ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಹಸಿರು ಮಾರ್ಗದಲ್ಲಿ ಇಂದಿನಿಂದ ರೈಲು ಸೇವೆಯಲ್ಲಿ ವ್ಯತ್ಯಯ!

0
Spread the love

ಬೆಂಗಳೂರು:- ಇಂದಿನಿಂದ ಆ. 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.

Advertisement

ನಾಗಸಂದ್ರದಿಂದ ಮಾದಾವರ ವರೆಗಿನ ರೀಚ್-3ರ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಬೇಕಾಗಿರುವುದರಿಂದ, ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಮಯದಲ್ಲಿ ವ್ಯತ್ಯಯ ವಾಗಲಿದೆ.

ಆ. 13ರಂದು ಕೊನೆಯ ರೈಲು ಸೇವೆ ರಾತ್ರಿ 11ಕ್ಕೆ ಬದಲಾಗಿ 10 ಗಂಟೆಯವರೆಗೆ.

ಆ. 14ರಂದು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭ ಮತ್ತು ಕೊನೆಯ ರೈಲು ಸೇವೆ ರಾತ್ರಿ 11ಕ್ಕೆ ಬದಲಾಗಿ 10 ಗಂಟೆಯವರೆಗೆ.

ಆ. 15ರಂದು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭ.

ನಾಗಸಂದ್ರ ನಿಲ್ದಾಣದಿಂದ ಆ.13 ಮತ್ತು 14 ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಗಂಟೆಯ ಬದಲಾಗಿ 10.00 ಗಂಟೆಗೆ ಕೊನೆಗೊಳ್ಳುತ್ತದೆ. ಆ.14 ಮತ್ತು 15ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆಯು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭವಾಗುತ್ತದೆ.

ನಾಗಸಂದ್ರ ನಿಲ್ದಾಣದಿಂದ ಆ.13 ಮತ್ತು 14 ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಗಂಟೆಯ ಬದಲಾಗಿ 10.00 ಗಂಟೆಗೆ ಕೊನೆಗೊಳ್ಳುತ್ತದೆ. ಆ.14 ಮತ್ತು 15ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆಯು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭವಾಗುತ್ತದೆ.

ಆದಾಗ್ಯೂ ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಆ.13 ಮತ್ತು 14ರಂದು ರಾತ್ರಿ 11.12 ಗಂಟೆಯವರೆಗೆ ಕೊನೆಯ ರೈಲು ಸೇವೆ ಲಭ್ಯವಿರುತ್ತದೆ.

ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆಯು ಆ.14 ಮತ್ತು 15ರಂದು ಬೆಳಗ್ಗೆ 5ಕ್ಕೆ ಪ್ರಾರಂಭವಾಗುತ್ತದೆ. ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here