ಲಕ್ನೋ: ಕರ್ನಾಟಕದ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಪಡೆದಿದ್ದಾರೆ.
ಒಟ್ಟು 12 ಮಂದಿ ಶಾಸಕರು ಇಂದು ಬೆಳಗ್ಗೆ ಅಯೋಧ್ಯೆಗೆ ತೆರಳಿ ಪೂಜೆ ಸಲ್ಲಿಸಿದರು. ದರ್ಶನದ ಬಳಿಕ ಅವರು ಮತ್ತೆ ದೆಹಲಿಗೆ ಮರಳಿದರು.
ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಲಭ್ಯವಿರದ ಹಿನ್ನೆಲೆ, ಶಾಸಕರು ಬೆಳಗ್ಗೆ 8 ಗಂಟೆಗೆ ವಿಮಾನದ ಮೂಲಕ ಅಯೋಧ್ಯೆಗೆ ಪ್ರಯಾಣಿಸಿದ್ದರು.
ದರ್ಶನಕ್ಕೆ ತೆರಳಿದವರಲ್ಲಿ ಅಶೋಕ್ ಪಟ್ಟಣ್, ಟಿ.ಬಿ. ಜಯಚಂದ್ರ, ರಾಘವೇಂದ್ರ ಹಿಟ್ನಾಳ್, ಡಿ.ಜಿ. ಶಾಂತನಗೌಡ, ಹಂಪನಗೌಡ ಬಾದರ್ಲಿ, ಬಸವರಾಜ ಶಿವಣ್ಣನವರ್, ಮಹಾಂತೇಶ್ ಕೌಜಲಗಿ, ಷಡಕ್ಷರಿ, ಯಶವಂತರಾಯಗೌಡ ಪಾಟೀಲ್ ಹಾಗೂ ಜಿ.ಟಿ. ಪಾಟೀಲ್ ಸೇರಿದಂತೆ ಇತರರು ಸೇರಿದ್ದಾರೆ.



