ಮಂಡ್ಯ: ರಾಜ್ಯದಲ್ಲಿ ಕೆಲ ದಿನಗಳಿಂದ ಧಾರಕಾರ ಮಳೆ ಹಿನ್ನೆಲೆಯಲ್ಲಿ KRS ಡ್ಯಾಂ ಮುಂಭಾಗದ ತಡೆಗೋಡೆ ಕುಸಿತವಾಗಿದೆ. ಹೌದು KRS ಡ್ಯಾಂ ಮುಂಭಾಗದ ನಗುವನ ತೋಟದ ತಡೆಗೋಡೆ ಕುಸಿದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂನಿಂದ ನೀರು ಬಿಡುಗಡೆ ವೇಳೆ ನಿರ್ಲಕ್ಷ್ಯ ತೋರಿದ್ದರಿಂದ ಗೋಡೆ ಕುಸಿದಿದೆ. ನೀರಿನ ರಭಸಕ್ಕೆ ನಗುವನ ತೋಟದ ತಡೆಗೋಡೆ ಕೊಚ್ಚಿಹೋಗಿದೆ.
Advertisement
ನೀರು ಬಿಟ್ರೆ ತೋಟಕ್ಕೆ ತೊಂದರೆ ಆಗಬಾರದೆಂದು ಈ ತಡೆಗೋಡೆ ಕಟ್ಟಲಾಗಿತ್ತು. ಇತ್ತೀಚೆಗಷ್ಟೇ ಲಕ್ಷಾಂತರ ರೂ. ವೆಚ್ಚದಲ್ಲಿ ಈ ತಡೆಗೋಡೆ ನಿರ್ಮಿಸಲಾಗಿತ್ತು. ಗೇಟ್ನಿಂದ ಒಮ್ಮೆಯೇ ಹೆಚ್ಚಿನ ನೀರು ಬಿಟ್ಟಿದ್ದರಿಂದ ಗೋಡೆ ಕುಸಿದಿದೆ. ನಿಧಾನವಾಗಿ ನೀರಿನ ಪ್ರಮಾಣ ಹೆಚ್ಚಿಸಿದ್ರೆ ತೊಂದರೆ ಆಗುತ್ತಿರಲಿಲ್ಲ. ಹೀಗಾಗಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ತಡೆಗೋಡೆ ಕುಸಿದಿದೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.