Homecultureಉಡಿ ತುಂಬುವ ಕಾರ್ಯಕ್ರಮ ಇಂದು

ಉಡಿ ತುಂಬುವ ಕಾರ್ಯಕ್ರಮ ಇಂದು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಬೆಟಗೇರಿ ಎಸ್.ಎಸ್.ಕೆ. ಜಗದಂಬಾ ದೇವಸ್ಥಾನದಲ್ಲಿ ಎಸ್.ಎಸ್.ಕೆ. ಸಮಾಜ ಪಂಚ ಕಮಿಟಿ ಮತ್ತು ತರುಣ ಸಂಘ, ಮಹಿಳಾ ಮಂಡಳ ಇವರ ಸಹಯೋಗದಲ್ಲಿ ದಸರಾ ಹಬ್ಬದ ನಿಮಿತ್ತ ಅ.10 ರಂದು ಬೆಳಿಗ್ಗೆ ಕಾಕಡರಾತಿ, ಭಜನೆಯೊಂದಿಗೆ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.

ಲೋಬೋಸಾ ಕುಟುಂಬದವರಿಂದ ಮಂಜುನಾಥ ಎನ್.ಕಬಾಡಿ ಮತ್ತು ಮಾಯಾ ಕಬಾಡಿ, ಲೋಬೋಸಾ ಎನ್.ಕಬಾಡಿ ಮತ್ತು ಧನಲಕ್ಷ್ಮಿ ಲೋಬೋಸಾ ಕಬಾಡಿ, ನಾಗರಾಜ ಎನ್.ಕಬಾಡಿ ಮತ್ತು ಸಂಗೀತಾ ನಾಗರಾಜ ಕಬಾಡಿ ದಂಪತಿಗಳಿಂದ ಎಸ್.ಎಸ್.ಕೆ. ಸಮಾಜ ಮತ್ತು ಇತರೇ ಸಮಾಜದ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

ದಿ. ನಾರಾಯಣಸಾ ಲೋಬೋಸಾ ಕಬಾಡಿ ಹಾಗೂ ದಿ. ಲಕ್ಷ್ಮಿಬಾಯಿ ನಾರಾಯಣಸಾ ಕಬಾಡಿ ಇವರು ಕಳೆದ 30 ವರ್ಷಗಳಿಂದ ಜಗದಂಬಾ ದೇವಸ್ಥಾನದಲ್ಲಿ ತಮ್ಮ ಧಾರ್ಮಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಅವರು ನಡೆದುಕೊಂಡು ಬರುತ್ತಿರುವ ಧಾರ್ಮಿಕ ಪ್ರವೃತ್ತಿಯನ್ನು ಅವರು ಕುಟುಂಬ ವರ್ಗದವರು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್.ಎಸ್.ಕೆ. ಸಮಾಜ ಸೇರಿದಂತೆ ಇತರೆ ಸಮಾಜದ ಸುಮಂಗಲಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಗದಂಬಾ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಲೋಬೋಸಾ ಮತ್ತು ಕಬಾಡಿ ಕುಟುಂಬದವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img