ಬೆಂಗಳೂರು:- ಎನ್ಒಸಿ ನೀಡಲು ವ್ಯಕ್ತಿಯೊಬ್ಬರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಬಿಬಿಎಂಪಿ ಇಂಜಿನಿಯರ್ಗಳು ಲೋಕಾ ಬಲೆಗೆ ಬಿದ್ದಿದ್ದಾರೆ. ಲೋಕಾ ಬಲೆಗೆ ಬಿದ್ದವರನ್ನು ಹೆಬ್ಬಾಳ ಉಪ ವಿಭಾಗದ ಎಇಇ ಮಹದೇವ ಮತ್ತು ಆರ್ಎಂವಿ ಉಪ ವಿಭಾಗದ ಎಇ ಸುರೇಂದ್ರ ಎಂದು ಗುರುತಿಸಲಾಗಿದೆ.
Advertisement
ಎನ್ಒಸಿ ನೀಡಲು 10 ಲಕ್ಷ ರೂಪಾಯಿ ಲಂಚ ನೀಡುವಂತೆ ಬಿಬಿಎಂಪಿ ಇಂಜಿನಿಯರ್ಗಳು ಬೇಡಿಕೆ ಇಟ್ಟಿದ್ದರು. ಸಂಜಯ್ ಎಂಬುವರಿಂದ ಮುಂಗಡವಾಗಿ 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳಿಂದ ಲಂಚದ ಹಣವನ್ನು ಲೋಕಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ.