• About
  • Advertise
  • Privacy & Policy
  • Contact
Sunday, November 1, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Life Style

Diabetes: ನಿಮಗಿದು ಗೊತ್ತಾ; ನಿತ್ಯ ಪಪ್ಪಾಯಿ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ!

Vijaya Sakshi News Desk by Vijaya Sakshi News Desk
August 12, 2024
in Life Style
Diabetes: ನಿಮಗಿದು ಗೊತ್ತಾ; ನಿತ್ಯ ಪಪ್ಪಾಯಿ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ!
0
SHARES
3
VIEWS
Share on Facebook

ಮಳೆಗಾಲವಿರಲಿ, ಚಳಿಗಾಲವಿರಲಿ ಅಥವಾ ಬೇಸಿಗೆಯಿರಲಿ ಪಪ್ಪಾಯಿ ಎಲ್ಲಾ ಸೀಸನ್ನಲ್ಲಿಯೂ ಸಿಗುತ್ತದೆ. ಪರಂಗಿ ಅಥವಾ ಪಪ್ಪಾಯಿ ಹಣ್ಣು ತನ್ನಲ್ಲಿ ಅತಿ ಹೆಚ್ಚು ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡ ಹಣ್ಣಾಗಿದ್ದು, ದೊಡ್ಡವರಿಂದ ಹಿಡಿದು ಚಿಕ್ಕವರವರೆಗೂ ಈ ಹಣ್ಣನ್ನು ತಿನ್ನಬಹುದು.. ಈ ಹಣ್ಣು ಸಾಕಷ್ಟು ರೋಗಗಳಿಗೆ ರಾಮಬಾಣವಾಗಿದ್ದು, ಕ್ಯಾನ್ಸರ್, ಅಸ್ತಮಾ, ಮಧುಮೇಹ ರೋಗ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಪರಂಗಿ ಹಣ್ಣು ಸೇವಿಸುವುದರಿಂದ ಮನುಷ್ಯನ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆಯುತ್ತದೆ. ಪಪ್ಪಾಯ ಹಣ್ಣು ಉಪಯೋಗಿಸಿದರೆ ಮನುಷ್ಯನ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳುತ್ತದೆ. ಇದರ ಸೇವನೆಯಿಂದ ಹೆಚ್ಚಿನ ಜೀವಸತ್ವ ಮತ್ತು ಖನಿಜಾಂಶಗಳನ್ನು ಹೊಂದಬಹುದು. ಅಲ್ಲದೇ ಕ್ಯಾನ್ಸರ್, ಅಸ್ತಮಾ, ಮಧುಮೇಹ ರೋಗ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಇದರಲ್ಲಿರುವ ಪೋಟ್ಯಾಷಿಯಂ ಅಂಶದಿಂದಾಗಿ ಸಂಧಿವಾತ ರೋಗ ನಿವಾರಣೆಗೆ ಸಹಕಾರಿ. ಉತ್ತಮ ಜೀರ್ಣ ಶಕ್ತಿಯನ್ನು ಮತ್ತು ಹೃದಯ ರೋಗಗಳನ್ನು ನಿವಾರಿಸುವಲ್ಲಿ ತುಂಬಾ ಸಹಕಾರಿಯಾಗಿದೆ. ಇದರಲ್ಲಿರುವ “ಇ” ವಿಟಮಿನ್ ಸೌಂದರ್ಯ ವರ್ಧಕ ಅಂಶ ಹೊಂದಿದ್ದು, ಚರ್ಮದ ಕಾಂತಿಗೆ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಸಹಕಾರಿಯಾಗಿದೆ.

ಒಂದು ಮಧ್ಯಮ ಗಾತ್ರದ ಪಪ್ಪಾಯ ಹಣ್ಣಿನಲ್ಲಿ 68 ಕ್ಯಾಲೋರಿಗಳು ಇರುತ್ತದೆ. ಜಿಂಕ್ 0.13 ಮಿ.ಗ್ರಾಂ., ಕ್ಯಾಲ್ಸಿಯಂ 31 ಮಿ.ಗ್ರಾಂ., ಮ್ಯಾಗ್ನಿಷಿಯಂ 33 ಮಿ.ಗ್ರಾಂ., ಪೋಟ್ಯಾಷಿಯಂ 286 ಮಿ.ಗ್ರಾಂ., ಕಾರ್ಬೋಹೈಡ್ರೇಟ್ 50.1 ಗ್ರಾಂ., ನಾರು 2.7 ಗ್ರಾಂ., ಪ್ರೋಟಿನ್ 2.9 ಗ್ರಾಂ., ಸಕ್ಕರೆ 8.30 ಗ್ರಾಂ., ಓಮೆಗಾ 3 ಕೊಬ್ಬಿನ ಆಮ್ಲಗಳು-35.0 ಮಿ.ಗ್ರಾಂ. ಪೋಷಕಾಂಶಗಳು ಲಭ್ಯವಿರುತ್ತವೆ. ಪಪ್ಪಾಯ ಹಣ್ಣು ಸೇವನೆಯಿಂದ ಮನುಷ್ಯನ ಶರೀರಕ್ಕೆ ಈ ಮೇಲಿನ ಎಲ್ಲಾ ಲಾಭಾಂಶಗಳು ದೊರೆಯುತ್ತವೆ.

ಪಪ್ಪಾಯಿ ಅಥವಾ ಪರಂಗಿ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಪಪ್ಪಾಯಿ ಒಂದು ಅದ್ಭುತ ಹಣ್ಣಾಗಿದ್ದು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಕಾಣಸಿಗುವ ಹಾಗೂ ಎಲ್ಲಾ ಋತುಗಳಲ್ಲಿ ದೊರೆಯುವ ಪಪ್ಪಾಯಿ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ. ಸಾಮಾನ್ಯ ಪಪ್ಪಾಯವು ಆರೋಗ್ಯ ಪ್ರಯೋಜನಗಳೊಂದಿಗೆ ತುಂಬಿದ ಹಣ್ಣಾಗಿದೆ.

