HomeGadag Newsಆಗಿ ಹುಣ್ಣಿಮೆ ದಿನದಂದು ವಚನ-ವಾಚನ ಕಾರ್ಯಕ್ರಮ

ಆಗಿ ಹುಣ್ಣಿಮೆ ದಿನದಂದು ವಚನ-ವಾಚನ ಕಾರ್ಯಕ್ರಮ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬೆಟಗೇರಿಯ ಪಾಲಾ ಬಾದಾಮಿ ರಸ್ತೆ ಹೊಂದಿಕೊಂಡಿರುವ ದೇವರ ದಾಸಿಮಯ್ಯ ಮೂರ್ತಿ ಆವರಣದಲ್ಲಿ 16ನೇ ವಚನ-ವಾಚನ ಕಾರ್ಯಕ್ರಮವನ್ನು ಆಗಿ ಹುಣ್ಣಿಮೆ ದಿನದಂದು ನೆರವೇರಿಸಲಾಯಿತು.

ಮಾರುತಿ ಸೂರಿ ದೇವರ ದಾಸಿಮಯ್ಯನವರ ಪುತ್ಥಳಿಗೆ ಪೂಜೆ ಸಲ್ಲಿಸಿದರು. ಸಾಹಿತಿ ರಾಮಚಂದ್ರ ಹುಬ್ಬಳ್ಳಿ ಹಾಗೂ ಬಿ.ಹಿಂಡಿ ವಚನ ವಾಚನ ಮಾಡಿದರು. ಈ ಸಂದರ್ಭದಲ್ಲಿ ಶ್ರೀನಿವಾಸ ಹುಬ್ಬಳ್ಳಿ ಮಾತನಾಡಿ, ಶತಮಾನಗಳಿಂದ ನೇಕಾರಿಕೆಯನ್ನು ಉಳಿಸಿಕೊಂಡು ಬಡತನದಲ್ಲಿಯೇ ಸಾಂಪ್ರದಾಯಿಕ ಬದುಕು ಸಾಗಿಸುತ್ತಾ ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಪಕ್ಷಪಾತ ಮಾಡದೆ ಹಲವಾರು ಪಕ್ಷಗಳಲ್ಲಿ ನಮ್ಮ ಸಮಾಜದ ನಾಯಕರು ರಾಜಕಾರಣಿಗಳ ಜೊತೆಗೆ ಪ್ರಾಮಾಣಿಕವಾಗಿ ಬೆಂಬಲವನ್ನು ನೀಡಿ ಶಕ್ತಿ ತುಂಬುತ್ತಾ ಬಂದಿದ್ದಾರೆ.

ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿರುವ ನೇಕಾರ ಸಮಾಜಗಳಿಗೆ ರಾಜಕೀಯ ಧ್ವನಿ ನೀಡಬೇಕಾದದ್ದು ರಾಷ್ಟç ಮತ್ತು ರಾಜ್ಯಮಟ್ಟದ ಪಕ್ಷಗಳ ಜವಾಬ್ದಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಅಶೋಕ ಬಣ್ಣದ, ವಸಂತ ಇಂಜಿನಿ, ನಾರಾಯಣ ಕಂಗೊರಿ, ಅನಿಲ ಗಡ್ಡಿ, ಸಂಕಣ್ಣ ಹಾದಿಮನಿ, ಶಿವರಾಮ ಚಳಗೇರಿ ನಾಗರಾಜ ಬಣ್ಣದ, ಶಿಗ್ಲಿ ಬಸವ, ಶಂಕ್ರಪ್ಪ ಗಂಜಿ ಮುಂತಾದವರು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!