HomeGadag Newsಎದೆಹಾಲು ಶಿಶುವಿನ ಆರೋಗ್ಯಕ್ಕೆ ಪೂರಕ : ಡಾ. ಶಿಲ್ಪಾ ಪವಾಡಶೆಟ್ಟರ

ಎದೆಹಾಲು ಶಿಶುವಿನ ಆರೋಗ್ಯಕ್ಕೆ ಪೂರಕ : ಡಾ. ಶಿಲ್ಪಾ ಪವಾಡಶೆಟ್ಟರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಮಗುವಿಗೆ ಹಾಲುಣಿಸುವ ತಾಯಂದಿರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಮತ್ತು ಅವರ ದೈಹಿಕ ಆರೋಗ್ಯವನ್ನು ಮರಳಿ ತರುತ್ತದೆ. ಮಗುವಿಗೆ ಉತ್ತಮ ಪೋಷಣೆಯನ್ನು ನೀಡುತ್ತದೆ ಮತ್ತು ಹಾಲುಣಿಸುವ ತಾಯಂದಿರಿಗೆ ಸ್ತನ್ಯಪಾನವು ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ತಜ್ಞ ವೈದ್ಯರಾದ ಡಾ. ಶಿಲ್ಪಾ ಪವಾಡಶೆಟ್ಟರ ತಾಯಂದಿರಿಗೆ ಸಲಹೆ ನೀಡಿದರು.

ಇನ್ನರ್‌ವೀಲ್ ಕ್ಲಬ್ ಹಾಗೂ ರೋಟರಿ ಕ್ಲಬ್ ಗದಗ-ಬೆಟಗೇರಿ ಸಹಯೋಗದಲ್ಲಿ ನಗರದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸ್ತನ್ಯಪಾನದ ಮಹತ್ವದ ಕುರಿತು ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾದ ಜಿಲ್ಲಾ ಶಸ್ತçಚಿಕಿತ್ಸಕ ಡಾ. ಬಿ.ಸಿ ಕರಿಗೌಡರ ಮಾತನಾಡಿ, ಶಿಶುಗಳು ಮತ್ತು ಚಿಕ್ಕ ಮಕ್ಕಳ ಉಳಿವು, ಪೋಷಣೆ ಮತ್ತು ಬೆಳವಣಿಗೆ ಮತ್ತು ತಾಯಂದಿರ ಆರೋಗ್ಯಕ್ಕೆ ತಾಯಂದಿರು ಶಿಶುಗಳಿಗೆ ಸ್ತನ್ಯಪಾನ ಮಾಡಿಸಬೇಕು. ಎದೆ ಹಾಲು ನವಜಾತ ಶಿಶುಗಳನ್ನು ಸೋಂಕಿನಿಂದ ರಕ್ಷಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಮತ್ತು ಅತ್ಯುತ್ತಮ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ ಎಂದು ವಿವರಿಸಿದರು.

ಇನ್ನೋರ್ವ ತಜ್ಞ ವೈದ್ಯರಾದ ಡಾ. ಸನ ಮಾಲ್ದಾರ್ ಮಾತನಾಡಿ, ತಾಯಂದಿರು ಯಾವ ರೀತಿ ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಆರ್.ಬಿ. ಉಪ್ಪಿನ ಸರ್ವರನ್ನು ಸ್ವಾಗತಿಸಿದರು. ಇನ್ನರ್ ವೀಲ್ ಕ್ಲಬ್ ಹಾಗೂ ರೋಟರಿ ಕ್ಲಬ್‌ವತಿಯಿಂದ ಹಾಲುಣಿಸುವ ತಾಯಂದರಿಗೆ ಪೌಷ್ಠಿಕ ಆಹಾರವನ್ನು ವಿತರಿಸಲಾಯಿತು.

ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷರಾದ ನಾಗರತ್ನ ಸಂದರ್ಭೋಚಿತವಾಗಿದ ಮಾತನಾಡಿದರು. ರೊ. ಶ್ರೀಧರ ಸುಲ್ತಾನಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರೋಟರಿ ಸಂಸ್ಥೆಯ ಸದಸ್ಯರಾದ ರೊ. ಶಿವಾಚಾರ್ಯ ಹೊಸಳ್ಳಿಮಠ, ರೊ. ಶ್ರೀಧರ ಧರ್ಮಾಯತ, ಇನ್ನರ್‌ವೀಲ್ ಕ್ಲಬ್‌ನ ಸದಸ್ಯರಾದ ಮೀನಾಕ್ಷಿ ಕೊರವಣ್ಣವರ, ಸುಮಾ ಪಾಟೀಲ್, ಮಾರ್ಥ ಸಿಸ್ಟರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img