HomeGadag Newsಚು.ಸಾ.ಪ ಜಿಲ್ಲಾ ಸಮಿತಿ ರಚನೆಯ ಸಭೆ

ಚು.ಸಾ.ಪ ಜಿಲ್ಲಾ ಸಮಿತಿ ರಚನೆಯ ಸಭೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಗದಗಿನ ಮುಳುಗುಂದ ನಾಕಾದಲ್ಲಿರುವ ಶ್ರೀ ಅಡವೀಂದ್ರಸ್ವಾಮಿಗಳ ಮಠದಲ್ಲಿ ಕ.ಚು.ಸಾ.ಪ. ಗದಗ ಜಿಲ್ಲಾಧ್ಯಕ್ಷೆ ಶೋಭಾ ಮೇಟಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಗದಗ ಜಿಲ್ಲಾ ಸಮಿತಿ ರಚನೆಯ ಪೂರ್ವಭಾವಿ ಸಭೆ ಜರುಗಿತು.

ಸಭೆಯ ಆರಂಭದಲ್ಲಿ ಕನ್ನಡ ನಾಡಿನ ಹೆಮ್ಮೆಯ ಕವಯಿತ್ರಿ, ಬರಹಗಾರ್ತಿ ನಾಡೋಜ ಕಮಲಾಹಂಪ ನಾಗರಾಜಯ್ಯ ಅವರ ಶ್ರದ್ಧಾಂಜಲಿ ಸಭೆಯನ್ನು ನಡೆಸಿ ಮೌನಾಚರಣೆ ಮಾಡಲಾಯಿತು.

ನಂತರ ಸಭೆಯಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಗದಗ ಜಿಲ್ಲಾ ಉಪಾಧ್ಯಕ್ಷರಾಗಿ ಡಾ.ರಾಜೇಂದ್ರ ಗಡಾದ, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಒಡೆಯರ್ ಹಾಗೂ ಖಜಾಂಚಿಯಾಗಿ ಪತ್ರಕರ್ತ ಸಂತೋಷ ಮುರಡಿ ಅವರನ್ನು ಆಯ್ಕೆ ಮಾಡಲಾಯಿತು. ಎಲ್ಲ ತಾಲೂಕುಗಳ ಸಮಿತಿಗಳು ರಚನೆಯಾದ ನಂತರ ಜಿಲ್ಲಾ ಸಮಿತಿಯ ಇನ್ನುಳಿದ ಸ್ಥಾನಗಳನ್ನು ಆಯ್ಕೆ ಮಾಡಲಾಗುವುದು ಎಂದು ಶೋಭಾ ಮೇಟಿ ತಿಳಿಸಿದರು.

ಸಭೆಯಲ್ಲಿ ಪ್ರೇಮಾ ಗುಳಗೌಡರ, ವಿ.ವಿ. ಹಿರೇಮಠ, ಮಂಜುಳಾ ಇಟಗಿ, ಚಂದ್ರಕಲಾ ಇಟಗಿಮಠ, ಗೀತಾ ಹೂಗಾರ, ಪಂಚಯ್ಯ ಹಿರೇಮಠ, ಡಾ. ಕಲ್ಲೇಶ, ಮುರಶಿಳ್ಳಿನ್, ಡಾ.ಅಶೋಕ ಮತ್ತಿಗಟ್ಟಿ, ಕೊಟ್ರೇಶ ಜವಳಿ, ಡೋಣಿ ಮಂಜುನಾಥ, ಭಾಗ್ಯಶ್ರೀ ಹುರಕಡ್ಲಿ, ರಮಾಬಸು, ನಾಗೇಶ ನಾಯಕ್, ಲತಾ ಮಾಂಡ್ರೆ, ಸುಮಂಗಲಾ ಹದಡಿ, ಸಿ.ಆರ್. ಗಡಾದ ಇತರರು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img