ಕಟೀಲರಿಗೆ ಮಾನಸಿಕ ಸಮಸ್ಯೆ ಇದ್ದರೆ ನಾವೇ ಟ್ರೀಟ್ಮೆಂಟ್ ಕೊಡಿಸ್ತೇವೆ

0
Spread the love

ವಿಜಯಸಾಕ್ಷಿ ಸುದ್ದಿ, ಕಲಬುರಗಿ

Advertisement

ಬಿಜೆಪಿ ಅಧ್ಯಕ್ಷರಾಗಿದ್ದರೂ ಪಕ್ಷ, ಮಾಧ್ಯಮದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮಾಧ್ಯಮಗಳಲ್ಲಿ ಅವರ ಹೇಳಿಕೆ ಪ್ರಸಾರ ಆಗುತ್ತಿಲ್ಲ. ಕಟೀಲ್ ಗಿಂತಲೂ ಯತ್ನಾಳ ಸುದ್ದಿಗಳು ಹೆಚ್ಚು ಪ್ರಚಾರವಾಗುತ್ತಿವೆ.ಯಡಿಯೂರಪ್ಪ, ಬೊಮ್ಮಾಯಿ ಸೈಡ್ಲೈನ್ ಮಾಡಿದ್ದಾರೆ. ಇದರಿಂದ
ನಳೀನ್ ಕುಮಾರ್ ಕಟೀಲ್ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಹತಾಶರಾದಾಗ ದಾರಿ ತಪ್ಪುವುದು ಸಹಜ. ದಾರಿ ತಪ್ಪಿದಾಗ ಕೆಲವು ಜನ ಮದ್ಯಪಾನ, ಡ್ರಗ್ಸ್ ಸೇವನೆ ಮಾಡುತ್ತಾರೆ. ಇನ್ನೂ ಕೆಲವರು ಇಂತಹ ರೀತಿ ಮಾತನಾಡುತ್ತಾರೆ. ಇವರು ನೋಡಿದರೆ ನನಗೆ ಅನುಮಾನ ಬರುತ್ತಿದೆ ಎಂದರು.

ಪುಕ್ಸಟ್ಟೆ ಪ್ರಚಾರಕ್ಕೊಸ್ಕರ ವೈಯಕ್ತಿಕವಾಗಿ ಮಾತಾಡಬೇಡಿ. ಮಾನಸಿಕ ಅಸ್ವಸ್ಥರಾಗಿದ್ದಾರೆ ನಮ್ಮಲ್ಲೇ ಡಾಕ್ಟರ್ ಗಳಿದ್ದಾರೆ. ಟ್ರಿಟ್ಮೆಂಟ್ ಕೊಡಿಸುತ್ತೇವೆ.‌ ಮಾನಸಿಕವಾಗಿ ಅಸ್ವಸ್ಥತೆಯ ಸಮಸ್ಯೆ ಇದ್ದರೆ ಮುಚ್ಚಿಡಬೇಡಿ ಇದರಿಂದ ಏನೂ ಸಮಸ್ಯೆ ಇಲ್ಲ. ನಾವು ಸಹಕಾರ ಕೊಟ್ಟು ನಿಮಗೆ ಟ್ರಿಂಟ್ ಮೆಂಟ್ ಕೊಡುತ್ತೇವೆ ಎಂದು ವ್ಯಂಗ್ಯವಾಡಿದರು.

ನಮ್ಮ ಲೀಡರ್ ಬಗ್ಗೆ ಮಾತಾಡಿದರೆ ನಾವು ನಿಮ್ಮ ಲೀಡರ್ ಬಗ್ಗೆ ಮಾತಾಡಬೇಕಾಗುತ್ತೆ. ನೀವು ನಮ್ಮ ಲೀಡರ್ ಬಗ್ಗೆ ಸಾರ್ವಜನಿಕವಾಗಿ ಹೇಳೋಕೆ ರೇಡಿಯಿದ್ದರೆ, ನಿಮ್ಮ ಲೀಡರ್ ಗಳ ಬಗ್ಗೆ ನಾವು ಸಾರ್ವಜನಿಕವಾಗಿ ಹೇಳೋದನ್ನು ಕೆಳೋಕೆ ರೆಡಿ ಇರಬೇಕು ಎಂದರು.