ಇದು ಹೊಟ್ಟೆಯ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅತ್ಯಂತ ಪೌಷ್ಟಿಕ ಹಣ್ಣು ಎಂದು ನಂಬಲಾಗಿದೆ. ಪಪ್ಪಾಯಿ ಸೇವನೆಯಿಂದ ಕರುಳಿನಲ್ಲಿ ಸೇರಿಕೊಳ್ಳುವ ಜಂತುಗಳು ನಾಶವಾಗುವುವು. ಇದು ಕಿತ್ತಳೆಗಿಂತ ಹೆಚ್ಚಿನ ವಿಟಮಿನ್‌ ಸಿ ಯನ್ನು ಹೊಂದಿದೆ ಮತ್ತು ಜೀವಸತ್ವಗಳು ಎ ಮತ್ತು ಬಿ ಗಳ ಉತ್ತಮ ಮೂಲವಾಗಿದೆ.

100 ಗ್ರಾಂಗಳಷ್ಟು ಪಪ್ಪಾಯವು 43 ಕ್ಯಾಲೋರಿಗಳನ್ನು ಮಾತ್ರ ಹೊಂದಿದೆ. ಪಪ್ಪಾಯಲ್ಲಿನ ನಾರಿನ ಅಂಶವು ನಿಮಗೆ ದೀರ್ಘ‌ಕಾಲದವರಿಗೆ ಪೂರ್ಣವಾಗಿ ಪರಿಣಮಿಸುತ್ತದೆ ಮತ್ತು ಇದು ಮಲಬದ್ಧತೆಯನ್ನು ತಡೆಯುತ್ತದೆ. ನಮ್ಮ ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸುವ ಪಪ್ಪಾಯಿ ಉತ್ತಮವಾದ ಫೈಬರ್‌ಗಳ ಮೂಲವಾಗಿದೆ. ಪಪ್ಪಾಯಿ ಸೇವಿಸುವ ಮೂಲಕ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಹೆಚ್ಚಾಗುತ್ತದೆ.

ಪಪ್ಪಾಯದಲ್ಲಿ ಮಿಟಮಿನ್‌ ಸಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹಕ್ಕೆ ಸಕ್ಕರೆ ಅಂಶ ಮತ್ತು ಗ್ಲೈಸೆಮಿಕ್ ಸೂಚ್ಯಂಕ ಕಡಿಮೆಯಾಗಿರುವುದರಿಂದ ಪಪ್ಪಾಯಿ ಉತ್ತಮ ಆಯ್ಕೆಯಾಗಿದೆ. ಹಲವಾರು ಸಂಶೋಧನೆಗಳ ಪ್ರಕಾರ,ಪಪ್ಪಾಯಿ ಸಾರವು ವಾಸ್ತವವಾಗಿ ಟೈಪ್‌ 2 ಮಧುಮೇಹದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.

ಪಪ್ಪಾಯಗಳು ಮಿಟಮಿನ್‌ ಎ ಮತ್ತು ಬೀಟಾ -ಕ್ಯಾರೋಟಿನ್‌ , ಝೀಕ್ಸಾಂಥಿನ್‌ ಸೈಟೋಟಾಂಥಿನ್‌ ಮತ್ತು ಲ್ಯೂಟಿನ್‌ ನಂತಹ ಫ್ಲೇವೊನೈಡ್ಸ್‌ಗಳು ಸಮೃದ್ಧವಾಗಿವೆ,ಇದು ವಯಸ್ಸಿಗೆ ಸಂಬಂಧಿಸಿದ ಸ್ನಾಯುವಿನ ಅವನತಿಗೆ ಅಪಾಯವನ್ನುಂಟು ಮಾಡುತ್ತದೆ . ಲ್ಯೂಟಿನ್‌ ಮತ್ತು ಝೀಕ್ಸಾಂಥಿನ್‌ ಎರಡು ಗುÉಕೋಮಾ ಕಣ್ಣಿನ ಪೊರೆ ಹಾಗೂ ಇತರ ದೀರ್ಘ‌ಕಾಲದ ಕಣ್ಣಿನ ರೋಗಗಳನ್ನು ತಡೆಗಟ್ಟುತ್ತದೆ.

ಪಪ್ಪಾಯಿಯಲ್ಲಿ ಫೈಬರ್‌ ಹೆಚ್ಚಿರುತ್ತದೆ ಹಾಗಾಗಿ ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ. ಹೊಟ್ಟೆ ಸಮಸ್ಯೆಗಳಾದ ಅಜೀರ್ಣ,ಹೊಟ್ಟೆ ಹುಣ್ಣು ,ಹೊಟ್ಟೆ ಮತ್ತು ಎದೆ ಉರಿ ಸಮಸ್ಯೆಗಳಿಗೆ ಪಪ್ಪಾಯಿ ಹಣ್ಣು ಸಹಕಾರಿಯಾಗಿದೆ.ಅಲ್ಲದೇ ಪಿತ್ತಕೋಶದಲ್ಲಿರುವ ವಿಷ ವಸ್ತುಗಳನ್ನು ಹೊರ ಹಾಕುವಲ್ಲಿ ಇದು ಸಹಕಾರಿ. ಕೀಲುರೋಗವು ಕೀಲುಗಳಲ್ಲಿ ಉರಿಯೂತಕ್ಕೆ ಕಾರಣವಾಗುವ ಅಸ್ವಸ್ಥತೆಯಾಗಿದೆ. ಪಪ್ಪಾಯವು ವಿಟಮಿನ್‌ ಸಿ ಜೊತೆಗೆ ಉರಿಯೂತ ಕಿಣ್ವಗಳನ್ನು ಹೊಂದಿದೆ.

ಇದು ಸಂಧಿವಾತದಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೈಸರ್ಗಿಕ ಆಹಾರವಾದ ಪಪ್ಪಾಯಿ ಕೂಡ ಕ್ಯಾನ್ಸರ್‌ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದೆ. ಪಪ್ಪಾಯವು ಉತ್ಕರ್ಷಣ ನಿರೋಧಕ ,ಫೈಟೋನ್ಯೂಟ್ರಿಯಟ್ಸ್‌ಗಳ ಸಮೃದ್ಧ ಮೂಲವಾಗಿದೆ.ಇದು ಕ್ಯಾನ್ಸರ್‌ಗೆ ಕಾರಣವಾಗುವ ಕೋಶಗಳ ವಿರುದ್ಧ ದೇಹವು ಹೋರಾಡಲು ಸಹಾಯ ಮಾಡುತ್ತದೆ.

