ಭಾವೈಕ್ಯತೆಗೆ ಸಾಕ್ಷಿಯಾದ ತೋಂಟದಾರ್ಯ ಜಾತ್ರೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ತೋಂಟದಾರ್ಯ ಮಠವು ಕೋಮು ಸೌಹಾರ್ದತೆ, ಭಾವೈಕ್ಯತೆಗೆ ಹೆಸರಾಗಿದ್ದು, ಸಾಕ್ಷಿ ಎನ್ನುವಂತೆ ಜಾತಿ-ಧರ್ಮಗಳ ಭೇದ-ಭಾವ ಇಲ್ಲದೆ ಪ್ರತಿವರ್ಷವೂ ಜಾತ್ರಾ ಮಹೋತ್ಸವದಲ್ಲಿ ಸರ್ವ ಧರ್ಮದವರೂ ಪಾಲ್ಗೊಳ್ಳುತ್ತಾರೆ.

Advertisement

ಜಾತ್ರಾ ಮೆರವಣಿಗೆ ನಗರದ ಜಾಮಿಯಾ ಮಸ್ಜಿದ್ ಮುಂದೆ ಬಂದಾಗ ಮಸ್ಜಿದ್‌ನ ಕಮಿಟಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ಸಿದ್ದರಾಮ ಮಹಾಸ್ವಾಮೀಜಿಯವರಿಗೆ ಫಲ-ಪುಷ್ಪ ನೀಡಿ ಗೌರವದಿಂದ ಸನ್ಮಾನಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿಯವರು ನೆನಪಿನ ಕಾಣಿಕೆಯಾಗಿ ಈ ಬಾರಿ ತೋಂಟಾದಾರ್ಯ ಮಠದ ಭಾವಚಿತ್ರವನ್ನು ಜಾಮಿಯಾ ಮಸ್ಜಿದ್ ವತಿಯಿಂದ ನೀಡಿ ಆಶೀರ್ವಾದ ಪಡೆದರು.

ಅಬ್ದುಲಗನಿ ರಾಯದುರ್ಗ ಹಾಗೂ ಸಂಗಡಿಗರು ತಂಪು ಪಾನೀಯ ವಿತರಿಸಿದರು. ಈ ಸಂದರ್ಭದಲ್ಲಿ ಜಾಮಿಯಾ ಮಸ್ಜಿದ್ ಚೇರಮನ್ ಸಾದಿಕ್ ನರಗುಂದ, ಉಪಾಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಕಾರ್ಯದರ್ಶಿ ಹಾಜಿ ಮಕಬೂಲ್‌ಸಾಬ ಶಿರಹಟ್ಟಿ, ರಿಯಾಜ್ ಅತ್ತಾರ್, ಹಾಜಿ ಮಹಮ್ಮದ್ ಹುಸೇನ್‌ಸಾಬ್ ಧಾರವಾಡ, ಮಹಮ್ಮದ್‌ಶಫಿ ಕುದರಿ, ಹಾಜಿ ಮಹಮ್ಮದ್ ಅಲಿ ಕಲೆಗಾರ, ರಶೀದ್ ಮದರಂಗಿ, ಇಸ್ಮಾಯಿಲ್ ಮದರಂಗಿ, ನಜೀರ್ ಕಾಟಾಪುರ, ರಜಾಕ್ ಶಿರಹಟ್ಟಿ, ಅಬ್ಬು ರಾಟಿ, ನಜೀರ್ ಕುದರಿ ಸೇರಿದಂತೆ ಮುಸ್ಲಿಂ ಗಣ್ಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here