ಬೆಂಗಳೂರು: ಕೆಮಿಕಲ್ ತುಂಬಿದ್ದ ಬಕೆಟ್ಗೆ ಬಿದ್ದು 9 ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಶ್ರೀರಾಮಪುರದಲ್ಲಿ ನಡೆದಿದೆ. ಸುಬ್ರಮಣಿ (9) ಮೃತಪಟ್ಟ ಬಾಲಕ.

ನವೆಂಬರ್ 2ರಂದು ಈ ಘಟನೆ ನಡೆದಿತ್ತು. ಬಾಲಕ ವಾಸವಿದ್ದ ಮನೆಯ ಪಕ್ಕದಲ್ಲೇ ಕೆಮಿಕಲ್ ಫ್ಯಾಕ್ಟರಿ ಇತ್ತು. ಆಟವಾಡುತ್ತಿದ್ದ ಸುಬ್ರಮಣಿ ಏಕಾಏಕಿ ಫ್ಯಾಕ್ಟರಿ ಆವರಣಕ್ಕೆ ತೆರಳಿದ್ದಾನೆ. ಈ ವೇಳೆ ಕೆಮಿಕಲ್ ತುಂಬಿದ್ದ ಬಕೆಟ್ಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಬಾಲಕ ಬಕೆಟ್ಗೆ ಬಿದ್ದ ತಕ್ಷಣ ಅಲ್ಲಿದ್ದವರು ಆತನನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಹಲವು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಂದು ಬಾಲಕ ಮೃತಪಟ್ಟಿದ್ದಾನೆ.
ಇನ್ನು ಬಾಲಕ ಕೆಮಿಕಲ್ ತುಂಬಿದ್ದ ಬಕೆಟ್ಗೆ ಬೀಳುವ ದೃಶ್ಯ ಫ್ಯಾಕ್ಟರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.









