ವ್ಯಾಪಾರಿ, ಕಾರ್ ಚಾಲಕ ವಶಕ್ಕೆ…….
ವಿಜಯಸಾಕ್ಷಿ ಸುದ್ದಿ, ನರಗುಂದ
ಯಾವುದೇ ದಾಖಲೆ ಇಲ್ಲದೆ ಕೋಟ್ಯಾಂತರ ರೂ. ಹಣವನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರಿನಲ್ಲಿ ಕೋಟ್ಯಂತರ ರೂ. ಹಣ ಪತ್ತೆಯಾಗಿದೆ.
ಹುಬ್ಬಳ್ಳಿ ಮೂಲದ ವ್ಯಾಪಾರಿ ವಿಕ್ರಮ್ ಸಿಂಗ್ ಎಂಬುವವರಿಗೆ ಸೇರಿದ 1ಕೋಟಿ 70 ಲಕ್ಷ ರೂ ಹಣ ವಶಕ್ಕೆ ಪಡೆದಿರುವ ನರಗುಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಿನ್ನೆ ಮಧ್ಯರಾತ್ರಿ ಕಾರಿನಲ್ಲಿ ಹಣ ಸಾಗಾಟದ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರು ಕಾರು ತಪಾಸಣೆ ಮಾಡಿದಾಗ ಈ ಹಣ ಪತ್ತೆಯಾಗಿದೆ.
ಕಾರ ಚಾಲಕ ಶಿವಬಸಯ್ಯ ಹಾಗೂ ವ್ಯಾಪಾರಿ ವಿಕ್ರಮ್ ಸಿಂಗ್ ಅವರನ್ನು ಇನ್ಸ್‌ಪೆಕ್ಟರ್ ಮಲ್ಲಯ್ಯ ಮಠಪತಿ ಅವರು ಹಣದ ಮೂಲ ಹಾಗೂ ದಾಖಲೆಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.