ಬೆಂಗಳೂರು:- ರೇಣುಕಾಸ್ವಾಮಿ ಸಾವಿಗೂ ಮುನ್ನ ದಯನೀಯ ಸ್ಥಿತಿಯ ಫೋಟೊ ಇದೀಗ ರಿವೀಲ್ ಆಗಿದ್ದು, ವ್ಯಕ್ತಿಯ ಸ್ಥಿತಿ ನೋಡಿ ಮರುಕ ಹುಟ್ಟುವಂತೆ ಮಾಡಿದೆ.
ರೇಣುಕಾಸ್ವಾಮಿ ಕಣ್ಣೀರಿಡುತ್ತ, ಗೋಗರೆಯುತ್ತಿರುವ ಸ್ಥಿತಿಯ ಫೋಟೋ ರಿವೀಲ್ ಆಗಿದೆ. ಮೈಮೇಲೆ ಬಟ್ಟಿಯಿಲ್ಲದೇ ಆರೋಪಿಗಳ ಮುಂದೆ, ನನ್ನನ್ನು ಬಿಟ್ಟುಬಿಡಿ ಎಂಬಂತೆ ಸಂತ್ರಸ್ತ ಅಂಗಲಾಚುತ್ತಿರುವಂತಿರುವ ಫೋಟೊ ವೈರಲ್ ಆಗಿದೆ.
ಪಟ್ಟಣಗೆರೆ ಶೆಡ್‌ನಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿತ್ತು. ಚಿತ್ರಹಿಂಸೆ ಕೊಟ್ಟು ಗ್ಯಾಂಗ್ ಹತ್ಯೆ ಮಾಡಿತ್ತು. ಈಗ ರಿವೀಲ್ ಆಗಿರುವ ಫೋಟೊದಲ್ಲಿ, ರೇಣುಕಾಸ್ವಾಮಿ ಹಿಂದೆ ಲಾರಿಗಳು ನಿಂತಿವೆ. ನೆಲದಲ್ಲಿ ಕುಳಿತಿರುವ ಸಂತ್ರಸ್ತ ಕೈಚಾಚಿ ಗೋಗರೆಯುತ್ತಿರುವ ಸ್ಥಿತಿಯಲ್ಲಿದ್ದಾನೆ.
ಇನ್ನೂ ಕೊಲೆ ಪ್ರಕರಣದಲ್ಲಿ ಬುಧವಾರ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಕೋರ್ಟ್‌ಗೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. 4,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ ಎನ್ನಲಾಗಿದೆ.