HomeWorld Newsಮಾನವ ನಿಯಂತ್ರಣಕ್ಕೆ ಸಿಗದಷ್ಟು ಶಕ್ತಿಶಾಲಿಯಾಗಲಿದೆಯೇ AI? ಆಂಥ್ರೋಪಿಕ್ ತಜ್ಞನ ಶಾಕಿಂಗ್ ವಾರ್ನಿಂಗ್!

ಮಾನವ ನಿಯಂತ್ರಣಕ್ಕೆ ಸಿಗದಷ್ಟು ಶಕ್ತಿಶಾಲಿಯಾಗಲಿದೆಯೇ AI? ಆಂಥ್ರೋಪಿಕ್ ತಜ್ಞನ ಶಾಕಿಂಗ್ ವಾರ್ನಿಂಗ್!

For Dai;y Updates Join Our whatsapp Group

ವಾಷಿಂಗ್ಟನ್‌: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಬೆನ್ನಲ್ಲೇ, ಅದರ ಭವಿಷ್ಯದ ಪರಿಣಾಮಗಳ ಕುರಿತು ಆತಂಕವೂ ಹೆಚ್ಚುತ್ತಿದೆ. AI ಕಂಪನಿಗಳು ಮಾನವರು ನಿಯಂತ್ರಿಸಲು ಕಷ್ಟವಾಗುವಷ್ಟು ಶಕ್ತಿಶಾಲಿ ವ್ಯವಸ್ಥೆಗಳತ್ತ ವೇಗವಾಗಿ ಸಾಗುತ್ತಿವೆ. ಈ ದಶಕದ ಅಂತ್ಯದ ವೇಳೆಗೆ AI ಮನುಕುಲಕ್ಕೆ ದೊಡ್ಡ ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು AI ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಸಂಶೋಧಕರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಆ್ಯಂಥ್ರೋಪಿಕ್ ಸಂಸ್ಥೆಯಲ್ಲಿ ಮೂರು ವರ್ಷಗಳ ಕಾಲ AI ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದ ಜಾಕೋಬ್ ಕಾಕ್ಸೋನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಈ ಆತಂಕವನ್ನು ವ್ಯಕ್ತಪಡಿಸಿದ್ದಾರೆ. AI ಕ್ಷೇತ್ರದ ಎಕ್ಸಿಕ್ಯುಟಿವ್‌ಗಳು ಮತ್ತು ಹಿರಿಯ ಸಂಶೋಧಕರು ಸಾರ್ವಜನಿಕವಾಗಿ ಹೇಳುವ ಮಾತುಗಳಿಗಿಂತ ಖಾಸಗಿ ಚರ್ಚೆಗಳಲ್ಲಿ ಹೆಚ್ಚು ಗಂಭೀರವಾದ ಆತಂಕಗಳನ್ನು ವ್ಯಕ್ತಪಡಿಸುತ್ತಿರುವುದನ್ನು ತಾವು ಕೇಳಿದ್ದಾಗಿ ಅವರು ಹೇಳಿದ್ದಾರೆ.

AI ಅಭಿವೃದ್ಧಿಯ ವೇಗವನ್ನು ಗಮನಿಸಿದರೆ, ಇತರೆ ಯಾವುದೇ ಮಾನವ ಚಟುವಟಿಕೆಗಳು ಒಡ್ಡದಷ್ಟು ದೊಡ್ಡ ಅಪಾಯವನ್ನು ಈ ತಂತ್ರಜ್ಞಾನ ಒಡ್ಡಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. AI ವ್ಯವಸ್ಥೆಗಳು ಅತಿಮಾನವ ಮಟ್ಟದ ಬುದ್ಧಿಮತ್ತೆಯನ್ನು ಸಾಧಿಸಿದರೆ ಅವುಗಳನ್ನು ನಿಯಂತ್ರಿಸುವುದು ಅತ್ಯಂತ ಕಷ್ಟಕರವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜಾಕೋಬ್ ಕಾಕ್ಸೋನ್ ಅವರ ಹೇಳಿಕೆಗೆ ಆ್ಯಂಥ್ರೋಪಿಕ್‌ನ ಸೇಫ್ಟಿ ಲೀಡ್ ಈವನ್ ಹುಬಿಂಜರ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಅತಿಶಕ್ತಿಶಾಲಿ AI ವ್ಯವಸ್ಥೆಗಳಿಂದ ಮಾನವರಿಗೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆಯನ್ನು ತಾವು ಕೂಡ ಪರಿಗಣಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಅತಿಮಾನವ AI ವ್ಯವಸ್ಥೆಗಳ ನಿಯಂತ್ರಣ ಮತ್ತು ಸುರಕ್ಷತೆಗಾಗಿ ಆ್ಯಂಥ್ರೋಪಿಕ್ ಹಲವು ಪ್ರಯತ್ನಗಳನ್ನು ನಡೆಸುತ್ತಿದ್ದರೂ, ಅತ್ಯಂತ ಬುದ್ಧಿವಂತ AI ವ್ಯವಸ್ಥೆಗಳ ‘ಅಲೈನ್‌ಮೆಂಟ್‌’ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲು ಸದ್ಯ ಯಾವುದೇ ಖಚಿತ ಯೋಜನೆ ತಮ್ಮ ಬಳಿ ಇಲ್ಲ ಎಂದು ಹುಬಿಂಜರ್ ಹೇಳಿದ್ದಾರೆ. AI ವ್ಯವಸ್ಥೆಗಳು ಮಾನವ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಅಲೈನ್‌ಮೆಂಟ್‌ನ ಪ್ರಮುಖ ಉದ್ದೇಶವಾಗಿದೆ.

AI ತಂತ್ರಜ್ಞಾನವನ್ನು ಕಡಿಮೆ ಅಂದಾಜು ಮಾಡಬಾರದು ಎಂಬುದನ್ನೂ ಸಂಶೋಧಕರು ಒತ್ತಿಹೇಳಿದ್ದಾರೆ. ಭವಿಷ್ಯದಲ್ಲಿ ಅತಿಮಾನವ ಸಾಮರ್ಥ್ಯ ಹೊಂದುವ AI ವ್ಯವಸ್ಥೆಗಳು ಸೈಬರ್ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವೇಗವಾಗಿ ಬದಲಾವಣೆ ತರಬಲ್ಲವು. ಯಾವುದೇ ತಂತ್ರಜ್ಞಾನ ಅಥವಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಪರಿಣಾಮ ಉಂಟುಮಾಡುವ ಸಾಮರ್ಥ್ಯವನ್ನು ಇಂತಹ ವ್ಯವಸ್ಥೆಗಳು ಹೊಂದಿರಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ AI ಅಭಿವೃದ್ಧಿಯ ವೇಗ ಮತ್ತು ಅದರ ಸುರಕ್ಷತೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಸರ್ಕಾರಗಳು ಮತ್ತು AI ಕಂಪನಿಗಳು ಒಟ್ಟಾಗಿ ಕೆಲಸ ಮಾಡಿ ಈ ತಂತ್ರಜ್ಞಾನ ಅಭಿವೃದ್ಧಿಯ ಸ್ಪರ್ಧೆಗೆ ಸೂಕ್ತ ಮಿತಿಗಳನ್ನು ರೂಪಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img