HomeGadag Newsಸಮಾಜದ ಅಭಿವೃದ್ಧಿಗೆ ನಿಗಮ ಅವಶ್ಯ : ನಾರಾಯಣಸಾ ಪವಾರ

ಸಮಾಜದ ಅಭಿವೃದ್ಧಿಗೆ ನಿಗಮ ಅವಶ್ಯ : ನಾರಾಯಣಸಾ ಪವಾರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಲ್ಲಿನ ಎಸ್‌ಎಸ್‌ಕೆ ಸಮಾಜದ ಆಶ್ರಯದಲ್ಲಿ ಪಟ್ಟಣದ ಶ್ರೀ ಅಂಭಾಭವಾನಿ ದೇವಸ್ಥಾನದಲ್ಲಿ ಗದಗ ಜಿಲ್ಲಾ ಮಟ್ಟದ ಎಸ್‌ಎಸ್‌ಕೆ ಸಮಾಜದ ಸಭೆಯು ಬುಧವಾರ ಜಗುಗಿತು.

ಸಭೆಯಲ್ಲಿ ಹುಬ್ಬಳ್ಳಿಯ ಹನಮಂತಸಾ ನಿರಂಜನ ಮಾತನಾಡಿ, ಎಸ್‌ಎಸ್‌ಕೆ ಸಮಾಜವು ಸ್ವಾಭಿಮಾನಿಗಳಾಗಿ ಬದುಕು ಸಾಗಿಸುತ್ತಿದೆ. ಈ ಕೂಡಲೇ ಸರ್ಕಾರವು ಶೋಷಿತ ಸಮುದಾಯಗಳಲ್ಲಿ ಒಂದಾದ ಎಸ್‌ಎಸ್‌ಕೆ ಸಮಾಜಕ್ಕೆ ನಿಗಮ ಮಂಡಳಿ ರಚನೆ ಮಾಡಲೇಬೇಕು. ಇಲ್ಲದಿದ್ದಲ್ಲಿ ಸಮಾಜದವರು ಸಂಘಟಿತರಾಗಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಹೇಳಿದರು.

ಎಸ್.ಎಸ್.ಕೆ. ಸಮಾಜದ ಉಪಾಧ್ಯಕ್ಷ ನಾರಾಯಣಸಾ ಪವಾರ ಮಾತನಾಡಿ, ಎಸ್‌ಎಸ್‌ಕೆ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಮಂಡಳಿ ರಚನೆಯಾದರೆ ನಮ್ಮ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಈಗಾಗಲೇ ಎಸ್‌ಎಸ್‌ಕೆ ಸಮಾಜ ಹಾಗೂ ಸಮಾಜದ ಹಲವಾರು ಅಂಗ ಸಂಸ್ಥೆಗಳೊಂದಿಗೆ ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿ ಮತ್ತು ಶಾಸಕರ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆೆಂದರು.

ಕ್ಷತ್ರಿಯ ಫೌಂಡೇಶನ್ ಅಧ್ಯಕ್ಷ ಆರ್.ಟಿ. ಕಬಾಡಿ ಮತ್ತು ಶಂಕರಸಾ ಕಲಬುರ್ಗಿ ಮಾತನಾಡಿ, ಪೂರ್ವಭಾವಿ ಸಭೆ ಜುಲೈ ೨೮ರ ಬೆಳಿಗ್ಗೆ 10.30ಕ್ಕೆ ಗದಗ ನಗರದ ಹಳೇ ಸರಾಫ್ ಬಜಾರದಲ್ಲಿರುವ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ನಡೆಯಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಲು ವಿನಂತಿಸಿದರು.

ಸಭೆಯಲ್ಲಿ ರಂಗನಾಥಸಾ ಬದಿ, ಪರಶುರಾಮಸಾ ಬದಿ, ಲಕ್ಷ್ಮಣ ಬದಿ, ಪಾಂಡುರಂಗಸಾ ಬದಿ, ಭರತ್ ಬಾಕಳೆ, ವೈ.ಎಫ್. ಬದಿ, ಅಶೋಕ್ ರಾಜೋಳ್ಳಿ, ಹನುಮಂತಸಾ ಚೌಧರಿ, ರಂಗನಾಥಸಾ ಬದಿ, ಪರಶುರಾಮಸಾ ಬದಿ, ಎಲ್ಲಮ್ಮ ಬಾಕಳೆ, ಮೀನಾಕ್ಷಿ ಬದಿ, ಲಕ್ಷ್ಮಿ ಬದಿ, ರೂಪಾ ರಾಜೋಳ್ಳಿ, ಶಾಂತಾಬಾಯಿ ಪವಾರ, ಸಂಜೀವ ಖಟವಟೆ, ರಾಜೇಶ ಭಾಂಡಗೆ, ಎಸ್‌ಎಸ್‌ಕೆ ಪಂಚ ಟ್ರಸ್ಟ್ ಕಮಿಟಿ ಸದಸ್ಯರು ಹಾಗೂ ಮಹಿಳಾ ಮಂಡಲ, ತರುಣ ಸಂಘ ಸದಸ್ಯರು ಉಪಸ್ಥಿತರಿದ್ದರು. ಲಕ್ಷ್ಮಣಸಾ ರಾಜೊಳ್ಳಿ ಸ್ವಾಗತಿಸಿದರು, ಕಾಶಿನಾಥಸಾ ಶಿದ್ಲಿಂಗ ಮತ್ತು ನಾಗರಾಜ ನಗರಿ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!