ಬೆಂಗಳೂರು: ಬೆಂಗಳೂರು ಬಿಟಿಎಂ ಲೇ ಔಟ್ ನಲ್ಲಿ ತಡರಾತ್ರಿ ಯುವತಿಗೆ ಮೂವರು ಪುಂಡರು ಕಿರುಕುಳ ನೀಡಿರುವ ಘಟನೆ ನಡೆದಿದ್ದು, ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಸುಮಾರು 2 ಕಿಲೋಮೀಟರ್ ರಸ್ತೆ ದೂರವರೆಗೂ ನಡೆದಿದ್ದು, ಯುವತಿಯನ್ನು ಒಂದೇ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಲಾಗಿದೆ.
ವೈರಲ್ ವಿಡಿಯೋದಲ್ಲಿ, ಮುಂದೆ ಹೋಗುತ್ತಿದ್ದ ಯುವತಿಯನ್ನು ಹಿಂದಿನಿಂದ ಬಂದ ಮೂವರು ಯುವಕರು ಒಂದೇ ಬೈಕ್‌ನಲ್ಲಿ ಹಿಂಬಾಲಿಸುತ್ತಿರುವುದು, ಮತ್ತು ಹೆಲ್ಮೆಟ್ ಕೂಡ ಧರಿಸದೇ ಅಡ್ಡಾದಿಡ್ಡಿ ಚಾಲನೆ ಮಾಡಿದ ಪುಂಡರು ಬೇಕು ಅಂತಲೇ ಯುವತಿಯ ಸ್ಕೂಟಿಯ ಮುಂದೆ ಹೋಗಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಚಾಲನೆ ಮಾಡಿದ್ದಾರೆ.
ಅಲ್ಲದೇ 2 ಕಿ.ಮೀ ಯುವತಿಯನ್ನು ಫಾಲೋ ಮಾಡಿದ್ದಾರೆ. ಇದೇ ವೇಳೆ ಹಿಂಬದಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಯುವತಿಗೆ ಕಿರುಕುಳ ನೀಡುತ್ತಿರುವ ವೀಡಿಯೋ ಸೆರೆ ಹಿಡಿದು ಎಕ್ಸ್ನಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಸದ್ಯ ಸುದ್ದುಗುಂಟೆ ಪಾಳ್ಯ ಪೊಲೀಸರು ಈ ವೀಡಿಯೋಗೆ ಎಕ್ಸ್ನಲ್ಲಿ ಉತ್ತರಿಸಿದ್ದಾರೆ. ಕಿರುಕುಳ ನೀಡಿದ ಪುಂಡರ ಬೈಕ್ ನಂಬರ್ ಪತ್ತೆ ಮಾಡಿದ್ದು, ಮೂವರನ್ನು ವಿಚಾರಣೆ ಮಾಡೋದಾಗಿ ಉತ್ತರ ನೀಡಿದ್ದಾರೆ.



