ಬೆಂಗಳೂರು: ಕೆಂಪೇಗೌಡ ಏರ್ಪೋರ್ಟ್ ಕ್ಯಾಂಟಿನ್ ಆಹಾರದಲ್ಲಿ ಹುಳು ಪತ್ತೆಯಾಗಿದೆ. ಹೌದು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಗೆ ನೀಡುವ ಆಹಾರದಲ್ಲಿ ಹುಳು ಪತ್ತೆಯಾದ ಆರೋಪವಿದ್ದು, ಜತೆಗೆ, ಕ್ಯಾಂಟೀನ್ ಆಹಾರ ಸಾಮಗ್ರಿಗಳ ಮೇಲೆ ಇಲಿಗಳು ಓಡಾಡುತ್ತಿರುವುದೂ ಪತ್ತೆಯಾಗಿದೆ.
Advertisement
ಆಹಾರದಲ್ಲಿ ಹುಳ ಇರುವುದು ಮತ್ತು ಆಹಾರ ಸಾಮಗ್ರಿಗಳ ಮೇಲೆ ಇಲಿ ಓಡಾಡುತ್ತಿರುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.
ಈ ಕ್ಯಾಂಟೀನ್ ನಲ್ಲಿ ಸ್ವಚ್ಛತೆ ಇಲ್ಲ. ಆಹಾರದ ಗುಣಮಟ್ಟವೂ ಕಳಪೆಯಾಗಿದೆ ಎಂದು ವಿಡಿಯೋ ಹಂಚಿಕೊಂಡಿರುವ ಸಿಬ್ಬಂದಿ ದೂರಿದ್ದಾರೆ.