HomeGadag Newsಅಡವಿಸೋಮಾಪೂರ ಸಣ್ಣ ತಾಂಡೆ ಶಾಲಾ ಪ್ರಾರಂಭೋತ್ಸವ

ಅಡವಿಸೋಮಾಪೂರ ಸಣ್ಣ ತಾಂಡೆ ಶಾಲಾ ಪ್ರಾರಂಭೋತ್ಸವ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಅಡವಿಸೋಮಾಪೂರ ಸಣ್ಣ ತಾಂಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಂಡು ಅವರಿಗೆ ಹೂವು, ಸಿಹಿ ನೀಡಿ, ಇಲಾಖೆ ಉಚಿತವಾಗಿ ನೀಡಿದ ಪಠ್ಯ-ಪುಸ್ತಕ, ಎರಡು ಜೊತೆ ಸಮವಸ್ತ್ರ, ಲೇಖನ ಸಾಮಗ್ರಿ ವಿತರಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಪವಾರ ಚಾಲನೆ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕ ಮಲ್ಲೇಶ ಡಿ.ಎಚ್. ಮಾತನಾಡಿ, ನಮ್ಮ ಶಾಲೆಯಲ್ಲಿ ಉಚಿತವಾಗಿ ಕ್ಷೀರಭಾಗ್ಯ, ರಾಗಿ ಮಾಲ್ಟ್, ಮಧ್ಯಾಹ್ನದ ಬಿಸಿಯೂಟ, ಪಠ್ಯ ಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ನೀಡಿ, ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತೇವೆ. ತಮ್ಮ ಮಕ್ಕಳನ್ನು ತಪ್ಪದೇ ನಮ್ಮ ಶಾಲೆಗೆ ದಾಖಲು ಮಾಡಲು ಪಾಲಕರಿಗೆ ಕರೆ ನೀಡಿದರು.

ಶಿಕ್ಷಕರಾದ ಎಸ್.ಜಿ. ಅಮ್ಮಿನಭಾವಿ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು. ಪಿ.ಬಿ. ಕಿಲಬನವರ, ಎಸ್.ಟಿ. ಹಳಕಟ್ಟಿ, ಗ್ರಾ.ಪಂ ಸದಸ್ಯ ವೆಂಕಟೇಶ್ ಲಮಾಣಿ, ಲಕ್ಷ್ಮಣ ಲಮಾಣಿ, ಸೋಮನಾಥ ಲಮಾಣಿ, ಥಾವರೆಪ್ಪ ಪವಾರ, ಕಳಕಪ್ಪ ಚವ್ಹಾಣ, ಬಿಸಿಯೂಟ ಸಿಬ್ಬಂದಿಗಳಾದ ಗಂಗವ್ವ ಲಮಾಣಿ, ಸವಿತಾ ಪವಾರ, ದೇವಲೆಪ್ಪ ಲಮಾಣಿ, ರೇವಪ್ಪ ಲಮಾಣಿ, ಉಮೇಶ ಲಮಾಣಿ, ಸೋಮನಾಥ ರಾಠೋಡ, ಸೀತವ್ವ ಲಮಾಣಿ, ಸಾವಿತ್ರಿ ರಾಠೋಡ, ದೇವಕ್ಕ ಲಮಾಣಿ, ಲಕ್ಷ್ಮಿ ಲಮಾಣಿ, ಮೀರವ್ವ ಪವಾರ, ಶಾಂತವ್ವ ರಾಠೋಡ, ರೇಣುಕಾ ಲಮಾಣಿ, ಗೀತಾ ರಾಠೋಡ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img