ದಾವಣಗೆರೆ: ಹನಗವಾಡಿಯಲ್ಲಿರುವ ಪಂಚಮಸಾಲಿ ಗುರುಪೀಠ ಈಗ ರಾಜ್ಯದ ಗಮನ ಸೆಳೆದಿದೆ. ಮಠದೊಳಗಿನ ಬೆಳವಣಿಗೆಗಳು ಗಂಭೀರ ತಿರುವು ಪಡೆದಿದ್ದು, ವಚನಾನಂದ ಶ್ರೀ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಮಠದಲ್ಲಿ ವಾಸಿಸುತ್ತಿದ್ದ ಮಕ್ಕಳು, ಸ್ವಾಮೀಜಿ ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದರು, ಬೈಯುತ್ತಿದ್ದರು ಮತ್ತು ಅನಾರೋಗ್ಯದಲ್ಲಿದ್ದಾಗ ಸಹಾಯ ಮಾಡುತ್ತಿರಲಿಲ್ಲ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವರು ಸ್ವಾಮೀಜಿ ತಮ್ಮಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪ ಕೂಡ ಕೇಳಿಬರುತ್ತಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳು ಸ್ವಾಮೀಜಿಯನ್ನು ವಿಚಾರಣೆಗೂ ಒಳಪಡಿಸಿದ್ದಾರೆ. ಇದೀಗ ಮಕ್ಕಳ ಕೌನ್ಸೆಲಿಂಗ್ ನಡೆಯಲಿದ್ದು, ಅವರ ಹೇಳಿಕೆಗಳು ಪ್ರಕರಣದ ಮುಂದಿನ ದಿಕ್ಕು ನಿರ್ಧರಿಸಲಿದೆ.
ಒಂದು ವೇಳೆ ಮಕ್ಕಳಿಂದ ಗಂಭೀರ ಹೇಳಿಕೆಗಳು ದಾಖಲಾಗಿದ್ರೆ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಇದರಿಂದ ಮಠದ ವಿವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಇನ್ನೊಂದೆಡೆ, ಮಠದ ಆಡಳಿತ ಮಂಡಳಿ ಆರೋಪಗಳನ್ನು ತಳ್ಳಿಹಾಕಿ, ಇದು ಸಂಚು ಎಂದು ಹೇಳುತ್ತಿದೆ. ವಚನಾನಂದ ಶ್ರೀ ಕೂಡ ಸಮಯವೇ ಸತ್ಯ ಹೊರತರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.