ಪಪ್ಪಾಯ ಖನಿಜಗಳು,ಜೀವಸ್ವತಗಳು ಮತ್ತು ಕಿಣ್ವಗಳ ಒಂದು ಉತ್ತಮ ಮೂಲವಾಗಿದೆ.ಇದು ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಅಲ್ಲದೇ ಕೂದಲನ್ನು ಹೊಳಪಿನಂತೆ ಮಾಡುತ್ತದೆ. ಪಪ್ಪಾಯಿ ಹಣ್ಣಿನ ಹೋಳಿನಿಂದ ಚರ್ಮವನ್ನು ಉಜ್ಜಿದರೆ ಚರ್ಮದ ಮೇಲಿನ ಕಲೆ ಮಾಯವಾಗುತ್ತದೆ. ಪಪ್ಪಾಯಿ ಸೇವನೆಯಿಂದ ಬಾಣಂತಿಯರಿಗೆ ಎದೆಹಾಲು ಹೆಚ್ಚುತ್ತದೆ ಅಲ್ಲದೇ ಮಕ್ಕಳಿಗೆ ಹಾಲು ಉಣಿಸುವ ತಾಯಂದಿರಿಗೆ ಪಪ್ಪಾಯು ಶಕ್ತಿದಾಯಕ ಆಹಾರ.

ಪಪ್ಪಾಯದಲ್ಲಿ ಇರುವ ವಿಟಮಿನ್‌ ಸಿ ಒತ್ತಡದ ಹಾರ್ಮೋನುಗಳ ಹರಿವನ್ನು ನಿಯಂತ್ರಿಸುತ್ತದೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳಲ್ಲಿ ಪಪ್ಪಾಯಿ ಅವರ ದಿನನಿತ್ಯದ ಆಹಾರದಲ್ಲಿ ಇರಬೇಕು. ಪಪ್ಪಾಯ ಎಲೆಗಳಿಂದ ಹಲ್ಲು ಉಜ್ಜಿದರೆ ಹಲ್ಲು ಹಾಗೂ ವಸಡು ನೋವು ನಿವಾರಣೆಯಾಗುತ್ತದೆ. ಪಪ್ಪಾಯಿ ಎಲೆ ರಸ ಕುಡಿಯುವುದರಿಂದ ಡೆಂಗ್ಯೂ ಜ್ವರದಿಂದ ಗುಣಮುಖ ಮಾಡುವ ಅತ್ಯುತ್ತಮ ಮನೆ ಮದ್ದಾಗಿದೆ.

ಇನ್ನೂ ವರ್ಷ ಪೂರ್ತಿ ಸಿಗುವ ಹಣ್ಣು ಎಂದರೆ ಪರಂಗಿ ಹಣ್ಣು ಎಂದು ಹೇಳಬಹುದು. ಕೇವಲ ಮಾರು ಕಟ್ಟೆಯಲ್ಲಿ ಮಾತ್ರವಲ್ಲದೆ ನಾವೇ ಸ್ವತಹ ಇದನ್ನು ಮನೆಯ ಬಳಿ ಬೆಳೆಯಬಹುದು. ಭೂಮಿಯ ಫಲವತ್ತತೆಯ ಆಧಾರದ ಮೇಲೆ ಪರಂಗಿ ಹಣ್ಣಿನ ರುಚಿ ನಿಂತಿರುತ್ತದೆ. ಈಗ ವಿಷಯ ಎಂದರೆ ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣನ್ನು ತಿನ್ನುವುದರಿಂದ ಲಾಭಾ ಜಾಸ್ತಿ ಎಂದು.

ಬಿಪಿ, ಶುಗರ್ ಇರುವವರು ಇದರ ಸೇವನೆ ಮಾಡಬಹುದು. ಪರಂಗಿ ಹಣ್ಣಿನ ಜ್ಯೂಸ್ ಕುಡಿಯಬಹುದು. ಪರಂಗಿ ಹಣ್ಣಿನ ಆರೋಗ್ಯಕರ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಲು ನೀವು ಸಹ ಬೆಳಗಿನ ಸಮಯದಲ್ಲಿ ತಿಂಡಿ ತಿನ್ನುವ ಮುಂಚೆ ಇದನ್ನು ಸೇವಿಸಿ. ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ಸೌಂದರ್ಯ ಕೂಡ ಹೆಚ್ಚುತ್ತದೆ ಎಂದು ಹೇಳುತ್ತಾರೆ. ಪರಂಗಿ ಹಣ್ಣಿನ ಆರೋಗ್ಯಕರ ಗುಣಗಳನ್ನು ವಿಶ್ಲೇಷಿಸುವುದಾದರೆ

ಹೌದು ಪರಂಗಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅಜೀರ್ಣತೆ ಸಮಸ್ಯೆ ದೂರವಾಗುತ್ತದೆ. ಪರಂಗಿ ಹಣ್ಣಿನ ಪ್ರಭಾವದಿಂದ ದೇಹದ ಜೀರ್ಣಶಕ್ತಿ ವೃದ್ಧಿಸುತ್ತದೆ. ಇಷ್ಟೇ ಅಲ್ಲದೆ ನಮ್ಮ ದೇಹ ನಾವು ತಿನ್ನುವ ಆಹಾರ ವನ್ನು ಅತ್ಯಂತ ಪರಿಣಾಮಕಾರಿಯಾಗಿ ಸಂಸ್ಕರಿಸಲು ನೆರವಾಗುತ್ತದೆ. ಬೆಳಗಿನ ಸಮಯದಲ್ಲಿ ಸಾಧ್ಯವಾದಷ್ಟು ನಾರಿನಾಂಶ ಹೆಚ್ಚಾಗಿರುವ ಹಣ್ಣು ತರಕಾರಿಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ತುಂಬಾ ಉತ್ತಮ.​

ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತದೆ. ಇದರಲ್ಲಿ ಸೋಂಕು ಮತ್ತು ಆರೋಗ್ಯದ ಅಸ್ವಸ್ಥತೆಗಳನ್ನು ದೂರ ಮಾಡುವ ಗುಣವಿದೆ. ಬೆಳಗಿನ ಸಮಯದಲ್ಲಿ ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಪರಂಗಿ ಹಣ್ಣು ತನ್ನಲ್ಲಿ ಕಡಿಮೆ ಸಕ್ಕರೆ ಪ್ರಮಾಣವನ್ನು ಹೊಂದಿದ್ದು ಅಧಿಕ ನಾರಿನಾಂಶವನ್ನು ಹೊಂದಿದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವು ದರಿಂದ ಸಕ್ಕರೆ ಕಾಯಿಲೆ ಇರುವವರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಉತ್ತಮವಾಗಿ ನಿರ್ವಹಣೆಯಾಗುತ್ತದೆ.

