ಸಿಯಾಚಿನ್ ಯುದ್ಧಭೂಮಿಗೆ ಮಹಿಳಾ ಯೋಧೆಯಾಗಿ ಮೈಸೂರಿನ ಸುಪ್ರಿತಾ ಆಯ್ಕೆ

0
Spread the love

ಮೈಸೂರು: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್​ನಲ್ಲಿ ಕರ್ತವ್ಯ ನಿರ್ವಹಿಸಲು ಮೈಸೂರಿನ ವಲ್ಲಭಭಾಯಿ ನಗರದ ನಿವಾಸಿ ಸುಪ್ರಿತಾ ಅವರು ಆಯ್ಕೆ ಆಗಿದ್ದಾರೆ. ಸಿಯಾಚಿನ್​ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿರುವ ಮೊದಲ ಮಹಿಳಾ ಯೋಧೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಎಲ್ಎಲ್ ಬಿ ಪದವಿ ಹಾಗೂ ಎನ್​ಸಿಸಿ ಸರ್ಟಿಫಿಕೇಟ್ ಪಡೆದಿರುವ ಸುಪ್ರಿತಾ, 2021 ರಲ್ಲಿ ಸೇನಾ ಪಡೆಯ ಲೆಫ್ಟಿನೆಂಟ್ ಆಗಿ ತರಬೇತಿ ಪಡೆದು ಭಾರತೀಯ ವಾಯುಪಡೆಗೆ ನಿಯೋಜನೆಯಾಗಿದ್ದರು. ತಲಕಾಡು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‌ಐ ತಿರುಮಲ್ಲೇಶ್, ನಿರ್ಮಲಾ ದಂಪತಿ ಪುತ್ರಿ ಸುಪ್ರಿತಾ. ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಹಾಗೂ ಎನ್‌ಸಿಸಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here