ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : 12ನೇ ಶತಮಾನದಲ್ಲಿದ್ದ ಶರಣರು ಜಾತಿ, ತಾರತಮ್ಯವನ್ನು ಮರೆತು ಸಮಾಜವನ್ನು ಒಗ್ಗೂಡಿಸಲು ಶ್ರಮಿಸಿದ್ದಾರೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಡಾ. ಕೊಟ್ಟೂರೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿಯ ಸಮೀಪದ ಹರ್ಲಾಪೂರ ಕೊಟ್ಟೂರೆಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ 300ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಠವು ನಿರಂತರ ಸಮಾಜಮುಖಿ ಕಾರ್ಯದಲ್ಲಿ ಮುನ್ನೆಡೆಯುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಅರಕ್ಷಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಮಹನೀಯರನ್ನು ಸನ್ಮಾನಿಸಿ ಗೌರವಿಸುವುದು ಹಮ್ಮೆ ತಂದಿದೆ. ಇಂತಹ ಕಾರ್ಯಕ್ರಮಗಳಲ್ಲಿ ಸರ್ವರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುತ್ತಿರುವದು ಸ್ವಾಗತಾರ್ಹ ಎಂದರು.
ನಿವೃತ್ತ ಶಿಕ್ಷಕ ರಾಮಣ್ಣ ಬೆಳಧಡಿ ಮಾತನಾಡಿ, ಕೊಟ್ಟೂರೇಶ್ವರ ಮಠದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸಮಾಜದಲ್ಲಿ ಉತ್ತಮ ಕೆಲಸ ಮಾಡುವವರನ್ನು ಗುರುತಿಸಿ ಗೌರವಿಸುವುದು ಸಮಾಜಮುಖಿ ಕೆಲಸವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿದರೆ ಪರಸ್ಪರ ಸ್ನೇಹ, ಸಂಬಂಧಗಳು ಗಟ್ಟಿಯಾಗುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ರವಿ ಮರಡಿ, ರಮೇಶ ಗುಂಜಳ, ಹನುಮಂತ ಯಾಡಿಯಾಪೂರ, ಮಂಜುನಾಥ ಪೂಜಾರ, ಷಣ್ಮೂಖಪ್ಪ ಚೌಡಕಿ, ಗಣೇಶ ಪೂಜಾರ, ನಾಗಪ್ಪ ಬೆಳಕ್ಕಿ, ಯಮನೂರಪ್ಪಮ ಪೂಜಾರ, ರವಿ ಯಡಿಯಾಪೂರ, ಪರಶುರಾಮ ಯಾಡಿಯಾಪೂರ, ಮಲ್ಲಿಕಾರ್ಜುನ ಚಟ್ರಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಎಚ್. ಕುಸುಗಲ್, ಕೆ.ವಿ. ಕಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ದೇವೇಂದ್ರಪ್ಪ ಜಮಲಿಂಗಪ್ಪನವರ, ನಾಗೇಂದ್ರ ಅರ್ಕಸಾಲಿ ಸಂಗೀತ ಸೇವೆ ನೀಡಿದರು. ಗ್ರಾ.ಪಂ ಮಾಜಿ ಸದಸ್ಯ ಸಿದ್ದು ಯಾಳವಾಡ, ಚನಬಸಪ್ಪ ಡೋಣಿ, ಚಂದ್ರಪ್ಪ ಗದಗ, ಬಸವರಾಜ ಗೊರವರ, ಶಿವಾನಂದ ಪಟ್ಟೇದ ಉಪಸ್ಥಿತರಿದ್ದರು. ವೆಂಕಟೇಶ ಜುಂಜಣ್ಣಿ ಸ್ವಾಗತಿಸಿ ನಿರೂಪಿಸಿದರು. ಶರಣಪ್ಪಗೌಡ ಸಿದ್ದನಗೌಡ್ರ ವಂದಿಸಿದರು.