ಇಡೀ ದಿನ ಬ್ಲಡ್ ಶುಗರ್ ಲೆವೆಲ್ ಒಂದೇ ರೀತಿ ಇರುವಂತೆ ನೋಡಿ ಕೊಳ್ಳುತ್ತದೆ. ಒಂದು ವೇಳೆ ಸಕ್ಕರೆ ಕಾಯಿಲೆ ಇದ್ದರೆ ಸುಲಭವಾಗಿ ಪರಂಗಿ ಹಣ್ಣಿನಿಂದ ಕಂಟ್ರೋಲ್ ಮಾಡಿಕೊಳ್ಳಬಹುದು. ಆದರೆ, ರಕ್ತದಲ್ಲಿ ಸಕ್ಕರೆಮಟ್ಟ ನಿಯಂತ್ರಣ ದಲ್ಲಿ ಇಲ್ಲದವರು, ಈ ಹಣ್ಣನ್ನು ತಿನ್ನುವ ಮೊದಲು ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಿ.

ಪರಂಗಿ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫ್ಲ ಮೆಟರಿ ಲಕ್ಷಣಗಳು ಸಾಕಷ್ಟು ಕಂಡುಬರುವುದ ರಿಂದ ನಮ್ಮ ದೇಹದ ಉರಿಯುತ ಸಮಸ್ಯೆಯನ್ನು ಇದು ನಿವಾರಣೆ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣು ಸೇವಿಸುವು ದರಿಂದ ಉರಿಯುತಕ್ಕೆ ಸಂಬಂಧಪಟ್ಟಂತೆ ಬೇರೆ ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸುವುದು ತಪ್ಪುತ್ತದೆ. ಪರಂಗಿ ಹಣ್ಣಿನಲ್ಲಿ ವಿಟಮಿನ್ ಎ ಹೆಚ್ಚಾಗಿರುವುದರಿಂದ ಆರೋಗ್ಯಕರವಾದ ಮತ್ತು ಸೌಂದರ್ಯದಿಂದ ಕೂಡಿದ ತ್ವಚೆಯನ್ನು ಹೊಂದಲು ಇದು ಸಹಾಯಮಾಡುತ್ತದೆ.

ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣನ್ನು ತಿನ್ನುವು ದರಿಂದ ಮೊಡವೆಗಳು, ಸಣ್ಣ ಸಣ್ಣ ಗುಳ್ಳೆಗಳು, ಚರ್ಮದ ವಯಸ್ಸಾಗವಿಕೆ ಪ್ರಕ್ರಿಯೆ ಹೀಗೆ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ನಿಮ್ಮ ಆಹಾರ ಪದ್ಧತಿಯಲ್ಲಿ ಪರಂಗಿ ಹಣ್ಣನ್ನು ಸೇರಿಸಿ ಕೊಳ್ಳುವುದರಿಂದ ಚರ್ಮಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಸಿಗುತ್ತವೆ ಮತ್ತು ಚರ್ಮ ಒಣಗುವಿಕೆ ಪ್ರಕ್ರಿಯೆ ದೂರವಾಗುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಪಪ್ಪಾಯಿ ಒಳಗೊಂಡಿದೆ ಹಾಗೂ ಇದರ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ.

ಈ ಸಮಸ್ಯೆ ಇದ್ದರೆ ಪರಂಗಿ ಸೇವಿಸಬಾರದು:

ಪರಂಗಿ ಹಣ್ಣಿನಿಂದ ಸಾಕಷ್ಟು ಬೆನಿಫಿಟ್ ಇದ್ದರೂ ಕೂಡ ಕೆಲವೊಬ್ಬರು ಈ ಹಣ್ಣನ್ನು ಸೇವಿಸಬಾರದು.. ಯಾವುದೇ ಅತಿಯಾದರು ಅದರಿಂದ ಅಪಾಯ ತಪ್ಪಿದ್ದಲ್ಲ. ಅದರಂತೆಯೇ ಪರಂಗಿಯೂ ಒಂದು ಅದರ ಒಂದು ರಿಪೋರ್ಟ್ ಇಲ್ಲಿದೆ ನೋಡಿ…

ಎಲ್ಲಾಕ್ಕಿಂತ ಪ್ರಮುಖವಾಗಿ ಅತಿ ಹೆಚ್ಚು ನೈಸರ್ಗಿಕವಾದ ಸಿಹಿ ಅಂಶ ವನ್ನು ಒಳಗೊಂಡ,ಈ ಹಣ್ಣು, ಅಷ್ಟೇ ಪ್ರಮಾಣದ ಆರೋಗ್ಯದ ಲಾಭಗಳನ್ನು ಕೂಡ ಒಳಗೊಂಡಿದೆ ಎಂದರೆ, ತಪ್ಪಾಗಲಾರದು.ಈಗ ವಿಷಯ ಏನೆಂದ್ರೆ ಪ್ರತಿಯೊಬ್ಬರೂ ಕೂಡ,ಈ ಹಣ್ಣನ್ನು ತಿನ್ನುವ ಹಾಗಿಲ್ಲ! ಕೇಳಲು ಅಚ್ಚರಿ ಅನಿಸುತ್ತದೆ ಅಲ್ಲವೇ?
ಆದರೆ ಇದು ನಿಜ,ಈಗಾಗಲೇ ಕೆಲವೊಂದು ಆರೋಗ್ಯ ಸಮಸ್ಯೆ ಗಳಿಂದ ಬಳಲುತ್ತಿರುವವರು, ತಮ್ಮ ಆಹಾರ ಪದ್ಧತಿಯಲ್ಲಿ, ಯಾವುದೇ ಕಾರಣ ಕ್ಕೂ ಪರಂಗಿಹಣ್ಣನ್ನು ಅಥವಾ ಪರಂಗಿ ಕಾಯಿಯನ್ನು ಸೇರಿಸಿಕೊಳ್ಳ ಬಾರದು ಎಂದು ತಜ್ಞರು ಎಚ್ಚರಿಸು ತ್ತಾರೆ. ಹಾಗಾದರೆ ಯಾರವರು? ಈ ಹಣ್ಣಿನಿಂದ ಅವರು ಯಾಕೆ ದೂರ ಉಳಿಯಬೇಕು ಎಂದು ನೋಡೋಣ..

