ವಿಜಯಸಾಕ್ಷಿ ಸುದ್ದಿ, ಗದಗ: ಲೋಕಕಲ್ಯಾಣ ಹಾಗೂ ವಿಶ್ವಶಾಂತಿಯ ಸಂಕಲ್ಪದೊಂದಿಗೆ 33 ದಿನಗಳ ಕಠಿಣ ಶಿವಯೋಗ ಸಿದ್ಧಿ ಸಮಾಧಿ ಅನುಷ್ಠಾನ ಯಶಸ್ವಿಯಾಗಿ ಪೂರ್ಣಗೊಳಿಸಿದ ಗದಗ ತಾಲೂಕಿನ ಅಂತೂರು–ಬೆಂತೂರು ಗ್ರಾಮದ ಪೂಜ್ಯ ಡಾ. ರಾಚೋಟೇಶ್ವರ ಸ್ವಾಮೀಜಿ ಅವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ನರಗುಂದ ಕ್ಷೇತ್ರದ ಯುವ ನಾಯಕ ವಿವೇಕ್ ಯಾವಗಲ್ ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ವೇಳೆ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದ ಅವರು, ಲೋಕಕಲ್ಯಾಣಕ್ಕಾಗಿ ಕೈಗೊಂಡ ಅಪರೂಪದ ಶಿವಯೋಗ ಅನುಷ್ಠಾನವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಈಶಣ್ಣ ಹುಣಸಿಕಟ್ಟಿ, ಮೂಗನೂರು ಡಾಕ್ಟರ್, ಶರಣಪ್ಪ ಗವಾರಿ, ನಿಂಗಪ್ಪ ಗುಂಜಳ, ಪ್ರವೀಣಗೌಡ ಪಾಟೀಲ, ರಾಜಾಹುಲಿ ಪೂಜಾರ, ಮಂಜುನಾಥ ಜಡಿ, ರಫೀಕ್, ಮೇಘರಾಜ, ಸುರೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.



