ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶ್ರಾವಣ ಮಾಸದಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದ ಮುಕ್ತಾಯ ಸಮಾರಂಭದ ಅಂಗವಾಗಿ ಕುಂಭ ಮೆರವಣಿಗೆ ನೆರವೇರಿತು.
Advertisement
ಗ್ರಾಮದ ಪ್ರಮುಖ ಬೀದಿಗಳಲ್ಲಿ ಯುವಕರ ಜಾಂಜ್ ಮೇಳದೊಂದಿಗೆ ಮುತ್ತೈದೆಯರ ಪೂರ್ಣ ಕುಂಭ ಮೆರವಣಿಗೆಯು ಸಾಗಿತು. ಸೆ. 5ರಂದು ಮುಂಜಾನೆ 11ಕ್ಕೆ ಶ್ರಾವಣ ಮಾಸದಂಗವಾಗಿ ಹಮ್ಮಿಕೊಂಡಿದ್ದ ಶರಣ ತತ್ವ ಚಿಂತನೆಯ ಪ್ರವಚನ ಸಮಾರೋಪ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಲಿದ್ದು, ಸಾನ್ನಿಧ್ಯವನ್ನು ಮುಂಡರಗಿಯ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ವಹಿಸುವರು. ಪ್ರವಚನಕಾರರಾದ ಡಾ. ಗಿರಿಜಾ ಹಸಬಿ ಅವರು ಪ್ರವಚನ ಮುಕ್ತಾಯ ಮಾಡುವರು.
ಷಡಕ್ಷರಯ್ಯ ಬದ್ನಿಮಠ, ಬಸನಗೌಡ ಪಾಟೀಲ ಸಂಗೀತ ಸೇವೆ ನೀಡುವರು ಎಂದು ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.