ಪರಂಗಿ ಹಣ್ಣಿನ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಅಷ್ಟೆ ಅಲ್ಲದೆ ಅದರ ಎಲೆಯೂ ಸಾಕಷ್ಟು ಪ್ರಯೋಜನಕಾರಿ ಅಂಶಗಳಿಂದ ಕೂಡಿದೆ. ಪರಂಗಿ ಹಣ್ಣಿನ ಗಿಡ ಎಲೆಗಳನ್ನು ಸೇವಿಸಿದರೆ, ಕೆಂಪು ರಕ್ತ ಕಣಗಳು ವೃದ್ಧಿಯಾಗುತ್ತವೆ. ಇನ್ನು ಯಾವುದೇ ಅತಿಯಾದರು ಅದರಿಂದ ಅಪಾಯ ತಪ್ಪಿದ್ದಲ್ಲ. ಹಾಗೆಯೇ ಪರಂಗಿ ಹಣ್ಣಿನ ಸೇವನೆ ಸಹ. ಪರಂಗಿ ಹಣ್ಣಿನಲ್ಲಿ ವಿಟಮಿನ್​ ಸಿ,ಆ್ಯಂಟಿಆಕ್ಸಿಡೆಂಟ್ಸ್​ ಸಹ ಹೇರಳವಾಗಿದೆ. ಆಹಾರ ಸೇವಿಸಿದ ನಂತರ ಇದನ್ನು ಸೇವಿಸಿದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ, ಹೊಟ್ಟೆ ಹಾಗೂ ಕರುಳಿನಲ್ಲಿರುವ ವಿಷ ಪದಾರ್ಥಗಳನ್ನು ಹೊರ ಹಾಕುವ ಕೆಲಸವನ್ನೂ ಪರಂಗಿ ಹಣ್ಣು ಮಾಡುತ್ತದೆ.

ಪರಂಗಿ ಹಣ್ಣಿನಲ್ಲಿ ಪ್ಲೆವನಾಯ್ಡ್ಸ್​, ಪೊಟಾಷಿಯಂ, ಮಿನರಲ್ಸ್​, ಕಾಪರ್​, ಮಗ್ನಿಷಿಯಂ, ಫೈಬರ್​ನಂತಹ ಅಂಶಗಳು ಹೇರಳವಾಗಿರುತ್ತವೆ. ಡೆಂಗಿ ಜ್ವರದಿಂದ ಬಳಲುತ್ತಿರುವವರ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ ಪರಂಗಿ ಹಣ್ಣು. ಪರಂಗಿ ಹಣ್ಣಿನಲ್ಲಿ ಕ್ಯಾಲೋರಿ ತುಂಬಾ ಕಡಿಮೆ ಇರುತ್ತದೆ. ಹೀಗಾಗಿ ಇದನ್ನು ಹೆಚ್ಚಾಗಿ ಸೇವಿಸಿದರೂ ತೂಕ ಹೆಚ್ಚಾಗುವುದಿಲ್ಲ. ಅಲ್ಲದೆ ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೃದಯಕ್ಕೆ ರಕ್ತ ಸರಿಯಾಗಿ ಸಂಚರಿಸುವಂತೆ ಮಾಡುತ್ತದೆ.

ಮೂತ್ರಪಿಂಡದಲ್ಲಿರುವ ಕಲ್ಲುಗಳು ಇರುವವರಿಗೆ ಪರಂಗಿ ಹಣ್ಣು ಸರಿಯಾದ ಮನೆ ಮದ್ದು. ಕ್ರಮವಾಗಿ ಪರಂಗಿ ಹಣ್ಣು ಸೇವಿಸಿದರೆ ಕಿಡ್ನಿ ಸ್ಟೋನ್ ಸಮಸ್ಯೆ ದೂರವಾಗುತ್ತದೆಯಂತೆ. ಕ್ಯಾನ್ಸರ್​ ವಿರುದ್ಧ ಹೋರಾಡುವ ಗುಣ ಸಹ ಈ ಪರಂಗಿ ಹಣ್ಣಿಗಿದೆ. ಇದರಲ್ಲಿ ಬಿಟಾ ಕೆರಟಿನ್ ಇದ್ದು, ಇದು ಕ್ಯಾನ್ಸರ್ ವೈರಸ್​ನಿಂದ ಹೋರಾಡುವ ಗುಣ ಹೊಂದಿದ್ದು, ಗರ್ಭಕೋಶದ ಕ್ಯಾನ್ಸರ್​ ವಿರುದ್ಧ ಹೋರಾಡುತ್ತದೆ

ಪರಂಗಿ ಹಣ್ಣು ಹೆಚ್ಚಾಗಿ ಸೇವಿಸಿದರೆ ಅರ್ಜೀಣದ ಸಮಸ್ಯೆ ಉಂಟಾಗುತ್ತದೆ. ಮಿತಿ ಮೀರಿ ಸೇವಿಸಿದರೆ ದೇಹದಲ್ಲಿ ಅಲರ್ಜಿ ಸಹ ಆಗುತ್ತದೆ. ಅನ್ನ ನಾಳದಲ್ಲಿ ಹುಣ್ಣುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಪರಂಗಿ ಹಣ್ಣು ದಿನವೂ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತುಂಬಾ ವೇಗವಾಗಿ ತಗ್ಗಿ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಗರ್ಭಿಣಿಯರು ಈ ಹಣ್ಣನ್ನು ತಿನ್ನಬಾರದು.

