ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಜೂನ್ 1ರಿಂದ ಪಟ್ಟಣದಲ್ಲಿ ಐತಿಹಾಸಿಕ ದರಗಾದ ಹಜರತ್ ರೈಮಾನ್ ಶಾವಲಿ ಶರಣರ ಉರುಸು ಪ್ರಾರಂಭವಾಗಲಿದೆ ಎಂದು ದರಗಾದ ಶರಣರಾದ ಮಂಜುರ್ ಹುಸೇನ್ ಶಾವಲಿ ಹೇಳಿದರು.
ಪಟ್ಟಣದ ದರಗಾದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.
ಜೂನ್ 1ರಂದು ಸಂಜೆ ದರಗಾದಿಂದ ಮೆರವಣಿಗೆ ಮೂಲಕ ಕೊಚಲಾಪುರ ಗ್ರಾಮದಲ್ಲಿ ಇರುವ ಲಕ್ಷ್ಮಮ್ಮನ ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ನಂತರ ನರೇಗಲ್ಲಿಗೆ ಕರೆದುಕೊಂಡು ಬರಲಾಗುತ್ತಿದೆ. ಪಟ್ಟಣದ ತೆಗ್ಗಿನಕೇರಿ ಓಣಿಯ ಮುಜಾವರ ಮನೆಯಿಂದ ಗಂಧದ ಮೆರವಣಿಗೆ ಹೊರಡುವುದು, ಜೂನ್ 2ರ ಮುಂಜಾನೆ 6ರಿಂದ 10 ಗಂಟೆಯವರೆಗೆ ಸಾಧು-ಸಂತರಿಗೆ ಅನ್ನ ಸಂತರ್ಪಣೆ, ಸಂಜೆ ಮೆರವಣಿಗೆ ಮೂಲಕ ಲಕ್ಷ್ಮಮ್ಮನ ಪಲ್ಲಕ್ಕಿ ಮರಳಿ ಕೊಚಲಾಪುರ ಗ್ರಾಮಕ್ಕೆ ಕಳಿಸುವ ಜೊತೆಗೆ ಪಟ್ಟಣದಲ್ಲಿ ಮಂಜುರ್ ಹುಸೇನ್ ಶಾವಲಿ ಶರಣರ ಮೆರವಣಿಗೆ ನಡೆಯುತ್ತದೆ. ರಾತ್ರಿ ದೀಪೋತ್ಸವ, ಮದ್ದು ಹಾರಿಸುವುದು ಮತ್ತು ಧರ್ಮ ಪದ್ಧತಿಯಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜೂನ್ 3 ರಂದು ಮರಿ ಉರುಸು ನಡೆಯಲಿದೆ ಎಂದರು.
ಸಭೆಯಲ್ಲಿ ರುದ್ರಮನಿಶ ಶಿವಾಚಾರ್ಯ, ಗಂಗಾಧರ ಕೊಟಗಿ, ಎ.ಎ. ನವಲಗುಂದ, ಬಿ.ಕೆ. ಪೊಲೀಸ್‌ಪಾಟೀಲ, ನಿಂಗಪ್ಪ ಕಣವಿ, ಶರಣಪ್ಪ ಕುರಿ, ಭೀಮಣ್ಣ ಕಿಟಗೇರಿ, ಕಲ್ಮೇಶ ತೊಂಡಿಹಾಳ, ನಜೀರ್ ಸಾಬ್ ಇಟಗಿ, ಡಾ. ಶಿವರಾಜ ಗುರಿಕಾರ, ನಿಂಗಪ್ಪ ಚಲವಾದಿ, ಕಳಕಪ್ಪ ಹತ್ತಿಕಟಗಿ, ಮುತ್ತಣ್ಣ ಹಡಪದ, ಸುರೇಶ ಬಾಗಲಿ, ಶೇಕಪ್ಪ ಕೆಂಗಾರ, ಮೈಲಾರಪ್ಪ ಗೋಡಿ, ಶ್ಯಾಮಣ್ಣ ಹನುಮಸಾಗರ, ಶೇಕಪ್ಪ ಜುಟ್ಲ, ಸಂಗಪ್ಪ ಚಿಮ್ಮನಗಿ, ಸುರೇಶ ಹುನಗುಂದ, ಈರಪ್ಪ ಹುಯಿಲಗೋಳ, ಮೂಕಪ್ಪ ನವಲಗುಂದ, ಅಂದಪ್ಪ ಕುಂಬಾರ, ವೀರಭಸಪ್ಪ ಗೊಡಚಪ್ಪನವರ, ಈರಪ್ಪ ಹಾಲನ್ನವರ, ಯಮನೂರಪ್ಪ ಹುಲಕೊಟಿ ಸೇರಿದಂತೆ ನರೇಗಲ್ಲ ಸುತ್ತಮುತ್ತಲಿನ ಗ್ರಾಮಗಳ ಸರ್ವಧರ್ಮದ ಗುರು-ಹಿರಿಯರು ಹಾಗೂ ಯುವಕರು ಪಾಲ್ಗೊಂಡಿದ್ದರು.