ಸೇತುವೆ ದಾಟುವಾಗ ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಶವ ಪತ್ತೆ: ಹೆದ್ದಾರಿ ತಡೆದು ಸ್ಥಳೀಯರ ಆಕ್ರೋಶ!

0
Spread the love

ಗದಗ:- ಹಳ್ಳದ ಸೇತುವೆ ರಸ್ತೆ ದಾಟುವ ವೇಳೆ ನೀರಿನಲ್ಲಿ ಕೊಚ್ಚಿ ಹೋದ ಬೈಕ್ ಸವಾರ ಶವವಾಗಿ ಪತ್ತೆಯಾಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಮತ್ತು ಬೆಣ್ಣೆಹಳ್ಳಿ ಮಾರ್ಗಮಧ್ಯೆ ಘಟನೆ ಜರುಗಿದೆ.

Advertisement

ವಿಜಯನಗರ ಜಿಲ್ಲೆ ಏಣಗಿ‌ ಬಸಾಪುರ ಗ್ರಾಮದ ನಿವಾಸಿ 32 ವರ್ಷದ ರವಿಕುಮಾರ ಹಳ್ಳದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ವ್ಯಕ್ತಿ.

ಬೈಕ್‌ ಮೂಲಕ ಇಬ್ಬರು ಸವಾರರು ಸೇತುವೆ ದಾಟುತ್ತಿದ್ದರು. ಈ ವೇಳೆ ಕಾಲು‌ಜಾರಿ ನೀರಿನ ರಭಸಕ್ಕೆ‌ ಓರ್ವ ಸವಾರ ಕೊಚ್ಚಿ ಹೋಗಿದ್ದಾರೆ. ಕೊಚ್ಚಿ ಹೋಗುತ್ತಿದ್ದ ರವಿಕುಮಾರನನ್ನ ನೀರಿನಿಂದ‌ ಮೇಲೆತ್ತಲು ಮತ್ತೋರ್ವ ಸವಾರ ಪ್ರಯತ್ನ ಪಟ್ಟಿದ್ದಾನೆ. ಆದರೆ ನೀರಿನ ರಭಸಕ್ಕೆ‌ ಮೇಲೆ ಬರಲಾಗದೇ ರವಿಕುಮಾರ ಕೊಚ್ಚಿ ಹೋಗಿದ್ದು, ಇದೀಗ ಮೃತದೇಹ ಸಿಕ್ಕಿದೆ.

ತಡರಾತ್ರಿ ಸ್ಥಳಕ್ಕೆ ಪೊಲೀಸರು‌ ಹಾಗೂ ಅಗ್ನಿಶಾಮಕ‌ ಸಿಬ್ಬಂದಿ ದೌಡಾಯಿಸಿ ಹಳ್ಳದಲ್ಲಿ ಕೊಚ್ಚಿ ಹೋಗಿರೋ ರವಿಕುಮಾರ್ ಗಾಗಿ ಶೋಧ ನಡೆಸಿದರು. ಕಾರ್ಯಚರಣೆಯಿಂದಾಗಿ ಇದೀಗ ರವಿಕುಮಾರ್ ಶವ ಪತ್ತೆಯಾಗಿದೆ.

ಸೇತುವೆ ಕಿರಿದಾದದ ಹಿನ್ನೆಲೆ ಹಲವು ವರ್ಷಗಳಿಂದ ಅವಘಡ ಸಂಭವಿಸುತ್ತಿವೆ. ಹಲವಾರು ಬಾರಿ‌ ಸೇತುವೆ ಎತ್ತರಿಸುವಂತೆ ಗ್ರಾಮಸ್ಥರು ಪ್ರತಿಭಟನೆ ಹಾಗೂ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ಯಾರೇ ಎಂದಿಲ್ಲ. ನಾಗರಹಳ್ಳಿ‌ ಹಾಗೂ ಬೆಣ್ಣಿಹಳ್ಳಿ‌ ಗ್ರಾಮಕ್ಕೆ‌ ಸಂಪರ್ಕ ಕಲ್ಪಿಸೋ ಸೇತುವೆ ಇದಾಗಿದ್ದು, ಹಳ್ಳಕ್ಕಿಂತ ಸೇತುವೆ ಕೆಳಮಟ್ಟದಲ್ಲಿರುವ ಕಾರಣ ಪದೇ ಪದೇ ಇಂಥಹ ಅನಾಹುತ ಸಂಭವಿಸುತ್ತಿದೆ.

ಹಲವು ಅಮಾಯಕರು ಹಳ್ಳದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಇಷ್ಟಾದರೂ ಬುದ್ದಿ‌ ಕಲಿಯದ ಸ್ಥಳಿಯ ಜ‌ನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here