HomeLife Styleಜಿರಳೆ ಕಂಡರೆ ಏಕೆ ಹೆದರುತ್ತಾರೆ? ಮಹಿಳೆಯರಲ್ಲಿ ಈ ಭಯ ಹೆಚ್ಚಿರಲು ಕಾರಣವೇನು? ಇಲ್ಲಿದೆ ತಜ್ಞರ ವಿವರಣೆ

ಜಿರಳೆ ಕಂಡರೆ ಏಕೆ ಹೆದರುತ್ತಾರೆ? ಮಹಿಳೆಯರಲ್ಲಿ ಈ ಭಯ ಹೆಚ್ಚಿರಲು ಕಾರಣವೇನು? ಇಲ್ಲಿದೆ ತಜ್ಞರ ವಿವರಣೆ

For Dai;y Updates Join Our whatsapp Group

ಪ್ರತಿಯೊಬ್ಬರಿಗೂ ಒಂದಲ್ಲೊಂದು ರೀತಿಯ ಭಯ ಇರುತ್ತದೆ. ಕೆಲವರಿಗೆ ಕತ್ತಲೆ, ಕೆಲವರಿಗೆ ಎತ್ತರ, ಇನ್ನು ಕೆಲವರಿಗೆ ನೀರು ಅಥವಾ ಹಾವುಗಳೆಂದರೆ ಭಯ. ಇದೇ ರೀತಿ ಅನೇಕ ಮಂದಿಗೆ, ವಿಶೇಷವಾಗಿ ಕೆಲ ಮಹಿಳೆಯರಿಗೆ ಜಿರಳೆಗಳನ್ನು ಕಂಡರೆ ಭಯವಾಗುವುದು ಸಾಮಾನ್ಯ.

ಆದರೆ ಈ ಭಯದ ಹಿಂದೆ ಮನೋವೈಜ್ಞಾನಿಕ ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ.

ಮನೋವಿಜ್ಞಾನದ ಪ್ರಕಾರ, ಜಿರಳೆಗಳ ಬಗ್ಗೆ ಇರುವ ತೀವ್ರ ಭಯವನ್ನು ‘ಕತ್ಸರಿಡಾಫೋಬಿಯಾ’ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯ ಫೋಬಿಯಾ ಆಗಿದ್ದು, ಜಿರಳೆಯನ್ನು ಕಂಡ ತಕ್ಷಣ ಕೆಲವರಲ್ಲಿ ಹೃದಯ ಬಡಿತ ಹೆಚ್ಚಾಗುವುದು, ಕೈ-ಕಾಲು ತಣ್ಣಗಾಗುವುದು, ಅತಿಯಾಗಿ ಬೆವರುವುದು ಹಾಗೂ ಕೆಲ ಕ್ಷಣ ಯೋಚಿಸುವ ಸಾಮರ್ಥ್ಯವೂ ಕುಂಠಿತವಾಗುವಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ತಜ್ಞರ ಪ್ರಕಾರ, ಈ ಭಯ ಹೆಚ್ಚಾಗಿ ಬಾಲ್ಯದಲ್ಲೇ ರೂಪುಗೊಳ್ಳುತ್ತದೆ. ಮನೆಯಲ್ಲಿ ಪೋಷಕರು ಅಥವಾ ಹಿರಿಯರು ಜಿರಳೆಯನ್ನು ಕಂಡು ಭಯಪಡುವುದನ್ನು ಮಕ್ಕಳು ಗಮನಿಸುತ್ತಾರೆ. ಇದರಿಂದ ಜಿರಳೆ ಅಪಾಯಕಾರಿ ಎಂಬ ಕಲ್ಪನೆ ಅವರ ಮನಸ್ಸಿನಲ್ಲಿ ಮೂಡಿ, ಕ್ರಮೇಣ ಅದು ಭಯವಾಗಿ ಬೆಳೆಯಬಹುದು.

ಇನ್ನು ಹುಡುಗಿಯರಲ್ಲಿ ಈ ಭಯ ಹೆಚ್ಚು ಕಾಣಿಸಿಕೊಳ್ಳಲು ಸಾಮಾಜಿಕ ಹಾಗೂ ಮಾನಸಿಕ ಅಂಶಗಳೂ ಕಾರಣವೆಂದು ಹೇಳಲಾಗುತ್ತದೆ. ಬಾಲ್ಯದಿಂದಲೇ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುವ ಕಾರಣ, ಕೊಳಕು ವಾತಾವರಣದಲ್ಲಿ ವಾಸಿಸುವ ಜಿರಳೆಗಳ ಬಗ್ಗೆ ನಕಾರಾತ್ಮಕ ಭಾವನೆ ಬೆಳೆದು ಭಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಜಿರಳೆಗಳ ದೈಹಿಕ ಗುಣಲಕ್ಷಣಗಳೂ ಈ ಭಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಎಣ್ಣೆಯುಕ್ತ ಮೈ, ವೇಗವಾಗಿ ಓಡುವ ಸ್ವಭಾವ ಹಾಗೂ ಇದ್ದಕ್ಕಿದ್ದಂತೆ ಹಾರುವ ಗುಣ ಅನೇಕರಲ್ಲಿ ಆತಂಕವನ್ನು ಉಂಟುಮಾಡುತ್ತದೆ. ವಿಶೇಷವಾಗಿ ಅನಿರೀಕ್ಷಿತವಾಗಿ ದೇಹದ ಮೇಲೆ ಬೀಳುವ ಸಾಧ್ಯತೆ ಇರುವುದರಿಂದ ಭಯ ಮತ್ತಷ್ಟು ಹೆಚ್ಚಾಗುತ್ತದೆ.

ಜಿರಳೆಗಳು ಹಾವು ಅಥವಾ ಕಾಡುಪ್ರಾಣಿಗಳಂತೆ ನೇರವಾಗಿ ಮಾರಕವಲ್ಲದಿದ್ದರೂ, ಅವು ಕೊಳಕು ಪ್ರದೇಶಗಳಲ್ಲಿ ವಾಸಿಸುವುದರಿಂದ ವಿವಿಧ ಸೂಕ್ಷ್ಮಜೀವಿಗಳು ಮತ್ತು ಅಲರ್ಜಿನ್‌ಗಳನ್ನು ಹೊತ್ತಿರುತ್ತವೆ. ಇದರಿಂದ ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುವವರಿಗೆ ಆರೋಗ್ಯದ ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಮನಶ್ಶಾಸ್ತ್ರಜ್ಞರ ಪ್ರಕಾರ, ಈ ರೀತಿಯ ಭಯವನ್ನು ಸೂಕ್ತ ಸಮಾಲೋಚನೆ ಹಾಗೂ ಕ್ರಮೇಣ ಮಾನಸಿಕವಾಗಿ ಸಿದ್ಧಗೊಳ್ಳುವ ಮೂಲಕ ಕಡಿಮೆ ಮಾಡಬಹುದು. ಜಿರಳೆಗಳಿಗೆ ಭಯಪಡುವವರನ್ನು ಹಾಸ್ಯ ಮಾಡುವುದು ಅಥವಾ ಕೀಳಾಗಿ ನೋಡುವುದು ಸರಿಯಲ್ಲ. ಇದು ಉದ್ದೇಶಪೂರ್ವಕ ಪ್ರತಿಕ್ರಿಯೆಯಲ್ಲ, ಬದಲಾಗಿ ಮನಸ್ಸಿನ ಸಹಜ ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img