HomeGadag Newsಮೂಲ ಸೌಕರ್ಯ ಕಲ್ಪಿಸಲು ಸಚಿವರಾದ ಎಚ್.ಕೆ. ಪಾಟೀಲರಿಗೆ ಮನವಿ

ಮೂಲ ಸೌಕರ್ಯ ಕಲ್ಪಿಸಲು ಸಚಿವರಾದ ಎಚ್.ಕೆ. ಪಾಟೀಲರಿಗೆ ಮನವಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಾರ್ಡ್ ನಂ. 16ರ ಹೊಂಬಳನಾಕಾ ಜನತಾ ಕಾಲೋನಿಯ ಸಾರ್ವಜನಿಕರು ಮಳೆಗಾಲದಲ್ಲಿ ಪರದಾಡುವಂತಾಗಿದೆ. ಸರಿಯಾಗಿ ಮಳೆ ನೀರು ಹೊಗಲು ಅನಕೂಲವಿಲ್ಲದೆ ಅಧ್ವಾನ ಸೃಷ್ಟಿಯಾಗುತ್ತಿದೆ ಎಂದು ಹೊಂಬಳ ನಾಕಾ ಜನತಾ ಕಾಲೋನಿ ಅಭಿವೃದ್ಧಿಪರ ಸೇವಾ ಸಂಘದ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಆರೋಪಿಸಿದ್ದಾರೆ.

ಅವರು ಈ ಕುರಿತು ಪ್ರಕಟಣೆ ನೀಡಿ, ಮಳೆ ನೀರು ರಾಜಕಾಲುವೆಯಲ್ಲಿ ಹರಿದು ಹೊಗುವ ಬದಲು ಕಾಲೋನಿಯಲ್ಲಿನ ಮನೆಗೂ ನುಗ್ಗುತ್ತಿದೆ. ಈ ಬಗ್ಗೆ ನಗರಸಭೆ ಅಥವಾ ಜಿಲ್ಲಾಡಳಿತ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರಾದ ಎಚ್.ಕೆ. ಪಾಟೀಲರು ಇತ್ತ ಗಮನಿಸಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವದರೊಂದಿಗೆ ಈ ಭಾಗದ ನೊಂದ ಬಡ ಜನತೆಗೆ ನೆಮ್ಮದಿಯಿಂದ ಬದುಕಲು ಅನಕೂಲತೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!