ವಿಜಯಸಾಕ್ಷಿ ಸುದ್ದಿ, ಕಲಬುರಗಿ
ಅಧಿವೇಶನ ಸಂದರ್ಭದಲ್ಲಿ
ಮುಖ್ಯಮಂತ್ರಿಗಳು ದೆಹಲಿಗೆ ಹೋಗುವ ಪರಿಪಾಟವಿದೆ. ಹೀಗಾಗಿ ಸಿಎಂ ದೆಹಲಿಗೆ ಹೋಗುತ್ತಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಮಂತ್ರಿ ಮಂಡಲದ ರಚನೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಶಾಸಕರು ದೆಹಲಿಗೆ ಹೋಗುವದರಲ್ಲಿ ತಪ್ಪೇನಿದೆ.
ತಮ್ಮ ಕೆಲಸ ಕಾರ್ಯಗಳಿಗಾಗಿ ದೆಹಲಿಗೆ ಹೋಗಿ ಬರ್ತಾರೆ. ಸದ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಆಗಲು ಕಾಂಗ್ರೆಸ್ ನಾಯಕರ ಮಧ್ಯೆ ಮ್ಯೂಜಿಕಲ್ ಚೇರ್ ಆಟ
ರಾಜ್ಯದಲ್ಲಿ ಚುನಾವಣೆ ಗೆ ಇನ್ನು ಎರಡು ವರ್ಷವಿದೆ. ಆದರೆ ಈಗಲೇ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ನಡೆದಿದೆ. ಸಿಎಂ ಹುದ್ದೆಗೆ ಸಂಗೀತ ಖುರ್ಚಿ ಆಟ ಜೋರಾಗಿ ನಡೆದಿದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ರಾಜ್ಯದ ಜನರಿಗೆ ಬಹುದೊಡ್ಡ ವಂಚನೆ ಮಾಡಿದ್ದಾರೆ. ಮೊದಲು ಅಹಿಂದದ ಹೆಸರು ಹೇಳಿ ಸಿಎಂ ಆದರು. ಸಿಎಂ ಆದ ನಂತರ ಅಹಿಂದ ಮರೆತುಬಿಟ್ಟಿದ್ದರು. ಈಗ ಮತ್ತೆ ಅಹಿಂದ ಜಪ ಮಾಡುವ ತಯಾರಿ ನಡೆಸಿದ್ದಾರೆ ಎಂದು ಆರೋಪಿಸಿದರು.
ಡಿಸೆಂಬರ್ ಒಳಗೆ ಎಲ್ಲರಿಗೂ ಲಸಿಕೆ
ಜಗತ್ತಿನಲ್ಲಿ ಅತಿ ಹೆಚ್ಚು ಲಸಿಕೆಯನ್ನು ಭಾರತ ನೀಡಿದೆ. ಎಲ್ಲಾ ಕಡೆ ಲಸಿಕೆ ಲಭ್ಯವಿದ್ದು, ಇದೀಗ ಐದು ಕಂಪನಿಗಳು ಲಸಿಕೆ ನೀಡುತ್ತಿವೆ. ಡಿಸೆಂಬರ್ ನೊಳಗಾಗಿ ಎಲ್ಲರಿಗೂ ಲಸಿಕೆ ನೀಡುವ ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದರು.