HomeGadag Newsಬಿವಿವಿಯ ಶಾಲಾ ಸಂಸತ್ ಚುನಾವಣೆ

ಬಿವಿವಿಯ ಶಾಲಾ ಸಂಸತ್ ಚುನಾವಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಬಾಲ ವಿನಾಯಕ ವಿದ್ಯಾನಿಕೇತನದಲ್ಲಿ ಶಾಲಾ ನಾಯಕ-ನಾಯಕಿ ಮತ್ತು ಉಪ ನಾಯಕ-ಉಪನಾಯಕಿಯರನ್ನು ಆಯ್ಕೆ ಮಾಡಲು ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು.

ಚುನಾವಣೆಯಲ್ಲಿ ಪಾಲಿಸಲಾಗುವ ಎಲ್ಲ ಹಂತಗಳನ್ನು ಚಾಚೂ ತಪ್ಪದೇ ಪಾಲಿಸಲಾಯಿತು. ಚುನಾವಣೆ ಘೋಷಣೆಯಿಂದ ಹಿಡಿದು, ನಾಮ ಪತ್ರ ಸಲ್ಲಿಕೆ, ಅಭ್ಯರ್ಥಿಗಳ ಪ್ರಚಾರ ಭಾಷಣ, ಅಭ್ಯರ್ಥಿಗಳ ಪರವಾಗಿ ಪೋಸ್ಟರ್ ಮೇಕಿಂಗ್ ಸ್ಪರ್ಧೆ, ಚುನಾವಣಾ ಜಾಗೃತಿ ನಾಟಕ ಸೇರಿ ಮತದಾನ ದಿನದವರೆಗಿನ ಎಲ್ಲ ಹಂತಗಳನ್ನು ಪಾಲಿಸಲಾಯಿತು.

ಶಾಲೆಯ ಯುವ ಪೀಳಿಗೆಯಲ್ಲಿ ಚುನಾವಣೆ ಮತ್ತು ಮತದಾನದ ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ವಿಶೇಷ ಶ್ರಮವಹಿಸಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಮಾದರಿಯ ತಂತ್ರಾಂಶವನ್ನು ತಯಾರಿಸಿ ವಿದ್ಯಾರ್ಥಿಗಳು ಮತಗಳನ್ನು ಚಲಾಯಿಸುವ ಮೂಲಕ ತಮ್ಮ ನಾಯಕ-ನಾಯಕಿಯರನ್ನು ತಾವೇ ಆಯ್ಕೆ ಮಾಡಿದರು.

ಚುನಾವಣೆಯಲ್ಲಿ 3 ಮತಗಟ್ಟೆಗಳಿದ್ದು, 22 ಅಭ್ಯರ್ಥಿಗಳು ಮತ್ತು 439 ಮತದಾರರಿದ್ದು ಚುನಾವಣೆಯಲ್ಲಿ 418 ವಿದ್ಯಾರ್ಥಿ ಮತದಾರರು ಮತದಾನ ಮಾಡಿ ಶೇ 95.12ರಷ್ಟು ಮತದಾನವಾಗಿದೆ. 6ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕನ್ನು ನೀಡಲಾಗಿತ್ತು.

ಚುನಾವಣೆಯ ಫಲಿತಾಂಶವನ್ನು ಶೀಘ್ರ ಪ್ರಕಟಿಸಲಾಗುವುದೆಂದು ಶಾಲಾ ಚುನಾವಣಾ ಅಧಿಕಾರಿ ಮತ್ತು ಶಾಲೆಯ ಹಿರಿಯ ಶಿಕ್ಷಕಿಯಾದ ಸವಿತಾ ತುಕೋಳ ಹೇಳಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img