HomeGadag Newsಉಪ ಕಾರಾಗೃಹದಲ್ಲಿ ರಕ್ಷಾ ಬಂಧನ

ಉಪ ಕಾರಾಗೃಹದಲ್ಲಿ ರಕ್ಷಾ ಬಂಧನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ರಕ್ಷಾ ಬಂಧನ ಅಣ್ಣ-ತಂಗಿಯರ ಬಾಂಧವ್ಯದ ಕೊಂಡಿಯಾಗಿದ್ದು, ಸರ್ವಕಾಲಕ್ಕೂ ಸಹೋದರಿಯರನ್ನು ರಕ್ಷಣೆ ಮಾಡುವ ಜವಾಬ್ದಾರಿ ಸಹೋದರರದ್ದಾಗಿದೆ. ತಿಳಿದೋ ತಿಳಿಯದೆಯೋ ಕಾರಾಗೃಹದಲ್ಲಿರುವ ಬಂಧಿಗಳಾಗಿದ್ದು, ನಿಮ್ಮ ತಪ್ಪಿನ ಅರಿವು ನಿಮಗಾಗಿದೆ. ಸಹೋದರಿಯರ ಬಾಂಧವ್ಯದ ಕೊರತೆಯ ಅರಿವು ಮೂಡಿಸಲು ನಮ್ಮ ಸಂಘಟನೆ ಕಳೆದ ೨೫ ವರ್ಷಗಳಿಂದಲೂ ಮಹಿಳಾ ಘಟಕದ ಕಾರ್ಯಕರ್ತರ ಮೂಲಕ, ರಕ್ಷಾಬಂಧನವನ್ನು ಈ ಕಾರಾಗೃಹದಲ್ಲಿ ನಡೆಸಿ ಅದರ ಮಹತ್ವ ತಿಳಿಸಿ ಕೊಡುತ್ತಿದೆ ಎಂದು ಶ್ರೀ ಯಲಗೂರೇಶ್ವರ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ಮಹಿಳಾ ಮತ್ತು ಮಕ್ಕಳ ರಕ್ಷಣಾ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಪೂಜಾ ಎಂ.ಬೇವೂರ್ ಹೇಳಿದರು.

ನಗರದ ಜಿಲ್ಲಾ ಉಪಕಾರಾಗೃಹದಲ್ಲಿ ನಡೆದ ರಕ್ಷಾಬಂಧನ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ನಟರಂಗ ಸಂಸ್ಥೆಯ ಅದ್ಯಕ್ಷ ಸೋಮಶೇಖರ ಚಿಕ್ಕಮಠ ಮಾತನಾಡಿ, ಪ್ರತಿಯೊಬ್ಬ ಮನುಷ್ಯನ ಮನಸ್ಸು ಮತ್ತು ವಿಚಾರಗಳು ಹತೋಟಿಯಲ್ಲಿದ್ದಾಗ ಯಾವುದೇ ಅಪರಾಧಗಳು ಆಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರಾಗೃಹದ ಜೈಲರ್ ಸುನಂದಾ ಎಸ್.ಐ. ಮಾತನಾಡಿದರು. ಈ ಸಂದರ್ಭದಲ್ಲಿ ಪುಷ್ಪ ಪತ್ತಾರ್, ಶ್ರವಣಾ ಬೇವೂರ್, ಪಾರ್ವತಿ ಅಣ್ಣಿಗೇರಿ, ಪೂಜಾ ಹಡಪದ್, ಆಕಾಶ್ ಕಟ್ಟಿಮನಿ, ಕೌಶಲ್ಯಬಾಯಿ ಬದಿ, ಅಕ್ಬರ್ ಅಲಿ ಬೇಗ್, ಕೌಸರ ಬಾನು ಲಕ್ಕುಂಡಿ, ಮಮತಾಜ್ ಖಾದರ್‌ನವರ್, ಪಾರ್ವತಿ ಬಳ್ಳಾರಿ, ಸಾವಿತ್ರಿ ಶ್ಯಾವಿ, ಶೈನಾಜ್ ಆಲೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img