ಇದರಿಂದ ದೇಹದ ಉಷ್ಣತೆ ಹೆಚ್ಚಾಗಿ ದೇಹದ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುತ್ತಾರೆ ಹಿರಿಯರು. ಗರ್ಭಪಾತ ಆಗುವ ಸಂಭವ ಹೆಚ್ಚು. ವಾರಕ್ಕೆ 2-3 ಸಲ ಮಾತ್ರ ಈ ಹಣ್ಣು ತಿನ್ನಬೇಕು. ನಿತ್ಯ ಈ ಹಣ್ಣನ್ನು ಸೇವಿಸಿದರೆ, ದೇಹದ ಚರ್ಮದ ಬಣ್ಣ ಬದಲಾಗುತ್ತದೆಯಂತೆ. ಕಣ್ಣಿನ ಸಮಸ್ಯೆ ಸಹ ಉಂಟಾಗಬಹುದು. ಸೂಕ್ಷ್ಮ ಆರೋಗ್ಯ ಹೊಂದಿರುವವರು ಪರಂಗಿ ಹಣ್ಣನ್ನು ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಎಲ್ಲಾ ಋತುಗಳು ಬಹಳ ಸುಲಭವಾಗಿ ಲಭ್ಯವಿರುವ ಹಣ್ಣುಗಳಲ್ಲಿ ಪರಂಗಿಹಣ್ಣು ಕೂಡ ಒಂದು. ಪರಂಗಿ ಹಣ್ಣಿನ ಸೇವನೆಯು ಉದರ ಸಂಬಂಧಿತ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವುದರ ಜೊತೆಗೆ ತೂಕ ಇಳಿಕೆಯಲ್ಲಿಯೂ ಪರಿಣಾಮಕಾರಿ ಆಗಿದೆ. ಇದಲ್ಲದೆ, ಪರಂಗಿ ಹಣ್ಣಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಇದು ನಮ್ಮನ್ನು ಹಲವು ಆರೋಗ್ಯ ಸಮಸ್ಯೆಗಳಿಂದಲೂ ದೂರ ಉಳಿಯುವಂತೆ ಮಾಡುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಪರಂಗಿ ಹಣ್ಣು ಕೆಲವರಿಗೆ ಬಹಳ ಅಪಾಯಕಾರಿ ಎಂದು ಸಾಬೀತು ಪಡಿಸಬಹುದು.

ಅದರಲ್ಲೂ ನಾಲ್ಕು ಸಂದರ್ಭಗಳಲ್ಲಿ ಅಪ್ಪಿತಪ್ಪಿಯೂ ಪರಂಗಿ ಹಣ್ಣನ್ನು ತಿನ್ನಲೇಬಾರದು ಎಂದು ಹೇಳಲಾಗುತ್ತದೆ. ಮೆಗ್ನೀಸಿಯಮ್, ಫೈಬರ್, ವಿಟಮಿನ್ಸ್, ಫೈಬರ್ ನಂತಹ ಅನೇಕ ಪೋಷಕಾಂಶಗಳ ಆಗರವಾಗಿರುವ ಪರಂಗಿಹಣ್ಣು ಆರೋಗ್ಯಕ್ಕೆ ಅತ್ಯುತ್ತಮವಾದರೂ ಕೂಡ, ಗರ್ಭಿಣಿಯರಿಗೆ ಪಪ್ಪಾಯಿ ಸೇವನೆ ಒಳ್ಳೆಯದಲ್ಲ. ಪರಂಗಿಹಣ್ಣಿನಲ್ಲಿ ಕಂಡು ಬರುವ ಪಾಪೈನ್ ದೇಹದಲ್ಲಿನ ಜೀವಕೋಶ ಪೊರೆಯನ್ನು ಹಾನಿಗೊಳಿಸುತ್ತದೆ. ಹಾಗಾಗಿ, ಗರ್ಭಿಣಿಯರು ಅಪ್ಪಿತಪ್ಪಿಯೂ ಪರಂಗಿಹಣ್ಣನ್ನು ತಿನ್ನಲೇಬಾರದು.

ಕೆಲವರು ಪರಂಗಿ ಹಣ್ಣನ್ನು ತಿಂದು ಸ್ವಲ್ಪ ಹೊತ್ತಿನಲ್ಲೇ ಔಷಧಿ ಸೇವಿಸುತ್ತಾರೆ. ಆದರೆ, ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಲಿದೆ. ಪಪ್ಪಾಯಿ ಮತ್ತು ಔಷಧಿಗಳ ಕಾಕ್ಟೈಲ್ ದೇಹದಲ್ಲಿ ರಕ್ತವನ್ನು ತೆಳುವಾಗಿಸುತ್ತದೆ. ಹಾಗಾಗಿ, ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಿಂದ ರಕ್ತಸ್ರಾವವಾಗುವ ಅಪಾಯ ಹೆಚ್ಚು ಎಂದು ಹೇಳಲಾಗುತದೆ. ಕೆಲವರಿಗೆ ಪರಂಗಿ ಹಣ್ಣಿನ ಸೇವನೆಯಿಂದ ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಇದಲ್ಲದೆ, ಪರಂಗಿ ಹಣ್ಣಿನ ಸೇವನೆಯಿಂದ ಕೆಲವರಲ್ಲಿ ಕೆಂಪು ದದ್ದುಗಳು, ತಲೆನೋವು, ತಲೆತಿರುಗುವಿಕೆ ಮತ್ತು ಊತ ಉಂಟಾಗುತ್ತದೆ. ಇಂತಹವರು ಕೂಡ ಪರಂಗಿ ಹಣ್ಣನ್ನು ತಿನ್ನಬಾರದು.

