ವಿಜಯಸಾಕ್ಷಿ ಸುದ್ದಿ, ರೋಣ : ಇಲ್ಲಿನ ಹೊಳೆಆಲೂರ ಶ್ರೀ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್‌ಎಸ್‌ಎಸ್ ಘಟಕ 1 ಮತ್ತು 2ರ ವತಿಯಿಂದ ಕಾತರಕಿ ಗ್ರಾಮದ ಸುಕ್ಷೇತ್ರ ಗುಡ್ಡದ ರಂಗನಾಥ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅತಿಥಿಗಳಾಗಿ ಪ್ರಾಚಾರ್ಯ ಡಾ.ಪ್ರಭು ಗಂಜಿಹಾಳ, ಪ್ರೊ. ಎನ್.ಆರ್. ಹಿರೆಸಕ್ಕರಗೌಡ್ರ, ಡಾ. ಎಸ್.ಬಿ. ಸಜ್ಜನರ, ಪ್ರೊ. ಎಸ್.ವಾಯ್. ಪೂಜಾರ ಆಗಮಿಸಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರೊ.ವಿಶ್ವನಾಥ ಪಾಟೀಲ ಮಾತನಾಡಿ, ಎನ್‌ಎಸ್‌ಎಸ್‌ನ ಸೇವಾ ಮನೋಭಾವ, ಅದರಿಂದ ಆಗುವ ಪ್ರಯೋಜನಗಳ ಕುರಿತು ವಿವರಿಸಿದರು. ಸ್ವಯಂಸೇವಕರಾದ ರೇಖಾ ಕಲ್ಲನಗೌಡರ, ರಾಕೇಶ ಕುರಿ, ರವಿಚಂದ್ರ ಕುರಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಘಟಕ-1 ಮತ್ತು ಘಟಕ-2ರ ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರೊ. ವಿ.ಪಿ. ಪಾಟೀಲ, ಪ್ರೊ. ಎಂ.ಎಸ್. ಬೇವೂರ, ಪ್ರೊ. ಎಸ್.ಬಿ. ಹಳ್ಳೂರ, ಪ್ರೊ. ವಿ.ಬಿ. ಜಾಲಿಹಾಳ, ಪ್ರೊ. ವಿ.ಎಸ್. ಕಪ್ಪಲಿ, ಪ್ರೊ. ಎಂ.ಎಸ್. ಹೊನವಾಡ ಪಾಲ್ಗೊಂಡಿದ್ದರು.



