ಎಸ್ಪಿ ಬಿ.ಎಸ್. ನೇಮಗೌಡ ಆದೇಶ..…
ವಿಜಯಸಾಕ್ಷಿ ಸುದ್ದಿ, ಗದಗ
ಮೇಲಾಧಿಕಾರಿಗಳ ಆದೇಶಗಳಿಗೆ ತಾತ್ಸಾರ ಭಾವನೆ, ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ ಕೆ.ಪಿ ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಲು ಮುತುವರ್ಜಿ ವಹಿಸದೇ ಕರ್ತವ್ಯಲೋಪವೆಸೆಗಿರುವ ನರೇಗಲ್ ಠಾಣೆಯ ಪಿಎಸ್ಐ ಅವರನ್ನು ಸಸ್ಪೆಂಡ್ ಮಾಡಿ ಎಸ್ಪಿ ಆದೇಶ ಮಾಡಿದ್ದಾರೆ.
ನರೇಗಲ್ ಪಿಎಸ್ಐ ನಿಖಿಲಕುಮಾರ್ ಎಂ ಕಾಂಬ್ಳೆ ಅಮಾನತು ಆದ ಪಿಎಸ್ಐ.
ನರೇಗಲ್ ಪೊಲೀಸ್ ಠಾಣೆಗೆ ಪಿಎಸ್ಐ ಅಂತ ನಿಯುಕ್ತಿಗೊಳಿಸಿ ಆದೇಶದ ನಂತರ ನಿಯಮದಂತೆ ಹಿರಿಯ ಅಧಿಕಾರಿಗಳಿಗೆ ಕಾಲ್ ಆನ್ ಮಾಡಿ ಠಾಣೆಗೆ ವರದಿ ಮಾಡಿಕೊಂಡಿಲ್ಲ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಅಧಿಕಾರ ವಹಿಸಿಕೊಂಡ ನಂತರ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿಲ್ಲ. ಹಾಗೆಯೇ ಜುಲೈ 23 ರಿಂದ ಆಗಸ್ಟ್ 19 ರವರೆಗೆ ಕೆ.ಪಿ. ಆ್ಯಕ್ಟ್ ಅಡಿ ಕೇಸ್ ಮಾಡಲು ಮುತುವರ್ಜಿ ವಹಿಸದೆ ಮೇಲಾಧಿಕಾರಿಗಳಿಗೆ ದಿನನಿತ್ಯ ಯಾವುದೇ ಪ್ರಗತಿ ತೋರಿಸಿಲ್ಲ.
ಮೇಲಾಧಿಕಾರಿಗಳ ಆದೇಶ ಹಾಗೂ ಜ್ಞಾಪನೆ ಪಾಲನೆ ಮಾಡದೆ ಕರ್ತವ್ಯದಲ್ಲಿ ನಿರುತ್ಸಾಹ, ಬೇಜವಾಬ್ದಾರಿ ಪ್ರದರ್ಶಿಸಿ ಕರ್ತವ್ಯಲೋಪ ಎಸೆಗಿದ್ದು ಕಂಡು ಬಂದಿದೆ ಎಂಬ ವರದಿ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ನರೇಗಲ್ ಪಟ್ಟಣದ ಪ್ರೇಮ ಪ್ರಕರಣದಲ್ಲೂ ಹಿರಿಯ ಅಧಿಕಾರಿಗಳ ಜೊತೆಗೆ ಅಗೌರವದಿಂದ ಮಾತನಾಡಿದ ಆರೋಪವಿದೆ.
ಒಟ್ಟಿನಲ್ಲಿ ಮೇಲಾಧಿಕಾರಿಗಳಿಗೆ ಅಸಭ್ಯ ರೀತಿಯಲ್ಲಿ ಮಾತನಾಡಿ, ಅವರ ಆದೇಶ ಉಲ್ಲಂಘಿಸಿ, ಇಲಾಖೆಯ ನಿಯಮಗಳನ್ನು ನಿರ್ಲಕ್ಷಿಸಿ ಸಂಪೂರ್ಣವಾಗಿ ಕರ್ರವ್ಯದಲ್ಲಿ ದುರ್ನಡೆತೆ, ಬೇಜವಾಬ್ದಾರಿತನ, ನಿಷ್ಕಾಳಜಿತನ ಮತ್ತು ಲೋಪವೆಸಗಿರುವುದನ್ನು ನರಗುಂದ ಡಿಎಸ್‌ಪಿ ಅವರ ವರದಿ 1351/2023 ಹಾಗೂ 1353/2023 ಪ್ರಕಾರ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಿ ಎಸ್ಪಿ ಬಿ.ಎಸ್. ನೇಮಗೌಡ ಅವರು ಆದೇಶ ಹೊರಡಿಸಿದ್ದಾರೆ.