ಲೋ ಶುಗರ್ ಸಮಸ್ಯೆ ಇರುವವರಿಗೂ ಕೂಡ ಪರಂಗಿ ಹಣ್ಣಿನ ಸೇವನೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ವಾಸ್ತವವಾಗಿ, ಮಧುಮೇಹ ಸಮಸ್ಯೆ ಇರುವವರಿಗೆ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಿಸಲು ಪರಂಗಿಹಣ್ಣನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಲೋ ಶುಗರ್ ಸಮಸ್ಯೆ ಇರುವವರು ಪರಂಗಿ ಸೇವಿಸುವುದರಿಂದ ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು.

ಈಗಾಗಲೇ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು, ವಿಟಮಿನ್ ಸಿ ಅಂಶ ಹೆಚ್ಚಿರುವ ಹಣ್ಣು-ತರಕಾರಿಗಳಿಂದ ದೂರವಿರ ಬೇಕಂತೆ, ಇದಕ್ಕೆ ಪಪ್ಪಾಯಿ ಹಣ್ಣು ಕೂಡ ಹೊರ ತಲ್ಲ, ಈ ಹಣ್ಣಿನ ಲ್ಲಿಯೂ ವಿಟಮಿನ್ ಸಿ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿದೆ.

ಇದಕ್ಕೆ ಕಾರಣ ಇಷ್ಟೇ,ತಜ್ಞರು ಹೇಳುವ ಪ್ರಕಾರ ಯಾವುದೇ ಬಗೆಯ ವಿಟಮಿನ್ ಸಿ ಅಂಶ ಹೆಚ್ಚಿರುವ ಹಣ್ಣು-ತರಕಾರಿಗಳು, ಕಿಡ್ನಿಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಪ್ರಮಾಣವನ್ನು ಹೆಚ್ಚು ಮಾಡುತ್ತದೆ, ಇದರಿಂದ ಕಿಡ್ನಿಯಲ್ಲಿ ಈಗಾಗಲೇ ಸ್ಟೋನ್ ಸಮಸ್ಯೆ ಇರುವವರಿಗೆ, ಸಮಸ್ಯೆ ಮತ್ತಷ್ಟು ಉಲ್ಭಣವಾಗುವ ಸಾಧ್ಯತೆ ಇರುತ್ತದೆ

ಅನಿಯಮಿತ ಹೃದಯದ ಬಡಿತದ ಸಮಸ್ಯೆ ಇದ್ದವರು, ಈಗಾಗಲೇ ಅಧಿಕ ರಕ್ತದೊತ್ತಡಕ್ಕೆ ಮಾತ್ರೆ ತೆಗೆದು ಕೊಳ್ಳುತ್ತಿರುವವರು, ಹೃದಯದ ರಕ್ತ ನಾಳದ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಪಾರ್ಶ್ವವಾಯು ದಂತಹ ಸಮಸ್ಯೆ ಇರುವವರು, ಪರಂಗಿ ಅಥವಾ ಪಪ್ಪಾಯಿ ಹಣ್ಣಿನಿಂದ ದೂರವಿದ್ದರೆ ಒಳ್ಳೆಯದು.

ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು, ಪಪ್ಪಾಯಿ ಹಣ್ಣನ್ನು ತಿನ್ನಬೇಕೋ ಬೇಡವೋ? ಎನ್ನುವ ಗೊಂದಲವಿದೆ..ಯಾಕೆಂದ್ರೆ ಈ ಹಣ್ಣಿನಲ್ಲಿ ವಿಟಮಿನ್ನುಗಳು, ಆಕ್ಸಿಡೆಂಟುಗಳು, ನಾರಿನಾಂಶ ಗಳು, ನೈಸರ್ಗಿಕ ವಿರೇ ಚಕವಾಗಿ ಕಾರ್ಯನಿರ್ವಹಿಸಿ ಜೀರ್ಣಕ್ರಿಯೆ ಯನ್ನು ಸುಲಭ ಗೊಳಿಸುತ್ತವೆ.
ಆದರೆ ಶುಗರ್ ಕಂಟ್ರೋಲ್‍ಗೆ ಸಿಗದಿದ್ದವರು, ಆದಷ್ಟು ಈ ಹಣ್ಣಿ ನಿಂದ ದೂರವಿದ್ದರೆ ಒಳ್ಳೆಯದು.ಯಾಕೆಂದ್ರೆ ಈ ಹಣ್ಣಿನಿಂದ ಕೂಡ ರಕ್ತದಲ್ಲಿ ಸಕ್ಕರೆಮಟ್ಟ ನಿಧಾನಕ್ಕೆ ಏರಿಕೆ ಆಗುವ ಸಾಧ್ಯತೆ ಇರುತ್ತದೆ.

ಇನ್ನೂ ಪಪ್ಪಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದನ್ನು ಸೇವಿಸುವುದರಿಂದ ಅನೇಕ ರೋಗಗಳು ತಕ್ಷಣವೇ ಗುಣವಾಗುತ್ತವೆ. ಆದರೆ ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಪಪ್ಪಾಯಿಯೊಂದಿಗೆ ಸೇವಿಸಬಾರದು. ಏಕೆಂದರೆ ಇದು ದೇಹಕ್ಕೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ. ಪಪ್ಪಾಯಿಯೊಂದಿಗೆ ಕರಿದ ಪದಾರ್ಥಗಳನ್ನು ತಿನ್ನಬಾರದು. ಇವೆರಡನ್ನು ಒಟ್ಟಿಗೆ ತಿಂದರೆ ಹೊಟ್ಟೆಯಲ್ಲಿ ಉರಿ ತರಹದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪಪ್ಪಾಯಿಯೊಂದಿಗೆ ಟೊಮೆಟೊವನ್ನು ಕೂಡ ಸೇವಿಸಬಾರದು. ಬದಲಿಗೆ ಪಪ್ಪಾಯಿ ತಿಂದ ಸ್ವಲ್ಪ ಹೊತ್ತಿನ ನಂತರವಷ್ಟೇ ಟೊಮೆಟೊ ತಿನ್ನಬಹುದು. ಇಲ್ಲದಿದ್ದರೆ ನಿಮಗೆ ಅಸಿಡಿಟಿ ಸಮಸ್ಯೆ ಉಂಟಾಗಬಹುದು. ನಿಂಬೆಯೊಂದಿಗೆ ಪಪ್ಪಾಯಿಯನ್ನು ತಿನ್ನಬೇಡಿ. ಇದಲ್ಲದಿದ್ದರೆ ಇದರಿಂದ ನೀವು ರಕ್ತಹೀನತೆ ಮತ್ತು ಹಿಮೋಗ್ಲೋಬಿನ್ನಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಬಹುದು.

