಾಲ್ ಮಸೀದಿ ಬಳಿಯ ಎಂಎಂ ಅಪಾರ್ಟ್ಮೆಂಟ್ ನ ಬೇಸ್ಮೆಂಟ್ ಗೆ ಕರೆದಿದ್ರು. ಈ ವೇಳೆ ಮಹಮ್ಮದ್ ಶಕೀಲ್ ಜೊತೆಗೆ ಮಾತನಾಡುವಾಗ ಮತ್ತೆ ಗಲಾಟೆ ಆರಂಭವಾಗಿದ್ದು, ಜಬೀಉಲ್ಲಾ ಖಾನ್, ಇಮ್ರಾನ್ ಖಾನ್, ಮತ್ತು ಫಯಾಜ್ ಖಾನ್ ರಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ.
ಹೆಲ್ಮೆಟ್ ನಿಂದ ಹೊಡೆದು ಗುದ್ದಿ ಮತ್ತು ಕಾಲಿನಿಂದ ಒದ್ದು ಹಲ್ಲೆ ಮಾಡಲಾಗಿದಿಯಂತೆ. ಹಲ್ಲೆ ಹಿನ್ನೆಲೆ ಕುಸಿದು ಬಿದ್ದಿದ್ದ ಶಕೀಲ್ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


