ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಅವಳಿ ನಗರದ ಒಟ್ಟು 35 ವಾರ್ಡ್’ಗಳಿಗೆ ಸಲ್ಲಿಕೆಯಾಗಿದ್ದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಗುರುವಾರ ನಗರಸಭೆ ಕಚೇರಿಯಲ್ಲಿ ನಡೆಯಿತು.
ನಗರಸಭೆ ಚುನಾವಣೆಗೆ ಒಟ್ಟು 206 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಕಾಂಗ್ರೆಸ್ 49, ಬಿಜೆಪಿ 57, ಜೆಡಿಎಸ್ 13, ಪಕ್ಷೇತರ 74, ಕೆಆರ್‌ಎಸ್ 2, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಎಐಎಂ, ಎಂಐಎಂ ಹಾಗೂ ಎಎಪಿ ತಲಾ 1, ಎಐಎಂಐಎಂ 2, ರಾಣಿ ಚೆನ್ನಮ್ಮ ಪಕ್ಷದಿಂದ 5 ನಾಮಪತ್ರಗಳು ಸೇರಿ ಒಟ್ಟು 206 ಉಮೇದುವಾರಿಕೆಗಳು ಸಲ್ಲಿಕೆಯಾಗಿದ್ದವು.
ಅದರಂತೆ, ಗುರುವಾರ ನಡೆದ ನಾಮಪತ್ರಗಳ ಪರಿಶೀಲನೆ ವೇಳೆ 34 ಉಮೇದುವಾರಿಕೆಗಳು ತಿರಸ್ಕೃತಗೊಂಡಿದ್ದು, ಒಟ್ಟು 172 ನಾಮಪತ್ರಗಳು ಕ್ರಮಬದ್ಧವಾಗಿವೆ. ಇದರೊಂದಿಗೆ ಚುನಾವಣೆಗೆ 172 ಜನ ಅಂತಿಮವಾಗಿ ನಾಮನಿರ್ದೇಶಿತಗೊಂಡಂತಾಗಿದೆ.
ತಿರಸ್ಕೃತಗೊಂಡ ನಾಮಪತ್ರಗಳ ವಾರ್ಡ್ವಾರು ವಿವರ
ವಾರ್ಡ್ ನಂ.1ರಲ್ಲಿ 4, ವಾರ್ಡ್ ನಂ.2ರಲ್ಲಿ 3, ವಾರ್ಡ್ ನಂ.3ರಲ್ಲಿ 1, ವಾರ್ಡ್ ನಂ.4ರಲ್ಲಿ 1, ವಾರ್ಡ್ ನಂ.5ರಲ್ಲಿ 2, ವಾರ್ಡ್ ನಂ.6ರಲ್ಲಿ 2, ವಾರ್ಡ್ ನಂ.9ರಲ್ಲಿ 1, ವಾರ್ಡ್ ನಂ.10ರಲ್ಲಿ 1, ವಾರ್ಡ್ ನಂ.11ರಲ್ಲಿ 3, ವಾರ್ಡ್ ನಂ.12ರಲ್ಲಿ 3, ವಾರ್ಡ್ ನಂ.23ರಲ್ಲಿ 1, ವಾರ್ಡ್ ನಂ.26ರಲ್ಲಿ 2, ವಾರ್ಡ್ ನಂ.29ರಲ್ಲಿ 2, ವಾರ್ಡ್ ನಂ.30ರಲ್ಲಿ 2, ವಾರ್ಡ್ ನಂ.31ರಲ್ಲಿ 3, ವಾರ್ಡ್ ನಂ.32ರಲ್ಲಿ 1, ವಾರ್ಡ್ ನಂ.33ರಲ್ಲಿ 1 ಹಾಗೂ ವಾರ್ಡ್ ನಂ.35ರಲ್ಲಿ ಓರ್ವ ಅಭ್ಯರ್ಥಿಯ ನಾಮಪತ್ರ ಸೇರಿ ಒಟ್ಟು 34 ಉಮೇದುವಾರಿಕೆಗಳು ತಿರಸ್ಕಾರಗೊಂಡಿವೆ ಎಂದು ಗದಗ ತಹಶೀಲ್ದಾರ ಕಿಶನ್ ಕಲಾಲ ತಿಳಿಸಿದ್ದಾರೆ.