ಯುವತಿ ಜತೆ ಬೈಕ್ʼನಲ್ಲಿ ಯುವಕರಿಬ್ಬರ ತ್ರಿಬಲ್ ರೈಡಿಂಗ್, ಕಿಸ್ಸಿಂಗ್! ವಿಡಿಯೋ ವೈರಲ್

0
Spread the love

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರ ಹುಚ್ಚಾಟ ಮಿತಿ ಮೀರಿದೆ. ಈ ಹಿಂದೆ ನಡುರಸ್ತೆಯಲ್ಲಿ ಯುವಕ ಹಾಗೂ ಯುವತಿ ಬೈಕ್ ಮೇಲೆ ರೊಮ್ಯಾನ್ಸ್‌ ಮಾಡಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಇದೀಗ ನಡು ರಸ್ತೆಯಲ್ಲೇ ಯುವಕ-ಯುವತಿ ಲಿಪ್‌ಲಾಕ್ ಮಾಡ್ಕೊಂಡು ಹೋಗಿದ್ದಾರೆ. KA 05 CQ 0415 ಎಂಬ ನೋಂದಣಿ ಸಂಖ್ಯೆಯ KTM ಡ್ಯೂಕ್ ಬೈಕ್‌ನಲ್ಲಿ ರಾಗಿಗುಡ್ಡ ರಸ್ತೆಯಲ್ಲಿ ನಡೆದಿದೆ.

Advertisement

ಬೈಕ್‌ನಲ್ಲಿ ಮೂರು ಜನ ಪ್ರಯಾಣಿಸುತ್ತಿದ್ದು ಯಾರೂ ಹೆಲ್ಮೆಟ್ ಧರಿಸಿರಲಿಲ್ಲ. ಚಾಲನೆ ಮಾಡುತ್ತಿದ್ದ ಯುವಕನ ಹಿಂದೆ ಕುಳಿತಿದ್ದ ಯುವಕ ಮತ್ತು ಕೊನೆಯಲ್ಲಿ ಕುಳಿತ ಯುವತಿ ಪರಸ್ಪರ ಮುತ್ತು ನೀಡುತ್ತಿದ್ದರು.

ಈ ವೇಳೆ ಅಕ್ಕಪಕ್ಕದಲ್ಲಿ ಬಂದ ವಾಹನ ಸವಾರರು ಇವರನ್ನು ಪ್ರಶ್ನಿಸಿದಾಗ ಅವರಿಗೆ ಧಮ್ಕಿ ಹಾಕಿ ಅವಾಜ್ ಮಾಡಿದ್ದಾರೆ. ಈ ಘಟನೆಯ ದೃಶ್ಯವನ್ನು ಮತ್ತೊಬ್ಬ ವಾಹನ ಸವಾರರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋವನ್ನು ಬೆಂಗಳೂರು ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here