ಸ್ಯಾಂಡಲ್‌ವುಡ್‌ನ ಕ್ಯೂಟೆಸ್ಟ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗೆ ಇಂದು 9ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ ಮನೆ ಮಾಡಿತ್ತು.
ಇಂದು ಬೆಳಗ್ಗೆಯೇ ‘ಟಾಕ್ಸಿಕ್’ ಚಿತ್ರದ ಭರ್ಜರಿ ಅಪ್‌ಡೇಟ್ ನೀಡಿದ ಯಶ್, ತಮ್ಮ ವಿಶೇಷ ದಿನವನ್ನು ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಜೀವನದ ಪ್ರತಿಯೊಂದು ಕ್ಷಣಕ್ಕೂ ತನ್ನೊಂದಿಗೆ ನಿಂತಿರುವ ಪತಿ ಯಶ್‌ಗಾಗಿ, ರಾಧಿಕಾ ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಫೋಟೋಗಳನ್ನು ಹಂಚಿಕೊಂಡು ಹೃದಯಸ್ಪರ್ಶಿ ಶುಭಾಶಯಗಳನ್ನು ನೀಡಿದ್ದಾರೆ.
“ಯಾವಾಗಲೂ ಹಾಗೂ ಎಲ್ಲದಕ್ಕೂ ನೀನೇ ನನ್ನ ಉತ್ತರ” ಎಂಬ ಸಂದೇಶವೊಡನೆ ಯಶ್ ಜೊತೆಗಿನ ಸುಂದರ ಕ್ಷಣಗಳನ್ನು ಹಂಚಿಕೊಂಡ ರಾಧಿಕಾ, ದಂಪತಿಯ 9ನೇ ವರ್ಷದ ಮದುವೆ ದಿನವನ್ನು ಇನ್ನಷ್ಟು ವಿಶೇಷಗೊಳಿಸಿದ್ದಾರೆ.



