• About
  • Advertise
  • Privacy & Policy
  • Contact
Wednesday, October 28, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ಅಕ್ಕನ ವಚನಗಳು ಬದುಕಿನ ದಾರಿದೀಪ : ಸುಧಾ ಎ.ಹುಚ್ಚಣ್ಣವರ

News Desk by News Desk
May 4, 2024
in Gadag News
upanyasa
0
SHARES
0
VIEWS
Share on Facebook

ವಿಜಯಸಾಕ್ಷಿ ಸುದ್ದಿ, ಗದಗ : 12ನೇ ಶತಮಾನದಲ್ಲಿ ಬಸವಣ್ಣನವರ ಪ್ರಭಾವಕ್ಕೆ ಒಳಗಾದ ಶರಣ-ಶರಣೆಯರಲ್ಲಿ ಅಕ್ಕಮಹಾದೇವಿಯವರು ಪ್ರಮುಖರಾಗಿದ್ದಾರೆ. ಅಕ್ಕ ದಿಟ್ಟತನದ ವ್ಯಕ್ತಿತ್ವ ತೋರಿದ ಆಧ್ಯಾತ್ಮಿಕ ಕ್ಷೇತ್ರದ ಧ್ರುವತಾರೆಯಾಗಿ, ಕನ್ನಡದ ಮೊಟ್ಟಮೊದಲ ವಚನಕಾರ್ತಿಯಾಗಿ ಹಲವು ಸಂಕಷ್ಟಗಳನ್ನು ಮೀರಿ ಮೌಲ್ಯಯುತ ಸಂದೇಶಗಳನ್ನು ಈ ಜಗತ್ತಿಗೆ ನೀಡಿದ್ದಾಳೆ ಎಂದು ಶಿರಹಟ್ಟಿಯ ಎಫ್.ಎಂ. ಡಬಾಲಿ ಕಾಲೇಜಿನ ಉಪನ್ಯಾಸಕಿ ಶರಣೆ ಸುಧಾ ಎ.ಹುಚ್ಚಣ್ಣವರ ಅಭಿಪ್ರಾಯಪಟ್ಟರು.

ಅವರು ಶಿವಾನಂದ ನಗರದ ಬಸವ ಸಮದಾಯ ಭವನದಲ್ಲಿ ಬಸವದಳ ಗದಗ-ಬೆಟಗೇರಿ, ಜಿಲ್ಲಾ, ತಾಲೂಕಾ ಶರಣ ಸಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ `ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಅಕ್ಕನ ಪ್ರತಿಯೊಂದು ವಚನದಲ್ಲಿ ಜೀವನದ ಮಾರ್ಮಿಕ ನುಡಿ ಇದೆ. ಚೆನ್ನಮಲ್ಲಿಕಾರ್ಜುನ ದೇವರ ಕಾಣುವ ಆತುರವಿದೆ. ಸಾರ್ಥಕ ಬದುಕಿಗೆ ಅಕ್ಕನ ವಚನಗಳು ದಾರಿದೀಪವಾಗಿವೆ. ಅಲ್ಲದೇ ಬದುಕಿನ ಅಂತರಾಳವನ್ನು ಅರಿಯುವ ತವಕವಿದೆ ಮತ್ತು ಅಕ್ಕಮಹಾದೇವಿಯ ದಿವ್ಯ ವ್ಯಕ್ತಿತ್ವ ಇಡೀ ಹೆಣ್ಣು ಕುಲದ ಗೌರವದ ಸಂಕೇತವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಶರಣ ಕೆ. ಎಸ್. ಚೆಟ್ಟಿ ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಶರಣೆ ಪ್ರೇಮಾ ಮೇಟಿ ಮಾತನಾಡಿದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶರಣೆ ಸುಲೋಚನಾ ಎಂ.ಐಹೊಳಿ ವಚನ ಪ್ರಾರ್ಥನೆ ಮಾಡಿದರು. ಶರಣ ಎನ್.ಎಚ್. ಹಿರೇಸಕ್ಕರಗೌಡ್ರ ಸ್ವಾಗತಿಸಿದರು. ಗದಗ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣ ಪ್ರಕಾಶ ಅಸುಂಡಿ ಶರಣು ಸಮರ್ಪಣೆಗೈದರೆ, ಶರಣೆ ಮಂಗಳಾ ಬಿ.ಕಾಮಣ್ಣವರ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದಲ್ಲಿ ಸಂಘಟನೆಗಳ ಸದಸ್ಯರಾದ ಗಿರಿಜಕ್ಕ ಧರ್ಮರಡ್ಡಿ, ಗೌರಕ್ಕ ಬಡಿಗಣ್ಣವರ, ಗಂಗಮ್ಮ ಹೂಗಾರ, ಮಂಜುಳಾ ಹಾಸಿಲಕರ, ಸರೋಜಕ್ಕ ಲಿಂಗಧಾಳ, ಜಯಶ್ರೀ ಹಳ್ಳಿಕೇರಿ, ಶಾಂತಕ್ಕ ಮುಂದಿನಮನಿ, ಮಂಜುಳಾ ಅಕ್ಕಿ, ವೀಣಾ ತಿರ್ಲಾರ್ಪೂರ, ಪುಷ್ಪಾ ಭಂಡಾರಿ, ಸುರೇಖಾ ಪಿಳ್ಳೆ, ಅಕ್ಕಮಹಾದೇವಿ ಚೆಟ್ಟಿ, ರೇಣಕ್ಕ ಹಾಸಿಲಕರ, ಗಾಳಪ್ಪನವರ, ಜಿನಗಾ, ಶರಣರಾದ ಎಸ್.ಎನ್. ಹಕಾರಿ, ಎಸ್.ಎ. ಮುಗದ, ಮೃತ್ಯುಂಜಯ ಜಿನಗಾ, ರಾಮಣ್ಣ ಕಳ್ಳಿಮನಿ, ಬಿ.ವಿ. ಕಾಮಣ್ಣವರ, ಎನ್.ಎಸ್. ಬಡಿಗಣ್ಣವರ, ಎಸ್.ಎಂ. ಕವಳಿಕಾಯಿ, ಎಸ್.ಬಿ. ಸೋಮಗೊಂಡ, ರಾಚಪ್ಪ ಚವಡಿ ಮುಂತಾದವರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ಶರಣ ವಿ.ಕೆ. ಕರೇಗೌಡ್ರ ಮಾತನಾಡಿ, ಶರಣೆ ಅಕ್ಕಮಹಾದೇವಿಯ ವಚನಗಳು ಸರ್ವಕಾಲಕ್ಕೂ ಉತ್ಸಾಹವನ್ನು ತುಂಬುವ, ಜೀವನ ಸಾರ್ಥಕಪಡಿಸಿಕೊಳ್ಳುವ ಚಿಲುಮೆಗಳಾಗಿವೆ.

