ಬಳ್ಳಾರಿ: ಸಮೀಕ್ಷೆಗೆ ಗೈರಾಗಿದ್ದ ಇಬ್ಬರು ಶಿಕ್ಷಕರನ್ನು ಸಸ್ಪೆಂಡ್ ಮಾಡಲಾಗಿದೆ. ಅಮಾನತಾದ ಶಿಕ್ಷಕರನ್ನು ರವಿಚಂದ್ರ ಬಿ.ಸಿ ಹಾಗೂ ಮೇಲ್ವಿಚಾರಕ ರಾಘವೇಂದ್ರ ರಾವ್ ಎಂದು ಗುರುತಿಸಲಾಗಿದೆ.
Advertisement
ಕಂಪ್ಲಿಯ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆ ವಿಭಾಗದ ಶಿಕ್ಷಕ ರವಿಚಂದ್ರ ಹಾಗೂ ಸಂಡೂರಿನ ಆದರ್ಶ ವಿದ್ಯಾಲಯದ ಶಿಕ್ಷಕ ರಾಘವೇಂದ್ರ ಇಬ್ಬರನ್ನೂ ಸಮೀಕ್ಷೆಗೆ ನಿಯೋಜಿಸಲಾಗಿತ್ತು. ಸಮೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿದ್ದರೂ ಇಬ್ಬರೂ ಶಿಕ್ಷಕರು ನಿರ್ಲಕ್ಷ್ಯ ತೋರಿದ್ದರು.
ಸಮೀಕ್ಷೆಗೆ ತೆರಳದೆ ಗೈರು ಹಾಜರಾಗಿದ್ದ ಹಿನ್ನೆಲೆ ಬೇಜವಾಬ್ದಾರಿ ತೋರಿ, ಜಿಲ್ಲೆಯಲ್ಲಿ ಸಮೀಕ್ಷೆ ಕುಂಠಿತಕ್ಕೆ ಕಾರಣವಾಗಿದ್ದೀರಿ ಎಂದು ಕಾರಣ ನೀಡಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಇಬ್ಬರೂ ಶಿಕ್ಷಕರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