ಮೋದಿ ಹೆಬ್ಬೆಟ್ಟು ಗಿರಾಕಿ ಎಂಬ ಹೇಳಿಕೆ ಸಮರ್ಥನೆ ಮಾಡಿಕೊಂಡ ಪ್ರಿಯಾಂಕ, ಹೆಬ್ಬೆಟ್ಟು ಅಸಂವಿಧಾನಿಕ ಪದವಂತೂ ಅಲ್ಲ. ಮೋದಿ ಏನ್ ಓದಿದ್ದಾರೆ ಅನ್ನೋದು ಆರ್ ಟಿ ಐ ನಲ್ಲೇ ಕೊಟ್ಟಿಲ್ಲ. ಅವರ ಕ್ಲಾಸ್ ಮೇಟ್ ಯಾರು ಅನ್ನೋದು ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ‌ ಮೇಲೆ ಡ್ರಗ್ಸ್ ಸೇವನೆ ಹೆಚ್ಚಾಗುತ್ತಿದೆ. ದೇಶ್ಯಾದ್ಯಂತ ಡ್ರಗ್ಸ್ ಸೇವನೆ ಕೇಸಲ್ಲಿ ಬಿಜೆಪಿ ನಾಯಕರೇ ಬಂಧಿತರಾಗಿದ್ದಾರೆ. ಕಟೀಲ್ ನಿಮಗೆ ನಿಜವಾಗಿಯೂ ಶಕ್ತಿ ಇದ್ದರೆ ರಾಹುಲ್ ಗಾಂಧಿಯರನ್ನು ಪ್ರಶ್ನೆ ಮಾಡಬೇಡಿ. ಅಮಿತ್ ಷಾ ಅವರಿಗೆ ಕೇಳಿ, ಬೊಮ್ಮಾಯಿ ಸರ್ಕಾರಕ್ಕೆ ಕೇಳಿ ಎಂದರು.

ಕಳೆದ ತಿಂಗಳು ಗುಜರಾತ್ ನಲ್ಲಿ ಅದಾನಿಗೆ ಸೇರಿದ ಖಾಸಗಿ ಬಂದರ್ ನಲ್ಲಿ 3 ಸಾವಿರ ಕೆಜಿ ಡ್ರಗ್ ಸಿಕ್ಕಿದೆ. 25 ಸಾವಿರ ಕೆ.ಜಿ. ಹೆರಾಯಿನ್ ಸಿಕ್ಕಿದೆ. ಇದು ಪಾಕಿಸ್ತಾನ ಮತ್ತು ಅಫಘಾನಿಸ್ಥಾನದಿಂದ ಬರುತ್ತಿದೆ. ಯುವಕರಿಗೆ ಉದ್ಯೋಗ ಕೊಡಿ ಎಂದರೆ ನಶೆ ಕೊಡುತ್ತಿದ್ದಾರೆ. ಮೋಹನ್ ಭಾಗವತ್ ಕೂಡ ಡ್ರಗ್ ಹಾವಳಿ ಹೆಚ್ಚಾಗ್ತಿದೆ ಎಂದು ಹೇಳಿದ್ದಾರೆ. ಕಳೆದ ಏಳು ವರ್ಷಗಳಿಂದ ಇವರದ್ದೆ ಸರ್ಕಾರ ಆಳ್ವಿಕೆಯಲ್ಲಿದೆ. ಇದಕ್ಕೆ ಕಡಿವಾಣ ಹಾಕಲು ಆಗುತ್ತಿಲ್ಲ ಎಂದು ಆರೋಪಿಸಿದ ಅವರು, ಸಿಬಿಐ, ಇಡಿಗಳೆಲ್ಲ ಯಡಿಯೂರಪ್ಪ ಪಿಎಗಳಿಗೆ ತೊಂದರೆ ಕೊಡಲು ಬಿಟ್ಟಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here