ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ : ಎಸ್.ವಿ. ಸಂಕನೂರ

0
bjp
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಬಿಜೆಪಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಬೂತ್ ಮಟ್ಟದಲ್ಲಿ ಕಠಿಣ ಪರಿಶ್ರಮದಿಂದ ಪಕ್ಷವನ್ನು ಸಂಘಟಿಸಬೇಕು. ಮತದಾರರಲ್ಲಿ ದೇಶದ ಭವಿಷ್ಯ ನಿರ್ಮಾಣ ಮಾಡಲು ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

Advertisement

ಅವರು ಶಿರಹಟ್ಟಿ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ನಗರ ಘಟಕದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಆಯ್ಕೆ ಹಾಗೂ ಆದೇಶ ಪತ್ರ ವಿತರಿಸಿ ಮಾತನಾಡಿದರು.

ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಈ ದಿಶೆಯಲ್ಲಿ ಎಲ್ಲ ಪದಾಧಿಕಾರಿಗಳು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ನಗರ ಘಟಕದ ಉಪಾಧ್ಯಕ್ಷರಾಗಿ ಸುದೀರ ಜಮಖಂಡಿ, ಸುರೇಶ ಹವಳದ, ಮಂಜುನಾಥ ಸೊಂಟನೂರ, ಅನ್ನಪೂರ್ಣ ಕಟ್ಟೇಕಾರ, ಕರ‍್ಯದರ್ಶಿಗಳಾಗಿ ಅನಿಲ ಪಾಶ್ಚಾಪೂರ, ಸಂತೋಷ ತೋಡೆಕಾರ, ಮಲ್ಲು ಕುದರಿ, ರಾಜು ಮಾತಾಡೆ, ವಿಜಯಲಕ್ಷ್ಮಿ ತಳವಾರ, ಕೋಶಾಧ್ಯಕ್ಷರಾಗಿ ಮಹೇಶ ಕಲ್ಲನವರ, ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ರೂಪಾ ಪಾಶ್ಚಾಪೂರ, ಕಾರ್ಯದರ್ಶಿಯಾಗಿ ರೇಖಾ ಭೋರಶೆಟ್ಟರ, ಕಲಾವತಿ ನಾವಿ, ಯುವ ಮೋರ್ಚಾದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಕಬಾಡಿ, ಪ್ರ.ಕಾರ್ಯದರ್ಶಿಯಾಗಿ ಮಂಜುನಾಥ ರಡ್ಡೇರ, ದೇವು ಪೂಜಾರ, ಓಬಿಸಿ ಮೋರ್ಚಾದ ಅಧ್ಯಕ್ಷರಾಗಿ ಶಿವಾನಂದ ಬಟ್ಟೂರ, ಪ್ರ.ಕಾರ್ಯದರ್ಶಿಯಾಗಿ ಶ್ರೀನಿವಾಸ ಕಪಟಕರ, ವಿನೋದ ಕಪ್ಪತ್ತನವರ, ರೈತ ಮೋರ್ಚಾದ ಅಧ್ಯಕ್ಷರಾಗಿ ಜಗದೀಶ ತೇಲಿ, ಪ್ರ.ಕಾರ್ಯದರ್ಶಿಯಾಗಿ ರವಿ ಬೇಂದ್ರೆ, ಶಿವಪ್ಪ ತಳವಾರ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಅಸ್ಪಾಕ್ ನಗಾರ, ಪ್ರ.ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಶಿಗ್ಲಿ, ಹಜರತ್‌ಅಲಿ ಇಟಗಿ, ಎಸ್‌ಸಿ ಮೋರ್ಚಾದ ಅಧ್ಯಕ್ಷರಾಗಿ ಶರಣಪ್ಪ ಹರ್ತಿ, ಪ್ರ.ಕಾರ್ಯದರ್ಶಿಯಾಗಿ ರಾಜು ಗಾಮನಗಟ್ಟಿ, ಎಸ್‌ಸಿ ಮೋರ್ಚಾದ ಅಧ್ಯಕ್ಷರಾಗಿ ಬಸವರಾಜ ತಳವಾರ, ಪ್ರ.ಕಾರ್ಯದರ್ಶಿಯಾಗಿ ಮೌನೇಶ ತಳವಾರ, ಸೊಮಶೇಖರ ಕಲಘಟಗಿ ಆಯ್ಕೆಯಾಗಿದ್ದಾರೆ ಎಂದರು.

ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಜಾನು ಲಮಾಣಿ, ಜಿಲ್ಲಾ ಪ್ರ.ಕಾರ್ಯದರ್ಶಿ ಫಕ್ಕೀರೇಶ ರಟ್ಟಿಹಳ್ಳಿ, ಬಿ.ಡಿ. ಪಲ್ಲೇದ, ಮಹಿಳಾ ಅಧ್ಯಕ್ಷೆ ನಂದಾ ಪಲ್ಲೇದ, ಯಲ್ಲಪ್ಪ ಇಂಗಳಗಿ, ಅಜ್ಜು ಕಪ್ಪತ್ತನವರ, ಶಿವಯ್ಯ ಮಠಪತಿ, ಪ್ರವೀಣಗೌಡ ಪಾಟೀಲ, ಅಕ್ಬರಸಾಬ ಯಾದಗಿರಿ, ಅಶೋಕ ವರವಿ, ಬಸವರಾಜ ವಡವಿ ಮುಂತಾದವರು ಉಪಸ್ಥಿತರಿದ್ದರು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಒಬ್ಬ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಶಾಸಕನನ್ನಾಗಿ ಮಾಡಿದ್ದು ಬಿಜೆಪಿ ಪಕ್ಷ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಉನ್ನತ ಹುದ್ದೆಗಳನ್ನು ನೀಡುವ ಏಕೈಕ ಪಕ್ಷ ಬಿಜೆಪಿ ಆಗಿದೆ. ಪಕ್ಷದ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲ ಬೂತ್‌ಗಳಲ್ಲಿಯೂ ಅತ್ಯಧಿಕ ಮತಗಳು ಲಭಿಸುವಂತೆ ಪಕ್ಷಕ್ಕೆ ದುಡಿದು, ಅವರನ್ನು ಕೇಂದ್ರದ ಮಂತ್ರಿಯಾಗಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು.


Spread the love

LEAVE A REPLY

Please enter your comment!
Please enter your name here