HomeGadag Newsಬಿಜೆಪಿಯಿಂದ ಸಸಿ ನೆಡುವ ಕಾರ್ಯಕ್ರಮ

ಬಿಜೆಪಿಯಿಂದ ಸಸಿ ನೆಡುವ ಕಾರ್ಯಕ್ರಮ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿ ಗದಗ ನಗರ ಮಂಡಲ ವತಿಯಿಂದ ವಾರ್ಡ್ ನಂ. 5ರಲ್ಲಿರುವ ಉದ್ಯಾನವನದಲ್ಲಿ ಸಸಿಯನ್ನು ನೆಟ್ಟು ಪರಿಸರವನ್ನು ಉಳಿಸುವ ಶಪಥ ಕೈಗೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿ, ಪಕ್ಷದ ಆದೇಶದ ಮೇರೆಗೆ ಪ್ರತಿ ಮಂಡಲಗಳಲ್ಲಿ ತಾಯಿಯ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಎಲ್ಲ ವಾರ್ಡ್ಗಳಲ್ಲಿ ಹಾಗೂ ಗ್ರಾ.ಪಂ ಮಟ್ಟದಲ್ಲಿ ಮಾಡಬೇಕೆಂದು ಹೇಳಿದರು.

ಬಿಜೆಪಿ ಗದಗ ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ ಮಾತನಾಡಿ, ನಗರದಲ್ಲಿ ಬರುವ 35 ವಾರ್ಡ್ಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಲಿದೆ. ಇಂದು ವಾರ್ಡ್ ನಂ 5ರ ನಗರಸಭಾ ಸದಸ್ಯರಾದ ಲಕ್ಷ್ಮಿ ಶಂಕರ ಕಾಕಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಿರುವುದು ಹೆಮ್ಮೆಯ ವಿಷಯ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಹಿರಿಯರಾದ ಅಶೋಕ ಸಂಕಣ್ಣವರ, ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ನಗರಸಭಾ ಸದಸ್ಯರಾದ ರಾಘವೇಂದ್ರ ಯಳವತ್ತಿ, ನಾಗರಾಜ ತಳವಾರ, ಲಕ್ಷ್ಮಿ ಶಂಕರ ಕಾಕಿ, ದೇವಪ್ಪ ಗೊಟೂರ, ಸುರೇಶ ಚಿತ್ತರಗಿ, ಶಶಿಧರ ದಿಂಡೂರ, ಮಂಜುನಾಥ ಮುಳಗುಂದ, ಧರ್ಮಸಿಂಗ ರಜಪೂತ, ಶಂಕ್ರಪ್ಪ ಮಾದಗುಂಡಿ, ಜ್ಯೋತೆಕ್ಕ ದೂಳಾ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img