HomeGadag Newsವಿಶ್ವನಾಥ ಯಳಮಲಿಯವರಿಗೆ ಸನ್ಮಾನ

ವಿಶ್ವನಾಥ ಯಳಮಲಿಯವರಿಗೆ ಸನ್ಮಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಎ.ಪಿ.ಎಂ.ಸಿ. ವಾಯುವಿಹಾರ ಮಿತ್ರರಿಂದ ಮುಖ್ಯಮಂತ್ರಿಗಳ ಬಂಗಾರದ ಪದಕ ಪಡೆದ ಗದಗ ಜಿಲ್ಲೆಯ ಗೃಹರಕ್ಷಕ ದಳದ ಸಮಾದೇಷ್ಟ ವಿಶ್ವನಾಥ ಯಳಮಲಿಯವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಧುಸೂಧನ ಪುಣೇಕರ ಮಾತನಾಡಿ, ಪ್ರತಿಷ್ಠಿತ ಯಳಮಲಿ ಮನೆತನದ ವಿಶ್ವನಾಥ ಯಳಮಲಿಯವರು ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರ ಅವಧಿಯಲ್ಲಿ ಗೃಹರಕ್ಷಕದಳ ಸಮಾದೇಷ್ಟರ ಪದವಿಗೆ ನ್ಯಾಯ ಒದಗಿಸಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಅವಕಾಶಗಳು ಲಭಿಸಲಿ ಎಂದು ಶುಭ ಹಾರೈಸಿದರು.

ಚನ್ನವೀರಪ್ಪ ಹುಣಸಿಕಟ್ಟಿ ಮಾತನಾಡಿ, ಕಳೆದ 4-5 ವರ್ಷಗಳಿಂದ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿ ಜಿಲ್ಲೆಗೆ ಹೆಚ್ಚಿನ ಸೇವೆ ಒದಗಿಸಿದ ವಿಶ್ವನಾಥ ಅವರು ಮುಖ್ಯಮಂತ್ರಿಗಳ ಬಂಗಾರದ ಪದಕಕ್ಕೆ ಅರ್ಹರು.

ಅವರು ಪ್ರತಿವರ್ಷ ಗೃಹರಕ್ಷಕ ದಳದಿಂದ ರಕ್ತದಾನ, ಶ್ರಮದಾನ ಮಾಡುತ್ತ ಪದಕ ಪಡೆದಿದ್ದು ಗದಗ ಜಿಲ್ಲೆ ಹೆಮ್ಮೆ ಪಡುವಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಶರಣು ಗದಗ, ಮುರುಗೇಶ ಬಡ್ನಿ, ಚಂದ್ರು ಸುರಕೋಡ, ಮಹಾಂತೇಶ ಪಾಟೀಲ, ವಿಜಯ ಶಿವಪ್ಪಗೌಡ, ರೇಣುಕಾಪ್ರಸಾದ ಹಿರೇಮಠ, ಅಶೋಕ ಪಾಟೀಲ, ಬಾಪುಗೌಡ ಸಂಕನಗೌಡ, ಬಾಬುಗೌಡ ಮಲ್ಲನಗೌಡ್ರ, ಮೌಲಾಲಿ ಮುಲ್ಲಾನವರ, ಸಂಜಯ ಬಾಗಮಾರ, ವಸಂತ ಚಿಕ್ಕನಗೌಡ್ರ, ಉಮೇಶ ನಾಲ್ವಾಡ, ಸಿದ್ಧಣ್ಣ ಮುನವಳ್ಳಿ, ಸುರೇಶ ರಡ್ಡೇರ, ಪ್ರಕಾಶ ಉಗಲಾಟದ, ಮಂಜುನಾಥ ಬೇಲೇರಿ, ಸಿದ್ಧಣ್ಣ ಹಲವಾಗಲಿ, ಅರವಿಂದ ಕಾಮತ, ತಾತನಗೌಡ ಪಾಟೀಲ, ರಾಜು ಮಲ್ಲಾಡದ, ರಮೇಶ ಶಿಗ್ಲಿ ಹಾಗೂ ವಾಯುವಿಹಾರದ ಎಲ್ಲ ಮಿತ್ರರು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!