ಪ್ರತಿಯೊಬ್ಬರೂ ಬಸವಾದಿ ಶಿವಶರಣರ ವಚನಗಳನ್ನು ಅರಿತು, ಆಚರಿಸಿದಾಗ ಮಾತ್ರ ವಚನಗಳ ಮೌಲ್ಯ ಗೊತ್ತಾಗುತ್ತದೆ ಎಂದರು.

Tags: ``Vairagyanidi Akkamahadevi Jayanti''Basavadal Gadag-BetageriDistrict Global Lingayat Mahasabha GadagDistrict Taluka Sharan Sahitya ParishadF.M. Sharane Sudha A. Huchchannavara Lecturer of Dabali CollegeGadaggadaganewsKadali Women's ForumLatestNewsupdatenews
ShareSendShare
Previous Post

ಆನಂದಸ್ವಾಮಿರನ್ನು ಬೆಂಬಲಿಸಿ ಬೀದಿ ಬದಿ ವ್ಯಾಪಾರಸ್ಥರ ಸಭೆ

Next Post

ಶ್ರೀ ಜ. ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

News Desk

News Desk

Next Post
rambhapuri

ಶ್ರೀ ಜ. ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಕಬ್ಬು ಬೆಳೆಗಾರರ ಹೋರಾಟ 4ನೇ ದಿನಕ್ಕೆ: ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಸರ್ಕಾರಕ್ಕೆ ಡೆಡ್‌ಲೈನ್!

ಕಬ್ಬು ಬೆಳೆಗಾರರ ಹೋರಾಟ 4ನೇ ದಿನಕ್ಕೆ: ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಸರ್ಕಾರಕ್ಕೆ ಡೆಡ್‌ಲೈನ್!

October 28, 2026
ಆಟೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ: 13 ವರ್ಷಗಳ ಬಳಿಕ ದರ ಪರಿಷ್ಕರಿಸಿದ ತಮಿಳುನಾಡು ಸರ್ಕಾರ

ಆಟೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ: 13 ವರ್ಷಗಳ ಬಳಿಕ ದರ ಪರಿಷ್ಕರಿಸಿದ ತಮಿಳುನಾಡು ಸರ್ಕಾರ

October 28, 2026
ನೊಂದ ರೈತನಿಗೆ ಸಾಂತ್ವನ ಹೇಳಿದ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ: ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ ತಾಂಡಾ ನಿವಾಸಿಗಳು

ನೊಂದ ರೈತನಿಗೆ ಸಾಂತ್ವನ ಹೇಳಿದ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ: ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ ತಾಂಡಾ ನಿವಾಸಿಗಳು

October 28, 2026
ನೆಲಮಂಗಲದಲ್ಲಿ ಲೋಕಾ ಕಾರ್ಯಾಚರಣೆ! ರೈತನಿಂದ ಹಣ ಪಡೆಯುವಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಸರ್ವೆಯರ್

ನೆಲಮಂಗಲದಲ್ಲಿ ಲೋಕಾ ಕಾರ್ಯಾಚರಣೆ! ರೈತನಿಂದ ಹಣ ಪಡೆಯುವಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಸರ್ವೆಯರ್

October 28, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಕಬ್ಬು ಬೆಳೆಗಾರರ ಹೋರಾಟ 4ನೇ ದಿನಕ್ಕೆ: ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಸರ್ಕಾರಕ್ಕೆ ಡೆಡ್‌ಲೈನ್!

ಕಬ್ಬು ಬೆಳೆಗಾರರ ಹೋರಾಟ 4ನೇ ದಿನಕ್ಕೆ: ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಸರ್ಕಾರಕ್ಕೆ ಡೆಡ್‌ಲೈನ್!

October 28, 2026
ಆಟೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ: 13 ವರ್ಷಗಳ ಬಳಿಕ ದರ ಪರಿಷ್ಕರಿಸಿದ ತಮಿಳುನಾಡು ಸರ್ಕಾರ

ಆಟೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ: 13 ವರ್ಷಗಳ ಬಳಿಕ ದರ ಪರಿಷ್ಕರಿಸಿದ ತಮಿಳುನಾಡು ಸರ್ಕಾರ

October 28, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper