• About
  • Advertise
  • Privacy & Policy
  • Contact
Friday, October 23, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ಉಭಯ ಶ್ರೀಗಳು ನಾಡಿನ ಕಲ್ಯಾಣಕ್ಕಾಗಿ ಧರೆಗಿಳಿದವರು

News Desk by News Desk
June 28, 2024
in Gadag News
0
Lim. Panchakshara Gawaigalavara Lim. Dr. Pt. Commemoration of Puttaraja Kavi Gawaigala
0
SHARES
0
VIEWS
Share on FacebookShare on Twitter

ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಗೀತ ವಿದ್ಯಾಲಯದಿಂದ ಈ ಭೂಮಿ ಪುಣ್ಯ ಭೂಮಿಯಾಗಿದೆ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಪೂಜ್ಯಶ್ರೀ ಜ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.

ಅವರು ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯ ಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ವಿಶೇಷ ಧರ್ಮೋತ್ತೇಜಕ ಮಹಾಸಭೆಯ ಸಾನಿಧ್ಯವಹಿಸಿ ಮಾತನಾಡಿದರು.

ವ್ಯಕ್ತಿಯು ಪರಿಪೂರ್ಣವಾಗಿ ಬೆಳೆಯಲು ಗುರು ಬೇಕು. ಅದರಂತೆ ತ್ರಿಕಾಲ ಜ್ಞಾನಿ ಶ್ರೀಗುರು ಹಾನಗಲ್ ಕುಮಾರೇಶ್ವರರು ಬಾಲಕನಾಗಿದ್ದ ಪಂ. ಪಂಚಾಕ್ಷರಿ ಗವಾಯಿಗಳವರನ್ನು ಕಂಡಾಗ ಈ ಮಗು ಮುಂದೆ ಸಾಧನೆ ಮಾಡುತ್ತಾನೆ ಎಂದು ಗುರುತಿಸಿ ವಿದ್ಯೆ ನೀಡಿದರಲ್ಲದೆ, ವಿದ್ಯೆ ವಯಕ್ತಿಕವಾಗಬಾರದು. ಅದು ಪರಿಪೂರ್ಣವಾಗಬೇಕಾದರೆ ಅಂಧರಿಗೆ, ಅನಾಥರಿಗೆ, ದೀನರಿಗೆ ವಿದ್ಯೆ ಕಲಿಸಬೇಕೆಂದು ಆಶೀರ್ವದಿಸಿದರು.

ಅದರಂತೆ ಇಂದು ದೇಶ-ವಿದೇಶಗಳಲ್ಲಿ ಪುಣ್ಯಾಶ್ರಮದ ಭಕ್ತರು ಸಂಗೀತ ಸಾಧನೆ ಮಾಡಿದ್ದಾರೆ ಎಂದರೆ ಅದು ಪಂ. ಪಂಚಾಕ್ಷರಿ ಗವಾಯಿಗಳವರ ಕೊಡುಗೆಯಾಗಿದೆ ಎಂದು ಹೇಳಿದರು.

ಪಂ. ಪಂಚಾಕ್ಷರಿ ಗವಾಯಿಗಳವರು ಆಚಾರ ನಿಷ್ಠೆ ಶಿವಪೂಜೆ ಮಾಡುತ್ತಿದ್ದರು. ಅವರ ಆರೋಗ್ಯ ಕ್ಷಿಣಿಸಿದಾಗ ಆಚಾರಕ್ಕೆ ದಕ್ಕೆ ಬರುತ್ತದೆ ಎಂದು ಆಂಗ್ಲ ಔಷಧಿಗಳನ್ನು ತಿರಸ್ಕೃರಿಸಿ ದೇಹ ತ್ಯಾಗ ಮಾಡಿ ಮೌಲ್ಯಯುತವಾದ ಬದುಕನ್ನು ಬದುಕಿದರು. ಅಂತಹ ಮಹಾನಭಾವರು ಪುಣ್ಯಾಶ್ರಮ ಕಟ್ಟಿ ಸಾಕಷ್ಟು ಜನರಿಗೆ ಆಶ್ರಯ ನೀಡಿದ್ದಾರೆ ಎಂದು ಹೇಳಿದರು.

ವೇದಿಕೆ ಮೇಲೆ ಗಂಗಾವತಿ ಕಲ್ಮಠದ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಬಳಗಾನೂರಿನ ಪೂಜ್ಯಶ್ರೀ ಶಿವಶಾಂತವೀರ ಶರಣರು, ಮುದ್ದೇಬಿಹಾಳದ ಪೂಜ್ಯಶ್ರೀ ಡಾ. ಲಾಲಲಿಂಗೇಶ್ವರ ಶರಣರು, ಹಿರೇಗುಳವಾಳದ ಪೂಜ್ಯಶ್ರೀ ಹನುಮಂತಪ್ಪ ಯಾಳವಾರ ಅವರು ಸಮ್ಮುಖ ವಹಿಸಿದ್ದರು. ನಂದೀಕೇಶ್ವರದ ಮುಚಖಂಡಯ್ಯನವರು, ಡಾ. ಜೆ.ಎಂ. ಚೆಂದುನವರ, ಬಳ್ಳಾರಿಯ ಪುರುಷೋತ್ತಮಗೌಡ್ರ, ಪಂಚಾಕ್ಷರಯ್ಯ ಹಿಡ್ಕಿಮಠ, ಕಲ್ಲೂರಿನ ಕಳಕಪ್ಪಗೌಡ್ರ ಜಮ್ಮಾಪೂರ, ಜೇವರ್ಗಿಯ ನಾಡಗೌಡ್ರ ಅಪ್ಪಸಾಬಗೌಡ್ರ, ಬದಾಮಿಯ ನಾಗರಾಜ ಕಾಚಟ್ಟಿ, ಎಸ್.ಬಿ. ಅವರಾದಿ, ರಾಚಣ್ಣ ಪಟ್ಟಣದ ಮುಂತಾದವರು ಉಪಸ್ಥಿತರಿದ್ದರು.

ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿವಲಿಂಗಯ್ಯಶಾಸ್ತ್ರೀಗಳು ಹಿರೇಮಠ ಸಿದ್ದಾಪೂರ ಸ್ವಾಗತಿಸಿದರು. ಅಡ್ನೂರಿನ ಕಲ್ಲಿನಾಥ ಶಾಸ್ತ್ರೀಗಳು ಸಭಾ ನಿರೂಪಣೆ ಮಾಡಿದರು. ಪೂಜ್ಯಶ್ರೀ ಕಲ್ಲಯ್ಯಜ್ಜನವರು ಅಭಾರ ಮನ್ನಣೆ ಮಾಡಿದರು.

ಇದೇ ಸಂದರ್ಭದಲ್ಲಿ ಮದರಿಯ ರಾಚಯ್ಯ ಶಾಸ್ತ್ರೀ ಹಿರೇಮಠ-ಪ್ರವಚನ ಕ್ಷೇತ್ರ, ನಾಗಾವಿಯ ಲಕ್ಷ್ಮಣ ತಳವಾರ-ಗಾಯನ ಕ್ಷೇತ್ರ ಹಾಗೂ ಡಾ.ಹನುಮಂತ ಕೊಡಗಾನೂರ ಅವರಿಗೆ `ಕುಮಾರಶ್ರೀ’ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಮಣ್ಣ ಮಲ್ಲಿಗವಾಡ ಅವರಿಗೆ ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಜಗದ್ಗುರು ಮಹಾಸನ್ನಿಧಿಯವರಿಂದ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿಗವಾಯಿಗಳವರ `ಅಷ್ಟೋತ್ತರ ಶತನಾಮಾವಳಿ’, `ಅಷ್ಟಾವರಣ ಕಥಾ ಕೀರ್ತನ ಮಾಲಿಕೆ’ ಹಾಗೂ `ಶ್ರೀಗುರು ಪುಟ್ಟರಾಜ ಚರಿತಂ(ಪುರಾಣ)’ ಲೋಕಾರ್ಪಣೆಗೊಂಡವು. ನಂತರ ಅಹೋರಾತ್ರಿ ಸ್ವರಸಮಾರಾಧನೆ ನಡೆಯಯಿತು.

Tags: GadaggadaganewsLatestNewsLim. Panchakshara Gawaigalavara Lim. Dr. Pt. Commemoration of Puttaraja Kavi GawaigalaPujyashri J.Gurusidda Rajayogindra Mahaswamyupdatenews
Previous Post

ಚು.ಸಾ.ಪ ಜಿಲ್ಲಾ ಸಮಿತಿ ರಚನೆಯ ಸಭೆ

Next Post

ತಾಂತ್ರಿಕ ಜ್ಞಾನದೊಂದಿಗೆ ಕೃಷಿ ಆವಿಷ್ಕಾರಗಳಾಗಲಿ

News Desk

News Desk

Next Post
37th Convocation of Dharwad Agricultural University

ತಾಂತ್ರಿಕ ಜ್ಞಾನದೊಂದಿಗೆ ಕೃಷಿ ಆವಿಷ್ಕಾರಗಳಾಗಲಿ

Leave a Reply Cancel reply

Your email address will not be published. Required fields are marked *

Stay Connected test

  • 24k Followers
  • 99 Subscribers
  • Trending
  • Comments
  • Latest
ಕೃಷಿ ಹೊಂಡದಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಎರಡೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್‌

ಕೃಷಿ ಹೊಂಡದಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಎರಡೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್‌

October 21, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು–ಪೊಲೀಸರ ನಡುವೆ ವಾಗ್ವಾದ

ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು–ಪೊಲೀಸರ ನಡುವೆ ವಾಗ್ವಾದ

October 23, 2026
Gadaga Breaking: 2.80 ಲಕ್ಷದ ಹಣಕ್ಕಾಗಿ ಸ್ನೇಹಿತನ ಹತ್ಯೆ? 11 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

Gadaga Breaking: 2.80 ಲಕ್ಷದ ಹಣಕ್ಕಾಗಿ ಸ್ನೇಹಿತನ ಹತ್ಯೆ? 11 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

October 21, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ವೃತ್ತಿಪರ ಕೋರ್ಸ್‌ಗಳ ಶುಲ್ಕ ಪಾವತಿ ದಿನಾಂಕ ಮಾರ್ಚ್ 7ರವರೆಗೆ ವಿಸ್ತರಣೆ

ಕೆಇಎ ಪರೀಕ್ಷೆಗೆ ಬಿಗಿ ಭದ್ರತೆ: ಅ.24ರಿಂದ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ!

October 23, 2026
ತೂಕ ಇಳಿಸಲು ಜೀರಿಗೆ ಮಜ್ಜಿಗೆ ಸಹಕಾರಿ? ಹೊಟ್ಟೆಯ ಕೊಬ್ಬಿನ ಬಗ್ಗೆ ಇಲ್ಲಿದೆ ಮಾಹಿತಿ!

ತೂಕ ಇಳಿಸಲು ಜೀರಿಗೆ ಮಜ್ಜಿಗೆ ಸಹಕಾರಿ? ಹೊಟ್ಟೆಯ ಕೊಬ್ಬಿನ ಬಗ್ಗೆ ಇಲ್ಲಿದೆ ಮಾಹಿತಿ!

October 23, 2026
ಬಳ್ಳಾರಿಯಲ್ಲಿ ಒಂದು ಗಂಟೆ ಮಳೆ ಅಬ್ಬರ: ರೈಲ್ವೆ ಅಂಡರ್‌ಪಾಸ್ ಜಲಾವೃತ, ವಾಹನ ಸವಾರರ ಪರದಾಟ!

ಬಳ್ಳಾರಿಯಲ್ಲಿ ಒಂದು ಗಂಟೆ ಮಳೆ ಅಬ್ಬರ: ರೈಲ್ವೆ ಅಂಡರ್‌ಪಾಸ್ ಜಲಾವೃತ, ವಾಹನ ಸವಾರರ ಪರದಾಟ!

October 23, 2026
ದರ್ಶನ್ ಪತ್ನಿ ವಿಜಯಲಕ್ಷ್ಮಿ–ಧನ್ವೀರ್ ಪೋಸ್ಟ್ ವಾರ್! ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್ ವುಡ್ ಕಿರಿಕ್

ದರ್ಶನ್ ಪತ್ನಿ ವಿಜಯಲಕ್ಷ್ಮಿ–ಧನ್ವೀರ್ ಪೋಸ್ಟ್ ವಾರ್! ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್ ವುಡ್ ಕಿರಿಕ್

October 23, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ವೃತ್ತಿಪರ ಕೋರ್ಸ್‌ಗಳ ಶುಲ್ಕ ಪಾವತಿ ದಿನಾಂಕ ಮಾರ್ಚ್ 7ರವರೆಗೆ ವಿಸ್ತರಣೆ

ಕೆಇಎ ಪರೀಕ್ಷೆಗೆ ಬಿಗಿ ಭದ್ರತೆ: ಅ.24ರಿಂದ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ!

October 23, 2026
ತೂಕ ಇಳಿಸಲು ಜೀರಿಗೆ ಮಜ್ಜಿಗೆ ಸಹಕಾರಿ? ಹೊಟ್ಟೆಯ ಕೊಬ್ಬಿನ ಬಗ್ಗೆ ಇಲ್ಲಿದೆ ಮಾಹಿತಿ!

ತೂಕ ಇಳಿಸಲು ಜೀರಿಗೆ ಮಜ್ಜಿಗೆ ಸಹಕಾರಿ? ಹೊಟ್ಟೆಯ ಕೊಬ್ಬಿನ ಬಗ್ಗೆ ಇಲ್ಲಿದೆ ಮಾಹಿತಿ!

October 23, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

  • E Paper
  • WhatsApp Group
  • E Paper
  • E Paper
error: Content is protected !!
Join WhatsApp Read E-Paper
f 𝕏 WhatsApp Copy Link