ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ನಟಿ ಮೋಹಕತಾರೆ ರಮ್ಯಾ ಅವರು ಹಲವು ವರ್ಷಗಳಿಂದ ಸಿನಿಮಾಗಳಿಂದ ದೂರ ಸರಿದಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ರಮ್ಯಾ ಅವರು ಮತ್ತೆ ಯಾವಾಗ ಸಿನಿಮಾ ರಂಗಕ್ಕೆ ಬರುತ್ತಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಇದಕ್ಕೆ ರಮ್ಯಾ ಅವರು ನೋಡೋಣ ಎಂದು ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಉತ್ತರ ನೀಡುತ್ತಿದ್ದರು. ಇದೀಗ ಮತ್ತೆ ರಮ್ಯಾ ಅವರು ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.
ನಟಿ ರಮ್ಯಾ ಇಂದು ಬೆಂಗಳೂರಿನ ಕೋರ್ಟ್ಗೆ ಹಾಜರಾಗಿದ್ರು. 2023ರಲ್ಲಿ ಬಿಡುಗಡೆ ಆಗಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಅನುಮತಿ ಪಡೆದ ಕೆಲ ದೃಶ್ಯಗಳನ್ನ ಬಳಸಿಕೊಳ್ಳಲಾಗಿದೆ ಎಂದು ಸಿನಿಮಾದ ನಿರ್ಮಾಪಕರು, ನಿರ್ದೇಶಕರ ವಿರುದ್ಧ ರಮ್ಯಾ ದೂರು ನೀಡಿದ್ದರು. ಈ ಪ್ರಕರಣದ ಸಂಬಂಧನ್ಯಾಯಾಲಯದ ಮುಂದೆ ಹಾಜರಾದ ರಮ್ಯಾ ಕೆಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.
ಇನ್ನೂ ಕೋರ್ಟ್ ವಿಚಾರಣೆಯ ಬಳಿಕ ರಮ್ಯಾ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಿಂದ ಕೆಲ ದಾಖಲೆಗಳನ್ನು ನೀಡಲು ಹೇಳಿತ್ತು. ಅವರು ಕೇಳಿದ್ದ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ. ನೇರವಾಗಿ ಬಂದು ಕೊಡೋಕೆ ಹೇಳಿದ್ದರು. ಹಾಗಾಗಿ ವಿಚಾರಣೆಗೆ ಬಂದಿದ್ದೇನೆ. ಈ ಪ್ರಕರಣ ಕೋರ್ಟ್‌ನಲ್ಲಿರುವ ಕಾರಣಕ್ಕೆ ಹೆಚ್ಚೇನು ಮಾತನಾಡಲ್ಲ ಎಂದು ಮಾತನಾಡಿದ್ದಾರೆ. ಇದೇ ವೇಳೆ, ಮತ್ತೆ ಸಿನಿಮಾ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ಒಳ್ಳೆಯ ಕಥೆ ಸಿಕ್ಕರೆ ಆದಷ್ಟು ಬೇಗ ಬರುತ್ತೇನೆ. ರಾಜಕೀಯಕ್ಕೆ ಸದ್ಯಕ್ಕೆ ಬರುವ ಆಲೋಚನೆ ಇಲ್ಲ ಎಂದು ಮಾತನಾಡಿದ್ದಾರೆ.
ಕೋರ್ಟ್ ಗೆ ಹಾಜರಾಗಿದ್ಯಾಕೆ!?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಲಾಗಿದೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ನಟಿ ಚಿತ್ರತಂಡದ ಮೇಲೆ ಕೇಸ್ ಹಾಕಿದ್ದರು. 1 ಕೋಟಿ ರೂ. ಪರಿಹಾರ ಕೇಳಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ.