ವಿಜಯಸಾಕ್ಷಿ ಸುದ್ದಿ, ನರಗುಂದ: ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ನರಗುಂದ ಪುರಸಭೆ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸೆ. 3ರಂದು ನಡೆಯಿತು.
ಚುನಾವಣಾಧಿಕಾರಿ ಸಂಗಮೇಶ ಬ್ಯಾಳಿ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶಾಖೆಯ ಅಧ್ಯಕ್ಷರಾಗಿ ಮುತ್ತಪ್ಪ ಪಿ. ನೀಲಗುಂದ, ಉಪಾಧ್ಯಕ್ಷರಾಗಿ ಮಹಾದೇವಪ್ಪ ಎಸ್. ಜೋಗಣ್ಣವರ ಹಾಗೂ ಕಾರ್ಯದರ್ಶಿಯಾಗಿ ರೆಹಮಾನ್ ಎ. ನದಾಫ್ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯಲ್ಲಿ ಕರ್ನಾಟಕ ಪೌರಸೇವಾ ನೌಕರರ ಸೇವಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಲಾಲಸಾಬ ಮನಿಯಾರ, ರಾಜ್ಯ ಪರಿಷತ್ ಸದಸ್ಯ ಸಿದ್ದು ಹುಣಸಿಮರದ, ಗದಗ ಜಿಲ್ಲಾಧ್ಯಕ್ಷ ಮಹೇಶ ಹಡಪದ, ಕೊಪ್ಪಳ ಜಿಲ್ಲಾಧ್ಯಕ್ಷ ವಸಂತ ಬೆಲ್ಲದ, ಗದಗ ಜಿಲ್ಲಾ ನಿರ್ದೇಶಕರಾದ ಪಂಚಾಕ್ಷರಿ ದೊಡ್ಮನಿ ಹಾಗೂ ದ್ಯಾಮಣ್ಣ ರಾಮಗಿರಿ ಸೇರಿದಂತೆ ನರಗುಂದ ಪುರಸಭೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



