ವಿಜಯಸಾಕ್ಷಿ ಸುದ್ದಿ, ಹೊಸಪೇಟೆ: ಚಾಲಾಕಿ ಕಳ್ಳರು ಪೊಲೀಸರ ಮನೆಯನ್ನೂ ಬಿಡದೇ ಚಿನ್ನಾಭರಣ ದೋಚಿರುವ ಘಟನೆ ಗ್ರಾಮೀಣ ಠಾಣೆ ವ್ಯಾಪ್ತಿಯ ಪಾಂಡುರಂಗ ಕಾಲೋನಿಯಲ್ಲಿ ನಡೆದಿದೆ.
Advertisement
ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಈರಣ್ಣ ಎನ್ನುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಈರಣ್ಣ ರಾತ್ರಿ ಪಾಳೆಯ ಕರ್ತವ್ಯ ನಿರ್ವಹಿಸಲು ಠಾಣೆಗೆ ಹೋದಾಗ ಮನೆಗೆ ನುಗ್ಗಿರುವ ಕಳ್ಳರು ಮನೆಯಲ್ಲಿದ್ದವರ ಕೈ ಕಾಲು ಕಟ್ಟಿ ಕಳ್ಳತನ ಮಾಡಿದ್ದಾರೆ.
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಲಾಗಿದೆ ಎಂದು ಹೇಳಲಾಗಿದೆ. ಈರಣ್ಣ ಠಾಣೆಗೆ ಕರ್ತವ್ಯಕ್ಕೆ ಹೋಗುವಾಗ, ಮನೆಯಲ್ಲಿ ಸಂಭಂದಿಗಳಿದ್ದರೂ ಬೀಗ ಹಾಕಿ ಕೊಂಡು ಹೋಗಿದ್ದೇ ಕಳ್ಳತನಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಕುರಿತು ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.