ಮೊಸರು ಮತ್ತು ಪಪ್ಪಾಯಿ ಎಂದಿಗೂ ಉತ್ತಮವಾದ ಕಾಂಬಿನೇಷನ್ ಅಲ್ಲ. ಹಾಗಾಗಿ ಇವೆರಡನ್ನೂ ಒಟ್ಟಿಗೆ ತಿನ್ನಬಾರದು. ಇದರಿಂದ ಎಂಜೈಮ್ ಪ್ಯಾಪಿನ್, ಅಲರ್ಜಿಯಂತಹ ಸಮಸ್ಯೆಗಳು ಉಂಟಾಗಬಹುದು ಎಂದು ವರದಿಗಳು ಹೇಳಿವೆ..

Tags: DiabetesHealth TipskannadanewsKarnatakalifestylepapayaVijayasakshivijayasakshinews
ShareSendShare
Previous Post

ಅರೆಕಾಲಿಕ ಉಪನ್ಯಾಸಕರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ: ಗೌರವಧನ ಭಾರೀ ಹೆಚ್ಚಳ!

Next Post

ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಹಸಿರು ಮಾರ್ಗದಲ್ಲಿ ಇಂದಿನಿಂದ ರೈಲು ಸೇವೆಯಲ್ಲಿ ವ್ಯತ್ಯಯ!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಹಸಿರು ಮಾರ್ಗದಲ್ಲಿ ಇಂದಿನಿಂದ  ರೈಲು ಸೇವೆಯಲ್ಲಿ ವ್ಯತ್ಯಯ!

ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಹಸಿರು ಮಾರ್ಗದಲ್ಲಿ ಇಂದಿನಿಂದ ರೈಲು ಸೇವೆಯಲ್ಲಿ ವ್ಯತ್ಯಯ!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

October 31, 2026
ಕುಡಿಯುವ ನೀರಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ? ಬಾಟಲಿ ಮೇಲಿನ ಗಡುವು ದಿನಾಂಕದ ಹಿಂದಿನ ಅಸಲಿ ಕಾರಣವೇನು?

ಕುಡಿಯುವ ನೀರಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ? ಬಾಟಲಿ ಮೇಲಿನ ಗಡುವು ದಿನಾಂಕದ ಹಿಂದಿನ ಅಸಲಿ ಕಾರಣವೇನು?

October 31, 2026
‘ಇದು ಸೂಕ್ತ ಸಮಯವಲ್ಲ’: ತಮಿಳುನಾಡು ಸಿಎಂ ವಿಜಯ್ ಭೇಟಿ ಮುಂದೂಡಲು ಡಿಕೆ ಶಿವಕುಮಾರ್ ಮನವಿ

ಸಕ್ಕರೆಗೆ 50 ರೂ. ಎಂಎಸ್‌ಪಿ ನಿಗದಿಗೆ ಸಿಎಂ ಒತ್ತಾಯ; ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ!

October 31, 2026
ಬಾಲಿವುಡ್‌ಗೆ ಮತ್ತೊಂದು ಆಘಾತ; ಖ್ಯಾತ ನಿರ್ದೇಶಕ ಸಂಜಯ್ ಗುಪ್ತಾ ದಿಢೀರ್ ನಿಧನ!

ಬಾಲಿವುಡ್‌ಗೆ ಮತ್ತೊಂದು ಆಘಾತ; ಖ್ಯಾತ ನಿರ್ದೇಶಕ ಸಂಜಯ್ ಗುಪ್ತಾ ದಿಢೀರ್ ನಿಧನ!

October 31, 2026

Recent News

ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

October 31, 2026
ಕುಡಿಯುವ ನೀರಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ? ಬಾಟಲಿ ಮೇಲಿನ ಗಡುವು ದಿನಾಂಕದ ಹಿಂದಿನ ಅಸಲಿ ಕಾರಣವೇನು?

ಕುಡಿಯುವ ನೀರಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ? ಬಾಟಲಿ ಮೇಲಿನ ಗಡುವು ದಿನಾಂಕದ ಹಿಂದಿನ ಅಸಲಿ ಕಾರಣವೇನು?

October 31, 2026
‘ಇದು ಸೂಕ್ತ ಸಮಯವಲ್ಲ’: ತಮಿಳುನಾಡು ಸಿಎಂ ವಿಜಯ್ ಭೇಟಿ ಮುಂದೂಡಲು ಡಿಕೆ ಶಿವಕುಮಾರ್ ಮನವಿ

ಸಕ್ಕರೆಗೆ 50 ರೂ. ಎಂಎಸ್‌ಪಿ ನಿಗದಿಗೆ ಸಿಎಂ ಒತ್ತಾಯ; ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ!

October 31, 2026
ಬಾಲಿವುಡ್‌ಗೆ ಮತ್ತೊಂದು ಆಘಾತ; ಖ್ಯಾತ ನಿರ್ದೇಶಕ ಸಂಜಯ್ ಗುಪ್ತಾ ದಿಢೀರ್ ನಿಧನ!

ಬಾಲಿವುಡ್‌ಗೆ ಮತ್ತೊಂದು ಆಘಾತ; ಖ್ಯಾತ ನಿರ್ದೇಶಕ ಸಂಜಯ್ ಗುಪ್ತಾ ದಿಢೀರ್ ನಿಧನ!

October 31, 2026
Vijaya Sakshi News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

October 31, 2026
ಕುಡಿಯುವ ನೀರಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ? ಬಾಟಲಿ ಮೇಲಿನ ಗಡುವು ದಿನಾಂಕದ ಹಿಂದಿನ ಅಸಲಿ ಕಾರಣವೇನು?

ಕುಡಿಯುವ ನೀರಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ? ಬಾಟಲಿ ಮೇಲಿನ ಗಡುವು ದಿನಾಂಕದ ಹಿಂದಿನ ಅಸಲಿ ಕಾರಣವೇನು?

October 31, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper
No Result
View All Result
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.