ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಳಿಕ ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ನಿವೃತ್ತಿ ಕುರಿತಾದ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕೊಹ್ಲಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ.
ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನದಲ್ಲಿ ಈವರೆಗೂ 123 ಪಂದ್ಯಗಳನ್ನು ಆಡಿದ್ದು ಈ ಅವಧಿಯಲ್ಲಿ, ಅವರ 210 ಇನ್ನಿಂಗ್ಸ್‌ಗಳಲ್ಲಿ 9230 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ. ನಿವೃತ್ತಿ ಬಗ್ಗೆ ಸ್ವತಃ ಕೊಹ್ಲಿ ಅವರೇ ಇನ್ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
68 ಟೆಸ್ಟ್‌ಗಳಲ್ಲಿ ನಾಯಕನಾಗಿ, 40 ಗೆಲುವುಗಳೊಂದಿಗೆ ಅವರು ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿದ್ದಾರೆ. 2016-2019ರ ನಡುವೆ, ಅವರ ಚಿನ್ನದ ಯುಗದಲ್ಲಿ, 2016 ರಲ್ಲಿ 75.93, 2017 ರಲ್ಲಿ 75.64, 2018 ರಲ್ಲಿ 55.08 ಮತ್ತು 2019 ರಲ್ಲಿ 68.00 ಸರಾಸರಿಯೊಂದಿಗೆ 35 ಟೆಸ್ಟ್‌ಗಳಲ್ಲಿ 3,596 ರನ್‌ಗಳನ್ನು ಗಳಿಸಿದರು, 14 ಶತಕಗಳನ್ನು ಬಾರಿಸಿದರು
2024-25 ರ ಆಸ್ಟ್ರೇಲಿಯಾದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ, ಪರ್ತ್‌ನಲ್ಲಿ ಶತಕ (100*) ಬಿಟ್ಟು, ಉಳಿದ ನಾಲ್ಕು ಟೆಸ್ಟ್‌ಗಳಲ್ಲಿ ವಿರಾಟ್ ಕೇವಲ 85 ರನ್ ಗಳಿಸಿದರು, ಸರಾಸರಿ 23.75. ಆಫ್ ಸ್ಟಂಪ್‌ನ ಹೊರಗಿನ ಚೆಂಡುಗಳಿಗೆ 10 ರಲ್ಲಿ 8 ಬಾರಿ ವಿಕೆಟ್ ಕಳೆದುಕೊಂಡರು.
ಇದು ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ ಅಂತ ಹೇಳಿತ್ತು. ಕೊಹ್ಲಿಯ ನಿವೃತ್ತಿಯಿಂದ ಭಾರತದ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಲಿದೆ. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಮತ್ತು ರಿಷಭ್ ಪಂತ್‌ರಂತಹ ಯುವ ಆಟಗಾರರ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ.



